RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಪ್ರಧಾನಮಂತ್ರಿ ಪ್ರಕಟಿಸಿರುವ ಉಚಿತ ಲಸಿಕಾ ಕಾರ್ಯಕ್ರಮಕ್ಕೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ

ಗೋಕಾಕ:ಪ್ರಧಾನಮಂತ್ರಿ ಪ್ರಕಟಿಸಿರುವ ಉಚಿತ ಲಸಿಕಾ ಕಾರ್ಯಕ್ರಮಕ್ಕೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ 

ಪ್ರಧಾನಮಂತ್ರಿ ಪ್ರಕಟಿಸಿರುವ ಉಚಿತ ಲಸಿಕಾ ಕಾರ್ಯಕ್ರಮಕ್ಕೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 21 :

 

ಪ್ರಧಾನಮಂತ್ರಿ ಪ್ರಕಟಿಸಿರುವ ಉಚಿತ ಲಸಿಕಾ ಕಾರ್ಯಕ್ರಮಕ್ಕೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಸೋಮವಾರದಂದು ನಗರದ ಮಯೂರ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಎಲ್ಲರೂ ಲಸಿಕೆ ಪಡೆದು ಕೊರೋನಾ ವೈರಸ್ ನಿಂದ ರಕ್ಷಣೆ ಪಡೆಯಿರಿ, ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿ 53 ತಂಡಗಳೊಂದಿಗೆ 8 ದಿನಗಳವರೆಗೆ ಲಸಿಕೆ ನೀಡಲಾಗುವದು ಎಲ್ಲರು ಲಸಿಕೆ ಪಡೆದು ಸಂಭಾವ್ಯ 3ನೇ ಕೊರೋನಾ ಅಲೆಯಿಂದ ತಪ್ಪಿಸಿಕೋಳ್ಳುವಂತೆ ಸಲಹೆ ನೀಡಿದ ಅವರು ನಗರದ ಅಕ್ಕಮಹಾದೇವಿ ಗುಡಿ, ಮಯೂರ ಸ್ಕೂಲ, ಸರಕಾರಿ ಆಸ್ಪತ್ರೆ, ಗುರುವಾರಪೇಠೆಯ ಆರೋಗ್ಯ ಕೇಂದ್ರ , ಎಪಿಎಂಸಿಯ ಗಣಪತಿ ಗುಡಿಗಳಲ್ಲಿ ಲಸಿಕೆಯನ್ನು ಕೊಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಪೌರಾಯುಕ್ತ ಶಿವಾನಂದ ಹಿರೇಮಠ, ಪರಿಸರ ಅಭಿಯಂತ ಎಂ.ಎಚ್.ಗಜಾಕೋಶ , ತಾಲೂಕಾ ಆರೋಗ್ಯಾಧಿಕಾರಿ ಡಾ.ಎಂ.ಎಸ್.ಕೊಪ್ಪದ , ಡಾ. ರವೀಂದ್ರ ಅಂಟಿನ, ಬಿಇಒ ಜಿ.ಬಿ.ಬಳಗಾರ, ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮನ್ನವರ , ನಗರಸಭೆ ಸದಸ್ಯರಾದ ಸಂತೋಷ ಮಂತ್ರಣವರ , ಬಾಬು ಮುಳಗುಂದ, ಮುಖಂಡುರುಗಳಾದ ಬಸವರಾಜ ದೇಶನೂರ, ದುರ್ಗಪ್ಪ ಶಾಸ್ತ್ರಿಗೋಲ್ಲರ , ವಿಜಯ ಜತ್ತಿ, ವಿಶ್ವನಾಥ್ ಬಿಳ್ಳೂರ ಸೇರಿದಂತೆ ಅನೇಕರು ಇದ್ದರು.

Related posts: