RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಲ್.ಐ.ಸಿ ಪ್ರತಿನಿಧಿಗಳ ಪ್ರತಿಭಟನೆ

ಗೋಕಾಕ:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಲ್.ಐ.ಸಿ ಪ್ರತಿನಿಧಿಗಳ ಪ್ರತಿಭಟನೆ 

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಲ್.ಐ.ಸಿ ಪ್ರತಿನಿಧಿಗಳ ಪ್ರತಿಭಟನೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 25 :

 

ಇಲ್ಲಿಯ ಎಲ್.ಐ.ಸಿ ಶಾಖೆಯ ಪ್ರತಿನಿಧಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಾಖಾಧಿಕಾರಿಗೆ ಗುರುವಾರದಂದು ಮನವಿ ಸಲ್ಲಿಸಿದರು.

ಪ್ರತಿನಿಧಿಗಳ ಗ್ರ್ಯಾಜುಟಿ , ಸಿಬ್ಬಂದಿ ವರ್ಗದವರನ್ನು ಹೆಚ್ಚಿಸಬೇಕು, ಗುಂಪು ವಿಮೆಯನ್ನು 50 ಲಕ್ಷಕ್ಕೆ ಏರಿಕೆ ಮಾಡಬೇಕು, ಕೊವಿಡ್ ರೋಗಕ್ಕೆ ತುತ್ತಾದ ಪ್ರತಿನಿಧಿಗಳ ಕುಟುಂಬಕ್ಕೆ 5 ಲಕ್ಷ ರೂಗಳ ಪರಿಹಾರ ನೀಡಬೇಕು ಅವರ ಕುಟುಂಬದ ಮಕ್ಕಳ ವಿದ್ಯಾಭ್ಯಾಸದ ಖರ್ಚುನ್ನು ನಿಭಾಯಿಸಬೇಕು, ಸಂಕಷ್ಟದಲ್ಲಿರುವ ಪ್ರತಿನಿಧಿಗಳ ಕುಟುಂಬ ನಿರ್ವಹಣೆಗೆ 1 ಲಕ್ಷ ರೂಗಳ ಮುಂಗಡ ಹಣ ನೀಡಬೇಕು, ಪ್ರತಿನಿಧಿಗಳಿಗೆ ಪೆಂಚಣಿ ಸೌಲಭ್ಯ ಕಲ್ಪಿಸಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ.ವಾಯ್.ಪಾಟೀಲ, ಪದಾಧಿಕಾರಿಗಳಾದ ಆರ್.ಬಿ.ಗೋಕಾಕ, ಆಲ್ಲಂ ಚಪ್ಪು,ರಾಜು ಮುನ್ನೋಳಿಮಠ, ಲಕ್ಷ್ಮಣ ಕೊಪ್ಪದ , ಎಸ್.ಪಿ ಪಾದರೋಳ್ಳಿ, ಐ.ಎಸ್‌. ಜಿರಲಿ, ಎಂ.ಡಿ ಪಟೇಲ, ಉದಯ ಪೋತದಾರ, ವಿನಾಯಕ ದೇಶಪಾಂಡೆ ಸೇರಿದಂತೆ ಅನೇಕರು ಇದ್ದರು.

Related posts: