RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಜೀವದ ಹಂಗು ತೊರೆದು ವ್ಯಕ್ತಿಯ ಜೀವ ಉಳಿಸಿದ ವಿದ್ಯಾರ್ಥಿನಿ ಶಶಿಕಲಾ ಪಾಟೀಲ ಸಾಹಸಕ್ಕೆ ಬಿಇಒ ಮೆಚ್ಚುಗೆ

ಗೋಕಾಕ:ಜೀವದ ಹಂಗು ತೊರೆದು ವ್ಯಕ್ತಿಯ ಜೀವ ಉಳಿಸಿದ ವಿದ್ಯಾರ್ಥಿನಿ ಶಶಿಕಲಾ ಪಾಟೀಲ ಸಾಹಸಕ್ಕೆ ಬಿಇಒ ಮೆಚ್ಚುಗೆ 

ಜೀವದ ಹಂಗು ತೊರೆದು ವ್ಯಕ್ತಿಯ ಜೀವ ಉಳಿಸಿದ ವಿದ್ಯಾರ್ಥಿನಿ ಶಶಿಕಲಾ ಪಾಟೀಲ ಸಾಹಸಕ್ಕೆ ಬಿಇಒ ಮೆಚ್ಚುಗೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 10 :

 

ವಾಯು ವಿಹಾರಕ್ಕೆ ಹೋದ ವ್ಯಕ್ತಿಯೋರ್ವ ಕಾಲುವೆಗೆ ಜಾರಿ ಬಿದ್ದ ವೇಳೆ, ವ್ಯಕ್ತಿಯ ಜೀವ ರಕ್ಷಣೆಗೆ ತನ್ನ ಜೀವದ ಹಂಗು ಲೆಕ್ಕಿಸದೇ ಯುವತಿಯೋರ್ವಳು ತಾವು ಉಟ್ಟಿರುವ ವ್ಯೆಲ್ ಹರಿಬಿಟ್ಟು ವ್ಯಕ್ತಿಯ ರಕ್ಷಣೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇತ್ತೀಚೆಗೆ ಹುದಲಿ ಗ್ರಾಮದ ರಂಗದೋಳಿ ಪಕ್ಕದ ಮಾರ್ಕಂಡೇಯ ಜಲಾಶಯ ಕಾಲುವೆ ಪಕ್ಷ ವಾಯು ವಿಹಾರ ಮಾಡಿ ನೀರು ಕುಡಿಯಲು ಹೋದ ಸಂದರ್ಭದಲ್ಲಿ ಗ್ರಾಮದ ಬಸಪ್ಪ ಪಾಟೀಲ ಎಂಬುವವರು ಕಾಲು ಜಾರಿ ಕಾಲುವಿಗೆ ಬಿದ್ದು ನೀರಿನ ರಬಸಕ್ಕೆ ಹರಿದು ಹೋಗುತ್ತಿರುವುದನ್ನು ಗಮನಿಸಿದ ಕಾಲುವೆ ದಡದಲ್ಲಿ ಬಟ್ಟೆ ತೊಳೆಯಲು ತನ್ನ ಸಹೋದರಿಯ ಜೊತೆ ಬಂದಿದ್ದ ಗೋಕಾಕ ವಲಯದ ಅಂಕಲಗಿ ಗ್ರಾಮದ ಶ್ರೀ ಅಡಿವಿಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 10 ನೇ ತರಗತಿ ಓದುತ್ತಿರುವ ಕುಮಾರಿ ಶಶಿಕಲಾ ಪಾಟೀಲ ವಿದ್ಯಾರ್ಥಿನಿ ತಾನು ಉಟ್ಟ ವ್ಯೆಲನ್ನು ಕಾಲುವೆಯಲ್ಲಿ ಹರಿಬಿಟ್ಟು ಕಾಲುವೆಯಲ್ಲಿ ಕೈಗಳನ್ನು ಬಡೆಯುತ್ತಾ ಹರಿದು ಹೋಗುತ್ತಿದ್ದ ವ್ಯಕ್ತಿಗೆ ವ್ಯೆಲ ಹಿಡಿಯಲು ಹೇಳಿ ವ್ಯೆಲ ಸಹಾಯದಿಂದ ಜಗ್ಗಿ ದಡಕ್ಕೆ ಸೇರಿಸಿ ವ್ಯಕ್ತಿಯನ್ನು ಕಾಲುವೆಯಿಂದ ಮೇಲಕ್ಕೆತ್ತಿ ಆತನ ಜೀವ ಉಳಿಸಿ ಸಾಹಸವನ್ನು ಮೆರೆದಿದ್ದಾಳೆ ಎಂದು ತಿಳಿದು ಬಂದಿದೆ.

ಇತಳ ಧೈರ್ಯ ಹಾಗೂ ಸಮಯ ಪ್ರಜ್ಞೆಗೆ ಗ್ರಾಮದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ವಿದ್ಯಾರ್ಥಿನೀಯ ದೈರ್ಯಕ್ಕೆ ಶೌರ್ಯ ಪ್ರಶಸ್ತಿ ದೊರೆಯಬೇಕೆಂದು ಗ್ರಾಮದ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆ ತನ್ನ ಪಾಡಿಗೆ ತಾನು ಬಟ್ಟೆ ತೊಳೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಹರಿದು ಬರುತ್ತಿದ್ದ ವ್ಯಕ್ತಿಯನ್ನು ಗಮನಿಸಿ ನೀರಿಗೆ ವ್ಯೆಲ್ ಹರಿ ಬಿಟ್ಟು ವ್ಯಕ್ತಿಯ ಪ್ರಾಣವನ್ನು ರಕ್ಷಿಸಿರುವ ಗೋಕಾಕ ವಲಯದ ವಿದ್ಯಾರ್ಥಿನಿ ಕುಮಾರಿ ಶಶಿಕಲಾ ಪಾಟೀಲಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಆಕೆಯ ಓದುತ್ತಿರುವ ಪ್ರೌಢಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ಆಕೆಯ ಸಾಹಸ ಮತ್ತು ಶೌರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ವಿದ್ಯಾರ್ಥಿನಿ ಕುಮಾರಿ ಶಶಿಕಲಾ ಪಾಟೀಲ ಅವರ ಧೈರ್ಯ ಮತ್ತು ಸಾಹಸ ಮೆಚ್ಚುವಂತಹದ್ದು, ತಮ್ಮ ಪ್ರಾಣದ ಹಂಗು ತೊರೆದು ಒರ್ವ ವ್ಯಕ್ತಿಯ ಜೀವ ರಕ್ಷಿಸಿದ ವಿದ್ಯಾರ್ಥಿನಿ ನಿಜವಾಗಲೂ ಅಭಿನಂಧನಾರ್ಹಳು ಮುಂದಿನ ದಿನಗಳಲ್ಲಿ ಇಲಾಖೆ ವತಿಯಿಂದ ಆಕೆಯನ್ನು ಗೌರವಿಸಿ ಸತ್ಕರಿಸಲಾಗುವದು ಎಂದು ತಿಳಿಸಿದ್ದಾರೆ.

” ಕಾಲುವೆಯಲ್ಲಿ ಬಟ್ಟೆ ತೊಳೆಯುವ ಸಂಧರ್ಭದಲ್ಲಿ ಕಾಲು ಜಾರಿ ಬಿದ್ದ ವ್ಯಕ್ತಿಯನ್ನು ರಕ್ಷಿಸಿರುವ ಕುಮಾರಿ ಶಶಿಕಲಾ ಪಾಟೀಲಳ ಶೌರ್ಯ ಎಲ್ಲರಿಗೂ ಮಾದರಿಯಾಗಿದ್ದು, ಸರಕಾರದಿಂದ ಕೊಡಮಾಡುವ ಶೌರ್ಯ ಪ್ರಶಸ್ತಿಗೆ ಇವಳ ಹೆಸರು ಸೂಚಿಸಲು ಕ್ರಮ ಕೈಗೊಳ್ಳಲಾಗುವುದು”.
– ರಮೇಶ ಲ ಜಾರಕಿಹೊಳಿ
ಶಾಸಕರು ಗೋಕಾಕ

” ಬಟ್ಟೆ ತೊಳೆಯುವ ಸಂದರ್ಭದಲ್ಲಿ ಕಾಲುವೆಯಲ್ಲಿ ಹರಿದು ಬರುತ್ತಿದ್ದ ವ್ಯಕ್ತಿಯನ್ನು ಗಮನಿಸಿ ಏನು ಮಾಡಬೇಕು ಎಂದು ತೋಚದೆ ಧೈರ್ಯದಿಂದ ಕಾಲುವೆ ಎರೆಡು ಮೆಟ್ಟಿಲುಗಳನ್ನು ಇಳಿದು ವ್ಯೆಲ್ ಹರಿ ಬಿಟ್ಟು ನಾನು ಮತ್ತು ನನ್ನ ಸಹೋದರಿ ವ್ಯೆಲ್ ಹಿಡಿಯುವಂತೆ ಕಿರಿಚಿದೇವು ವ್ಯಕ್ತಿ ವ್ಯೆಲ್ ಹಿಡಿದ ನಂತರ ಜೋರಾಗಿ ಎಳೆದು ದಡಕ್ಕೆ ಸೇರಿಸಿದೇವು ಇದರಿಂದ ಆಗುವ ಅನಾಹುತ ತಪ್ಪಿತ್ತು. ಒಬ್ಬರ ಜೀವ ಉಳಿಯಲು ನಾನು ನೆರವಾಗಿದ್ದು ಕಂಡು ತುಂಬಾ ಸಂತೋಷವಾಗುತ್ತಿದ್ದೆ”.

– ಕುಮಾರಿ ಶಶಿಕಲಾ ಪಾಟೀಲ
10ನೇ ತರಗತಿ ವಿದ್ಯಾರ್ಥಿನಿ ಅಂಕಲಗಿ.

Related posts: