ಗೋಕಾಕ:ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗಡೆ ಅವರು ಜನರ ಸಂಕಷ್ಟಕ್ಕೆ ಸ್ವಂದಿಸುತ್ತಿದ್ದಾರೆ : ಮಮತಾ ನಾಯಿಕ
ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗಡೆ ಅವರು ಜನರ ಸಂಕಷ್ಟಕ್ಕೆ ಸ್ವಂದಿಸುತ್ತಿದ್ದಾರೆ : ಮಮತಾ ನಾಯಿಕ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 16 :
ಕೊರೋನಾ ಸಂಕಷ್ಟ ದಿನಗಳಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗಡೆ ಅವರು ರಾಜ್ಯದ ಜನತೆಗೆ ಮೆಡಿಸಿನ್ ಕಿಟ್ ಮತ್ತು ಆಹಾರ ಕಿಟ್ ಹಾಗೂ ಸರಕಾರಿ ಆಸ್ಪತ್ರೆಗಳಿಗೆ ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ನೀಡಿ ಅವರ ಸಂಕಷ್ಟಕ್ಕೆ ಸ್ವಂದಿಸುತ್ತಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಮತಾ ನಾಯಿಕ ಹೇಳಿದರು.
ಬುಧವಾರದಂದು ನಗರದ ಸಮುದಾಯ ಭವನದ ಆವರಣದಲ್ಲಿ ಧರ್ಮಾಧಿಕಾರಿ ವಿರೇಂದ್ರ ಹೆಗಡೆ ಅವರು ನೀಡಿದ ಆಹಾರದ ಕಿಟಗಳನ್ನು ನಗರ ದಿನಪತ್ರಿಕೆ ವಿತರಕರಿಕೆಗೆ ವಿತರಿಸಿ ಮಾತನಾಡಿದರು.
ರಾಜ್ಯದ ಜನತೆ ಕಷ್ಟಕ್ಕೋಳಗಾದ ಸಂಧರ್ಭದಗಳಲ್ಲಿ ಧರ್ಮಾಧಿಕಾರಿ ಹೆಗಡೆ ಅವರು ಸದಾ ಸಹಾಯ ಹಸ್ತ ನೀಡುತ್ತಿದ್ದಾರೆ. ಜನತೆ ಧೈರ್ಯದಿಂದ ಈ ಕೊರೋನಾ ವೈರಸನ್ನು ಎದುರಿಸಿ. ನಿಮಗೆ ಮಂಜುನಾಥ್ ಸ್ವಾಮಿಯ ಆಶೀರ್ವಾದ, ಹೆಗಡೆ ಅವರ ಸಹಾಯ ಸದಾ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರರಾದ ಭೀಮಶಿ ಭರಮನನ್ನವರ, ಬಿ. ಪ್ರಭಾಕರ , ವಸಂತ ಹವಾಲ್ದಾರ, ಪತ್ರಿಕಾ ವಿತರಕರಾದ ಅಡಿವೆಪ್ಪ ತೋಟಗಿ,ವಿವೇಕ ಮಾಲಗಾವಿ, ಸಂಸ್ಥೆಯ ಮಹ್ಮದ್ ರಫೀ , ಸುರೇಖಾ ಇದ್ದರು.