ಗೋಕಾಕ:ನಶಿಸಿ ಹೋಗುತ್ತಿರುವ ಕುಟುಂಬಗಳ ಬಾಂಧವ್ಯವನ್ನು ಸರಿಪಡಿಸುವ ಕಾರ್ಯಕ್ರಮವೇ ಜನಜಾಗೃತಿ : ಉದಯಗೌಡ್ರ
ನಶಿಸಿ ಹೋಗುತ್ತಿರುವ ಕುಟುಂಬಗಳ ಬಾಂಧವ್ಯವನ್ನು ಸರಿಪಡಿಸುವ ಕಾರ್ಯಕ್ರಮವೇ ಜನಜಾಗೃತಿ : ಉದಯಗೌಡ್ರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 26:
ಡಾ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಮಧ್ಯಪಾನಾದಿ ದುಶ್ಚಟಗಳ ಬಗ್ಗೆ ಮಾಹಿತಿ ನೀಡಿ ಅವರನ್ನು ದುಶ್ಚಟಗಳಿಂದ ದೂರು ಸೆಳೆಯುವ ಕಾರ್ಯ ಮಾಡುತ್ತಿದ್ದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಉದಯಗೌಡ್ರ ಹೇಳಿದರು
ಶನಿವಾರದಂದು ಇಲ್ಲಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ , ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯ ಘಟಕ, ಜಿಲ್ಲಾ ಘಟಕ ಹಾಗೂ ತಾಲೂಕಾ ಘಟಕದ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಅಂತರರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಮಲಿನ ಪೀಡುಗಿನಿಂದ ನಾಶವಾಗುತ್ತಿರುವ ಗ್ರಾಮಗಳ ಆರ್ಥಿಕತೆಯ ಮಟ್ಟವನ್ನು ಸಮಸ್ಥಿತಿಗೆ ತರುವ , ನಶಿಸಿ ಹೋಗುತ್ತಿರುವ ಕುಟುಂಬಗಳ ಬಾಂಧವ್ಯವನ್ನು ಸರಿಪಡಿಸುವ ಕಾರ್ಯಕ್ರಮವೇ ಜನಜಾಗೃತಿ. ಈ ಕಾರ್ಯಕ್ರಮದ ಮೂಲಕ ರಾಜ್ಯಾದ್ಯಂತ ಅಮಲುರೋಗದ ಬಗ್ಗೆ ಮಾಹಿತಿ ಶಿಬಿರಗಳು, ಗ್ರಾಮ ಸುಭಿಕ್ಷಾ ಕಾರ್ಯಕ್ರಮಗಳು, ಜಾಥಾಗಳು , ಅನಧಿಕೃತ ಶರಾಯಿ ಅಂಗಡಿಗಳ ವಿರುದ್ಧ ಜನಾಂದೋಲನ , ಮಧ್ಯವರ್ಜನ ಶಿಬಿರ ಸೇರಿದಂತೆ ಮುಂತಾದ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಉದಯಗೌಡ್ರ ಹೇಳಿದರು .
ಈ ಸಂದರ್ಭದಲ್ಲಿ ಸೋಮಶೇಖರ್ ಮಗದುಮ, ಕೇಶವ ದೇವಾಂಗ, ದೇವರಾಜ, ಮಮತಾ ನಾಯ್ಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.