ಬೆಳಗಾವಿ:ಕಾಂಗ್ರೇಸ ಹಿಂದುಳಿದ , ದಲಿತರ ಪಕ್ಷ : ಮುಖ್ಯಮಂತ್ರಿ ಸಿದ್ದರಾಮಯ್ಯ
ಕಾಂಗ್ರೇಸ ಹಿಂದುಳಿದ , ದಲಿತರ ಪಕ್ಷ : ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಳಗಾವಿ ಸೆ 14 : ಕಾಂಗ್ರೇಸ ಪಕ್ಷ ಹಿಂದುಳಿದ , ದಲಿತರ ಪಕ್ಷ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು
ಅವರು ಗುರುವಾರದಂದು ಪ್ರದೇಶ ಕಾಂಗ್ರೇಸ ಸಮಿತಿ ಸುಳೇಭಾವಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬೂತ್ ಮಟ್ಟದ ಪಧಾಧಿಕಾರಿಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು
ಅಧಿಕಾದಲ್ಲಿ ಇರುವಾಗ ದಲಿತರನ್ನು ನೆನಪಿಸದ ಬಿಜೆಪಿಯವರು ಚುನಾವಣೆ ಸಮಿಪಿಸುವಾಗ ಬಿಜೆಪಿ ನಡಿಗೆ ದಲಿತರ ಕಡೆಗೆ ಎಂದು ಹೇಳಿ ಜನರನ್ನು ಮೋಸಮಾಡುತ್ತಿದ್ದಾರೆ . ದಲಿತರ ಮೇಲೆ ನಿಜವಾದ ಅಭಿಮಾನ ವಿದ್ದರೆ ಅವರ ಹೆಣ್ಣು ಮಕ್ಕಳನ್ನು ತಮ್ಮ ಮನೆಗೆ ತಗೆದುಕೊಂಡು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಅವರ ಮನೆಗೆ ಕೋಟ್ಟು ಮದುವೆ ಮಾಡಲ್ಲಿ ಎಂದು ಬಿಜೆಪಿ ಪಕ್ಷದ ಬಿಜಿಪಿ ನಡಿಗೆ ದಲಿತರ ಕಡೆಗೆ ಕಾರ್ಯಕ್ರಮವನ್ನು ಟೀಕಿಸಿದರು
ಪ್ರತಿಯೋಬ್ಬರ ಅಕೌಂಟಿಗೆ 15 ಸಾವಿರ ರೂ ನೀಡುತ್ತೆನೆಂದು ಹೇಳಿದ ಮೋದಿ ಅವರು ಜನರಿಗೆ ಮೋಸ ಮಾಡಿದ್ದಾರೆ . ಪ್ರತಿ ವರ್ಷ ಎರೆಡು ಕೋಟಿ ಉದ್ಯೋಗವಕಾಶ ನೀಡುತ್ತೆವೆಂದು ಬಿಜೆಪಿಯವರು ನಿರೂದ್ಯೋಗಿ ಸಮಸ್ಯೆಯನ್ನು ನಿವಾರಿಸುವಲ್ಲಿ ವಿಫಲವಾಗಿದ್ದಾರೆ .
ಪಕ್ಷದ ಕಾರ್ಯಕರ್ತರು ಕಾಂಗ್ರೇಸ ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಕಾರ್ಯ ಮಾಡಬೇಕು ಬರುವ ಚುನಾವಣೆ ಬೆಳಗಾವಿ ಜಿಲ್ಲೆಯಲ್ಲಿ ಕನಿಪ್ಠ ಪಕ್ಷ 15 ಕ್ಷೇತ್ರಗಳಲ್ಲಿ ಕಾಂಗ್ರೇಸ ಪಕ್ಷವನ್ನು ಗೆದ್ದೆ ಗೆಲುತ್ತೆವೆ ಅದರಲ್ಲಿ ಯಾವುದೇ ಸಂಶಯ ಬೇಡಾ ಕಾರ್ಯಕರ್ತರು ಯಾವ ಊಹಾಪೋಹಗಳಿಗೆ ಜಗ್ಗದೆ ಪಕ್ಷ.ಗೆಲಿಸುವಲ್ಲಿ ಶ್ರಮಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು .
ವೇದಿಕೆಯಲ್ಲಿ ಕೆಪಿಸಿಸಿ ಕಾರ್ಯಾದ್ಯಕ್ಷರಾದ ಶ್ರೀ ಎಸ್ ಆರ್ ಪಾಟೀಲ AICC ಕಾರ್ಯದರ್ಶಿ ಶ್ರೀ ಮಾಣಿಕ್ಯಂ ಠ್ಯಾಗೂರ, ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ರಮೇಶ್ ಜಾರಕಿಹೋಳೆ,ಸಚಿವರುಗಳಾದ,ಶ್ರೀ ಆರ್ ವಿ ದೇಶಪಾಂಡೆ, ಶ್ರೀ ಡಿ ಕೆ ಶಿವಕುಮಾರ್, ಶಾಸಕರಾದ ಶ್ರೀ ಪೀರೋಜ್ ಸೇಟ್ ಕೆಪಿಸಿಸಿ ಉಪಾಧ್ಯಕ್ಷರಾದ ಶ್ರೀ ವೀರಣ್ಣ ಮತ್ತಿಕಟ್ಟಿ, ವಿಧಾನಪರಿಷತ್ತ ಸದಸ್ಯರಾದ ಶ್ರೀ ವಿವೇಕರಾವ ಪಾಟೀಲ್,ಮಾಜಿ ವಿಧಾನಪರಿಷತ್ತ ಸದಸ್ಯರಾದ ಶ್ರೀ ಮಹಾಂತೇಶ ಕೌಜಲಗಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಹಿಳಾ ಘಟಕದ ರಾಜ್ಯದ್ಯಕ್ಷಿಯಾದ ಶ್ರೀ ಲಕ್ಷ್ಮೀ ಹೆಬ್ಬಾಳಕರ,ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷರಾದ ಶ್ರೀ ವಿನಯ ನಾವಲಗಟ್ಟಿ, ನೂತನ ಕೆಪಿಸಿಸಿ ಪದಾಧಿಕಾರಿಗಳು/ಸದಸ್ಯರು,ಜಿಲ್ಲಾ ಪಂಚಾಯತ ಸದಸ್ಯರು, ತಾಲೂಕು ಪಂಚಾಯತ ಸದಸ್ಯರು, ಗ್ರಾಮ ಪಂಚಾಯತ ಸದಸ್ಯರು, ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರು,ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಶಿಬಿರದಲ್ಲಿ ಉಪಸ್ಥಿತರಿದ್ದರು.