RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಸೋಲಾರ ಬೀದಿ ದ್ವೀಪ ಅಳವಡಿಕೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೆರಿಸಿದ ಕೆಎಂಎಫ್ ನಿರ್ದೇಶಕ ಅಮರನಾಥ

ಗೋಕಾಕ:ಸೋಲಾರ ಬೀದಿ ದ್ವೀಪ ಅಳವಡಿಕೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೆರಿಸಿದ ಕೆಎಂಎಫ್ ನಿರ್ದೇಶಕ ಅಮರನಾಥ 

ಸೋಲಾರ ಬೀದಿ ದ್ವೀಪ ಅಳವಡಿಕೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೆರಿಸಿದ ಕೆಎಂಎಫ್ ನಿರ್ದೇಶಕ ಅಮರನಾಥ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 28 :

 

ಶಾಸಕ ರಮೇಶ ಜಾರಕಿಹೊಳಿ ಅವರು ರಾಜ್ಯ ಸರಕಾರದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದು ಕ್ಷೇತ್ರದ ಪ್ರವಾಸಿತಾನಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಕೆಎಮ್‍ಎಫ್ ನಿರ್ದೇಶಕ ಅಮರನಾಥ ರಮೇಶ ಜಾರಕಿಹೊಳಿ ಹೇಳಿದರು.
ಅವರು, ನಗರದ ಚಿಕ್ಕಹೊಳಿ ಸೇತುವೆಯಿಂದ ಗೋಕಾಕ ಫಾಲ್ಸ್ ಮಾರ್ಗವಾಗಿ ಮೆಲ್ಮಟ್ಟಿ ಗ್ರಾಮದ ವರೆಗೆ ಲೋಕೊಪಯೋಗಿ ಇಲಾಖೆಯಿಂದ 1.ಕೋಟಿ ರೂಪಾಯಿ ವೆಚ್ಚದಲ್ಲಿ ಸೋಲಾರ ಬೀದಿ ದ್ವೀಪ ಅಳವಡಿಕೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೆರಿಸಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಗೋಕಾಕ ಮತಕ್ಷೇತ್ರದ ಪ್ರವಾಸಿ ತಾನಗಳನ್ನು ಅಭಿವೃದ್ಧಿ ಪಡಿಸಿ, ಪ್ರವಾಸಿಗರಿಗೆ ಹಾಗೂ ಸ್ಥಳೀಯ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇನ್ನು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮುಂಬರುವ ದಿನಗಳಲ್ಲಿ ಶಾಸಕರು ಕೈಗೊಳ್ಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೆನ್ನವರ, ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮನ್ನವರ, ಸುರೇಶ ಸನದಿ, ನಗರಸಭೆ ಸದಸ್ಯರಾದ ಬಾಬು ಮುಳಗುಂದ, ಸಿದ್ದರಾಮ ಹುಚ್ಚರಾಯಪ್ಪಗೋಳ, ಶಿವಪ್ಪ ಗುಡ್ಡಾಕಾರ, ಜ್ಯೋತಿಭಾ ಸುಭಂಜಿ, ಲಕ್ಷ್ಮಣ ಖಡಕಭಾಂವಿ, ಪ್ರಕಾಶ ಮುರಾರಿ, ರಾಜೇಶ್ವರಿ ಒಡೆಯರ, ಕಿರಣ ಡಮಾಮಗರ ಸೇರಿದಂತೆ ಇತರರು ಇದ್ದರು.

Related posts: