ಅಥಣಿ:ಫ್ರಂಟ್ ಲೈನ್ ವಾರಿಯರ್ಸ್ ಪತ್ರಕರ್ತರಿಗೆ ಸರ್ಕಾರ ಪ್ಯಾಕೇಜ್ ಘೋಷಿಸಬೇಕು : ಅಸ್ಲಮ್ ನಾಲಬಂದ,
ಫ್ರಂಟ್ ಲೈನ್ ವಾರಿಯರ್ಸ್ ಪತ್ರಕರ್ತರಿಗೆ ಸರ್ಕಾರ ಪ್ಯಾಕೇಜ್ ಘೋಷಿಸಬೇಕು : ಅಸ್ಲಮ್ ನಾಲಬಂದ
ನಮ್ಮ ಬೆಳಗಾವಿ ಇ – ವಾರ್ತೆ, ಅಥಣಿ ಜೂ 4 :
ಕೊರೋನಾದಂತ ಸಂಕಷ್ಟದ ಸಮಯದಲ್ಲಿ ತಮ್ಮ ಜೀವದ ಹಂಗು ತೊರೆದು ಕೊರೋನಾ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಿಖರ ವರದಿ ಮಾಡುತ್ತಿರುವ ಫ್ರಂಟ್ ಲೈನ್ ವಾರಿಯರ್ಸ್ ಪತ್ರಕರ್ತರಿಗೆ ಇಂದು ನನ್ನ ಕೈಲಾದ ಸಹಾಯ ಮಾಡಿ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡುತ್ತಿರುವುದಾಗಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಅಸ್ಲಮ್ ನಾಲಬಂದ ಹೇಳಿದರು
ಅವರು ಪಟ್ಟಣದಲ್ಲಿರುವ ಅವರ ನಿವಾಸದಲ್ಲಿ ಪತ್ರಕರ್ತರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾತನಾಡಿದ ಅವರು ಪತ್ರಕರ್ತರು ಕೊರೋನಾ ಸಂದರ್ಭದಲ್ಲಿ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ಜಾಗ್ರತೆ ಮುಖ್ಯ ಎಂದು ಜನರಲ್ಲಿ ದೈರ್ಯ ತುಂಬುವ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ಸರ್ಕಾರ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು
ಪತ್ರಕರ್ತರಿಗೆ ವಿತರಿಸಿರುವ ಕಿಟ್ ನಲ್ಲಿ 5 ಕೆಜಿ ಅಕ್ಕಿ, 5 ಕೆಜಿ ಗೋಧಿ ಹಿಟ್ಟು, 3 ಕೆಜಿ, ಸಕ್ಕರೆ, 2 ಕೆಜಿ ರವಾ,1 ಕೆಜಿ ಅವಲಕ್ಕಿ,1ಕಜಿ ಶೇಂಗಾ,1 ಕೆಜಿ ಸಾಬುದಾನಿ, 250 ಗ್ರಾಂ ಚಹಾ ಪುಡಿ,1 ಕೆಜಿ ಅಡುಗೆ ಎಣ್ಣೆ, ಸೇರಿದಂತೆ ಇನ್ನಿತರ ಒಂದು ತಿಂಗಳಿಗೆ ಆಗುವಷ್ಟು ಆಹಾರ ಪದಾರ್ಥಗಳ ಕಿಟ್ ವಿತರಿಸಿದರು
ಈ ವೇಳೆ ಹಿರಿಯ ಪತ್ರಕರ್ತ ಚನ್ನಯ್ಯಾ ಇಟ್ನಾಳಮಠ, ಮಾತನಾಡಿ
ಕೊರೋನಾ ಮಹಾಮಾರಿಯ ಸಂಕಷ್ಟದ ಸಮಯದಲ್ಲಿ ಪ್ರಂಟ್ ಲೈನ್ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರಿಗೆ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿಲ್ಲ ಪತ್ರಕರ್ತರು ಸಂಕಷ್ಟದಲ್ಲಿದ್ದಾರೆ ಇಂತಹ ಸಂಕಷ್ಟದ ಸಮಯದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಅಸ್ಲಮ್ ನಾಲಬಂದ ಪಡಿತರ ಕಿಟ್ ವಿತರಿಸುವ ಮೂಲಕ ಪತ್ರಕರ್ತರ ಸಂಕಷ್ಟಕ್ಕೆ ನೆರವಾಗಿದ್ದಾರೆ, ಎಂದು ಎಲ್ಲ ಪತ್ರಕರ್ತರ ಪರವಾಗಿ ಅಭಿನಂದನೆ ಸಲ್ಲಿಸಿದರು,
ಈ ವೇಳೆ ಕಾಂಗ್ರೆಸ್ ಮುಖಂಡ ಗಣ್ಯ ಉದ್ಯಮಿ ಬಾಬು ಖೇಮಲಾಪೂರ ಮಾತನಾಡಿ ಅಸ್ಲಮ್ ನಾಲಬಂದ ಅವರು ಕಳೆದ ಕೆಲವು ವರ್ಷಗಳಿಂದ ಬಡವರಿಗೆ ನಿರ್ಗತಿಕರಿಗೆ ಯಾವುದೇ ಭೇದಭಾವ ಮಾಡದೆ ರಂಜಾನ್ ಹಬ್ಬದ ಸಂದರ್ಭದಲ್ಲಿ ಆಹಾರ ಧಾನ್ಯಗಳನ್ನು ವಿತರಿಸುತ್ತಾರೆ, ಈ ಸಲ ಕೊರೋನಾದಂತಹ ಸಂಕಷ್ಟದ ಸಮಯದಲ್ಲಿ ಯಾವುದೇ ಜೀವನ ಭದ್ರತೆ ಇಲ್ಲದೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪತ್ರಕರ್ತರ ಕಾರ್ಯ ಶ್ಲಾಘನೀಯ ಅಸ್ಲಮ್ ನಾಲಬಂದ ಅವರು ಆಹಾರ ಧಾನ್ಯಗಳ ಕಿಟ್ ವಿತರಿಸುವ ಮೂಲಕ ಅವರ ಸಂಕಷ್ಟಕ್ಕೆ ಸ್ಪಂದಿಸಿ ನೆರವಾಗಿದ್ದಾರೆ, ಎಂದು ಹೇಳಿದರು
ಈ ವೇಳೆ ಬಾಬು ಖೇಮಲಾಪೂರ, ಸೈಯದ್ ಅಮೀನ ಗದ್ಯಾಳ, ನೈಯರ್ ಮುಲ್ಲಾ, ಶಬ್ಬೀರ ಸಾತಬಚ್ಚೆ, ಜುಬೇರ ನಾಲಬಂದ, ಆರಿಫ್ ನಾಲಬಂದ, ಅಸ್ಲಂ ಮುಲ್ಲಾ, ಯೂಸುಫ್ ಮುಲ್ಲಾ, ಉಮರ ಸೈಯದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು,