ಗೋಕಾಕ:ಕೊರೊನಾ ವಾರಿಯರ್ಸ್‍ಗಳ ಸೇವೆ ದೇಶ ಕಾಯುವ ಸೈನಿಕರಷ್ಟೆ ಪವಿತ್ರವಾಗಿದೆ : ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು
ಕೊರೊನಾ ವಾರಿಯರ್ಸ್‍ಗಳ ಸೇವೆ ದೇಶ ಕಾಯುವ ಸೈನಿಕರಷ್ಟೆ ಪವಿತ್ರವಾಗಿದೆ : ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜೂ 2 :
ಕೊರೊನಾ ವಾರಿಯರ್ಸ್‍ಗಳ ಸೇವೆ ದೇಶ ಕಾಯುವ ಸೈನಿಕರಷ್ಟೆ ಪವಿತ್ರವಾದದ್ದಾಗಿದೆ, ಇಂತಹ ಗಂಭೀರ ಸನ್ನಿವೇಶದಲ್ಲಿ ತಾವೂಗಳು ಸಲ್ಲಿಸುತ್ತಿರುವ ಸೇವೆ ದೇವರ ಪೂಜೆಗಿಂತಲೂ ಶ್ರೇಷ್ಠವಾದದ್ದು ಎಂದು ಸ್ಥಳೀಯ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಪೀಠಾಧಿಕಾರಿಗಳಾದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.
ಅವರು ಬುಧವಾರ ಪಟ್ಟಣದ ವಿಠ್ಠಲ ಮಂದಿರದಲ್ಲಿ ಕೊರೊನಾ ವಾರಿಯರ್ಸ್‍ಗಳಿಗೆ ಏರ್ಪಡಿಸಿದ್ದ ಗೌರವ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಆಶಿರ್ವಚನ ನೀಡಿದರು.
ಸ್ಥಳೀಯ ಯುವ ಮುಖಂಡರಾದ ಶಿವಪುತ್ರ ಕೊಗನೂರ ಅವರು ತಮ್ಮ ಜನ್ಮದಿನದ ನಿಮಿತ್ತವಾಗಿ ಕೋವಿಡ್-19ರ ಸಮಯದಲ್ಲಿ ಅಸ್ಮರಣಿಯ ಸೇವೆ ಸಲ್ಲಿಸುತ್ತಿರುವ ಪೆÇಲೀಸ ಸಿಬ್ಬಂದಿ, ಪುರಸಭೆ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯಕೀಯ ಮತ್ತು ಮಾಧ್ಯಮ/ಪತ್ರಕರ್ತ ಸಿಬ್ಬಂದಿಗಳಿಗೆ ಸನ್ಮಾನ ಸಮಾರಂಭ ಏರ್ಪಡಿಸಿದ್ದರು. ಈ ಸಮಾರಂಭದಲ್ಲಿ ಭಾಗವಹಿಸಿದ್ದ ಎಲ್ಲಾ ಕೊರೊನಾ ವಾರಿಯರ್ಸ್‍ಗಳಿಗೆ ಗೌರವ ಸಮರ್ಪನೆ ಸಲ್ಲಿಸಲಾಯಿತು.
ಹೊಸಮಠದ ವಿರೂಪಾಕ್ಷ ದೇವರು, ಶಾಸಕ ರಮೇಶ ಜಾರಕಿಹೊಳಿ ಅವರ ಆಪ್ತ ಸಹಾಯಕ ಸುರೇಶ ಸನದಿ, ಹಿರಿಯರಾದ ಶಂಕರ ಹತ್ತರವಾಟ, ರಾಮಣ್ಣಾ ಹುಕ್ಕೇರಿ, ಸಿಪಿಐ. ಶ್ರೀಶೈಲ ಬ್ಯಾಕೋಡ, ಪಿ.ಎಸ್.ಐ ಎಸ್.ಆರ್.ಖೋತ, ಮಡಿವಾಳಪ್ಪ ಮುಚಳಂಬಿ, ಮಾರುತಿ ವಿಜಯನಗರ, ಪ.ಪಂ. ಮುಖ್ಯಾಧಿಕಾರಿ ಕೆ.ಬಿ.ಪಾಟೀಲ, ಡಾ. ಪ್ರವೀಣ ಕರಗಾವಿ, ರಮೇಶ ತುಕ್ಕಾನಟ್ಟಿ ಭಾಗವಹಿಸಿದ್ದರು.