RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ

ಗೋಕಾಕ:ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ 

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 14 :

 
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರದಂದು ನಗರದ ಹೊರವಲಯದ ಶಿವ ಬಸವ ಪೆಟ್ರೋಲ್‌ ಬಂಕ್‌ ನಲ್ಲಿ ಪ್ರತಿಭಟನೆ ನಡೆಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಪೆಟ್ರೋಲ್ 100 ನಾಟೌಟ್ ಘೋಷಣೆಯನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ದಿನಂಪ್ರತಿ ಯಾವುದೇ ತಡೆ ಇಲ್ಲದೆ ಪೆಟ್ರೋಲ್, ಡಿಜೆಲ್ ಬೆಲೆ ಏರಿಕೆಯಾಗುತ್ತಿರುವದರಿಂದ ಇಡೀ ದೇಶದ ಜನರಿಗೆ ತೊಂದರೆ ಯಾಗುತ್ತಿದೆ . ಪೆಟ್ರೋಲ್ ಮತ್ತು ಡಿಜಲ ಬೆಲೆ ಏರಿಕೆಯಿಂದ ವಾಹನ ಮಾಲೀಕರಿಗಷ್ಟೇ ಅಲ್ಲ ದೇಶದ ವಿವಿಧ ರಂಗಗಳಿಗೆ ದೊಡ್ಡ ಹೊಡೆತ ಬಿಳುತ್ತಿದೆ. ಸಾರ್ವಜನಿಕರಿಗೂ ಸಹ ಈ ಬೆಲೆ ಏರಿಕೆ ನುಂಗಲಾರದ ತುತ್ತಾಗಿದೆ. ಕಾಂಗ್ರೆಸ್ ನಡೆಸುತ್ತಿರುವ ಹೋರಾಟದಲ್ಲಿ ವಿರೋಧ ಪಕ್ಷದವರು ಅಷ್ಟೇ ಅಲ್ಲ ಸಾರ್ವಜನಿಕರೂ ಸಹ ಪಕ್ಷಾತೀತವಾಗಿ ಭಾಗವಹಿಸಿದರೆ ಕೇಂದ್ರ ಸರಕಾರ ತೈಲ ಬೆಲೆ ಏರಿಕೆ ಕಡಿಮೆ ಮಾಡಲು ಸಾಧ್ಯ. ಆ ನಿಟ್ಟಿನಲ್ಲಿ ಕಾಂಗ್ರೆಸ್ ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಹೋರಾಟ ನಡೆಸಿ ಜಾಗೃತಿ ಉಂಟು ಮಾಡುತ್ತಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ನಜೀರ ಶೇಖ್, ವಿವೇಕ ಜತ್ತಿ, ಬಸವರಾಜ ಸಾಯನ್ನವರ , ಜಾಕೀರ ನಧಾಫ , ನಗರಸಭೆ ಸದಸ್ಯ ಭಗವಂತ ಹೂಳಿ,ಕಲಪ್ಪಗೌಡಾ ಲಕ್ಕಾರ, ರಾಹುಲ ಬಡೆಸಗೋಳ, ಪಾಂಡು ಮನ್ನಿಕೇರಿ, ವಿನೋದ ಧರಗಶೆಟ್ಟಿ, ಕಲ್ಪನಾ ಜೋಶಿ, ಮಂಜುಳಾ ರಾಮಗಾನಟ್ಟಿ, ಯಶೋದಾ ಬಿರಡಿ, ಶಿವು ಪಾಟೀಲ ,ಬಸವರಾಜ ಹತ್ತರಕಿ, ಬಾಬು ಶೇಖಬಡೆ, ಇಮ್ರಾನ್ ತಪಕೀರ, ಶಿವಾನಂದ ಪೂಜಾರಿ, ನಯೀಮ ಜಮಾದಾರ, ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Related posts: