RNI NO. KARKAN/2006/27779|Saturday, October 19, 2024
You are here: Home » breaking news » ಮೂಡಲಗಿ:ಶಾಸಕ ಬಾಲಚಂದ್ರ ಅವರು ಶೈಕ್ಷಣಿಕ ರಂಗಕ್ಕೆ ಹೆಚ್ಚಿನ ಒತ್ತು ನೀಡಿ ಪ್ರೋತ್ಸಾಹ ನೀಡುತ್ತಿದ್ದಾರೆ : ಬಿಇಒ ಆಜೀತ ಮನ್ನಿಕೇರಿ

ಮೂಡಲಗಿ:ಶಾಸಕ ಬಾಲಚಂದ್ರ ಅವರು ಶೈಕ್ಷಣಿಕ ರಂಗಕ್ಕೆ ಹೆಚ್ಚಿನ ಒತ್ತು ನೀಡಿ ಪ್ರೋತ್ಸಾಹ ನೀಡುತ್ತಿದ್ದಾರೆ : ಬಿಇಒ ಆಜೀತ ಮನ್ನಿಕೇರಿ 

ಶಾಸಕ ಬಾಲಚಂದ್ರ ಅವರು ಶೈಕ್ಷಣಿಕ ರಂಗಕ್ಕೆ ಹೆಚ್ಚಿನ ಒತ್ತು ನೀಡಿ ಪ್ರೋತ್ಸಾಹ ನೀಡುತ್ತಿದ್ದಾರೆ : ಬಿಇಒ ಆಜೀತ ಮನ್ನಿಕೇರಿ

 

ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಜು 2 :

 

ಸ್ವಾರ್ಥ ರಹಿತವಾಗಿ ಸಾರ್ವಜನಿಕ ಜೀವನದಲ್ಲಿದ್ದಾಗ ತಮ್ಮಿಂದಾಗುವ ಕೆಲಸ ಕಾರ್ಯಗಳನ್ನು ಸೇವಾ ಮನೊಭಾವನೆಯಿಂದ ಮಾಡಬೇಕು. ವೃತ್ತಿ ಬದುಕಿನಲ್ಲಿ ವರ್ಗಾವಣೆ, ಪದೋನ್ನತಿ ಸಾಮಾನ್ಯವಾಗಿದ್ದು ಜನರ ನೌಕರ ಬಳಗದ ಹಿತವನ್ನಿಟ್ಟುಕೊಂಡು ಸೇವೆ ಮಾಡದಾಗ ಮಾತ್ರ ಸ್ವಾರ್ಥಕ ಬದುಕಿಗೆ ಅರ್ಥ ಬರುತ್ತದೆ ಎಂದು ಮೂಡಲಗಿ ಬಿಇಒ ಅಜಿತ ಮನ್ನಿಕೇರಿ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದ ನೂತನವಾಗಿ ಪದೋನ್ನತಿ ಹೊಂದಿ ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕರಾಗಿ ಆಗಮಿಸಿದ ಎ.ಎ ಜುನೇದಿ ಪಟೇಲ ಅವರ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಮೂಡಲಗಿ ವಲಯವು ಶೈಕ್ಷಣಿಕವಾಗಿ ಹಲವಾರು ಕ್ಷೇತ್ರಗಳಲ್ಲಿ ಗುರ್ತಿಸಿಕೊಳ್ಳುವಂತಹ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದೆ. ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳು, ಪಠ್ಯ, ಪಠ್ಯೇತರ, ಮನರಂಜನೆಯ ಜೊತೆಯಲ್ಲಿ ಕ್ರೀಡೆಯಲ್ಲಿಯು ರಾಜ್ಯ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದೆ.
ಕ್ರೀಡೆಯಲ್ಲಿ ಖೋ-ಖೋ, ಕಬ್ಬಡ್ಡಿ, ಮಲ್ಲಗಂಭ, ಯೋಗಾಸನ ಹಾಗೂ ಇನ್ನಿತರ ಒಳಾಂಗಣ ಹಾಗೂ ಹೊರಾಂಗನ ಆಟಗಳಲ್ಲಿ ಮಕ್ಕಳಷ್ಟೇ ಅಲ್ಲದೆ ಶಿಕ್ಷಕರು ಸಹ ವಿಶೇಷ ಸಾಧನೆ ಗೈದಿದ್ದಾರೆ. ಸ್ಥಳೀಯ ಶಾಸಕರು, ಕೆ.ಎಮ್.ಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿಯವರು ವಿಶೇಷವಾಗಿ ಶೈಕ್ಷಣಿಕ ರಂಗಕ್ಕೆ ಹೆಚ್ಚಿನ ಒತ್ತು ನೀಡಿ ಪ್ರೋತ್ಸಾಹ ನೀಡುತ್ತಿದ್ದಾರೆ. ಕರೋನಾ ಎಂಬ ಮಹಾಮಾರಿಯಿಂದ ಶೈಕ್ಷಣಿಕ ಚಟುವಟಿಕೆಗಳು ಹಿನ್ನೆಡೆಯಾಗಿವೆ. ತ್ವರಿತ ಗತಿಯಲ್ಲಿ ಕೋವಿಡ್-19 ಅಲೆ ಕಡಿಮೆಯಾದ ಮೇಲೆ ಚುನಾಯಿತ ಪ್ರತಿನೀಧಿಗಳು, ಶಾಲಾ ಉಸ್ತುವಾರಿಗಳು, ಶಿಕ್ಷಣ ಪ್ರೇಮಿಗಳು ಹಾಗೂ ಶಿಕ್ಷಕರ ಸಹಕಾರದಿಂದ ಯಶಸ್ವಿಯಾಗಿ ಶಾಲಾ ಕಾರ್ಯ ಚಟುವಟಿಕೆಗಳನ್ನು ಇಲಾಖಾ ಮಾರ್ಗದರ್ಶನದಂತೆ ನಡೆಸುವದಾಗಿ ತಿಳಿಸಿದರು.
ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಪದೋನ್ನತರಾದ ಎ.ಎ ಜುನೇದಿ ಪಟೇಲ ಮಾತನಾಡಿ, ವೃತ್ತಿ ಬದುಕಿನಲ್ಲಿ ಹೊಂದಾಣಿಕೆ ಎನ್ನುವದು ಅತ್ಯಾವಶ್ಯಕ. ಇಂದಿನ ತಂತ್ರಜ್ಞಾನ ಯುಗದಲ್ಲಿ ಬದಲಾಗುತ್ತಿರುವ ಸನ್ನಿವೇಶಗಳಿಗೆ ತಕ್ಕಂತೆ ಮಾರ್ಪಡಗೊಳ್ಳಬೇಕು. ನಮ್ಮ ಹಿಂದಿನ ಸೇವಾ ಅನುಭವ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ಅನುಭವಿಕರ ಸಲಹೆ ಸೂಚನೆಯೊಂದಿಗೆ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳ ಬೇಕು. ಕಛೇರಿಯ ಇಲಾಖೆಯ ಹಾಗೂ ಶಿಕ್ಷಕರ ಸಾರ್ವಜನಿಕರ ಬೇಕು ಬೇಡಿಕೆಗಳಿಗೆ ಸ್ಪಂದಿಸುವದಾಗಿ ಹೇಳಿದರು.
ಶಿಕ್ಷಕ ಸಂಘಟನೆಯ ಎ.ಪಿ ಪರಸನ್ನವರ, ಆರ್.ಎಮ್ ಮಹಾಲಿಂಗಪೂರ ಮಾತನಾಡಿ, ವಲಯದ ಕುರಿತು, ಬಿಇಒರವರ ಕಾರ್ಯದಕ್ಷತೆ, ಕಛೇರಿ ಸಿಬ್ಬಂದಿಗಳ ಒಡನಾಟ, ಶಿಕ್ಷಕ ಸಂಘಟನೆಗಳ ಪಾತ್ರಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಕಛೇರಿಯ ಪತ್ರಾಂಕಿತ ವ್ಯವಸ್ಥಾಪಕ ಪಿ.ಎಚ್ ಒಂಟಿ, ಗೋಕಾಕ ದೈಹಿಕ ಶಿಕ್ಷಣ ಪರಿವೀಕ್ಷಕ ತೋರನಗಟ್ಟಿ, ಶಿಕ್ಷಣ ಸಂಯೋಜಕರಾದ ಟಿ. ಕರಿಬಸವರಾಜು, ಸತೀಶ ಬಿ.ಎಸ್, ಅಧಿಕ್ಷಕ ಸಲೀಂ ಶೇಖ, ಬಿ.ಆರ್.ಪಿ ಜಿ.ಎಮ್ ಸಯ್ಯದ, ಅಬುಬಕರ ಪಟೇಲ, ಇರ್ಫಾನ ಜಮಾದಾರ, ಸಂಭಾ ತೋರಸೆ, ಶಿಕ್ಷಕ ಸಂಘಟನೆಯ ಬಿ.ಎ ಡಾಂಗೆ, ಕೆ.ಎಲ್ ಮೀಶಿ, ಎಸ್.ಬಿ ಕುರಣಗಿ, ಎಸ್.ಎಲ್ ಪಾಟೀಲ, ಬಸವರಾಜ ಹುಲ್ಲಾರ, ಎಸ್.ಬಿ ಹಳಿಗೌಡರ ಹಾಗೂ ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

Related posts: