RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಭಾರತವನ್ನು ಕೊರೋನಾ ಮುಕ್ತ ಮಾಡಲು ಪ್ರತಿಯೊಬ್ಬರು ಲಸಿಕೆ ಪಡೆಯಬೇಕು : ಪ್ರಾಚಾರ್ಯ ಮಹೇಶ ಕಂಬಾರ

ಗೋಕಾಕ:ಭಾರತವನ್ನು ಕೊರೋನಾ ಮುಕ್ತ ಮಾಡಲು ಪ್ರತಿಯೊಬ್ಬರು ಲಸಿಕೆ ಪಡೆಯಬೇಕು : ಪ್ರಾಚಾರ್ಯ ಮಹೇಶ ಕಂಬಾರ 

ಭಾರತವನ್ನು ಕೊರೋನಾ ಮುಕ್ತ ಮಾಡಲು ಪ್ರತಿಯೊಬ್ಬರು ಲಸಿಕೆ ಪಡೆಯಬೇಕು : ಪ್ರಾಚಾರ್ಯ ಮಹೇಶ ಕಂಬಾರ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 3 :

 

ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ಕೊರೋನಾ ಲಸಿಕೆ ಅಭಿಯಾನಕ್ಕೆ ಶನಿವಾರದಂದು ಕಾಲೇಜಿನ ಆವರಣದಲ್ಲಿ ಪ್ರಾಚಾರ್ಯ ಮಹೇಶ ಕಂಬಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶವನ್ನು ಕೊರೋನಾ ಮುಕ್ತ ಮಾಡಲು ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ಕೊರೋನಾ ಲಸಿಕೆಯನ್ನು ಪಡೆದುಕೊಂಡು ಸರಕಾರದ ಹೊರಡಿಸಿರುವ ಕೊರೋನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಭಾರತವನ್ನು ಕೊರೋನಾ ಮುಕ್ತ ರಾಷ್ಟ್ರ ಮಾಡುಲು ಶ್ರಮಿಸಬೇಕಾಗಿದೆ. ಆ ದಿಸೆಯಲ್ಲಿ ನಾವೆಲ್ಲರೂ ಮುಂದಾಗಬೇಕು ಎಂದು ಹೇಳಿದರು.
ಕಾಲೇಜಿನಲ್ಲಿ ಓದುತ್ತಿರುವ 1378 ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಲಸಿಕೆ ನೀಡಲಾಗುತ್ತಿದ್ದು, ಈ ಅಭಿಯಾನ ಜುಲೈ 7 ರವರೆಗೆ ನಡೆಯಲಿದ್ದು ಕಾಲೇಜಿನಲ್ಲಿ ಓದುವ ಎಲ್ಲಾ ವಿದ್ಯಾರ್ಥಿಗಳು ಆದಷ್ಟು ಬೇಗ ಜುಲೈ 7 ರ ಒಳಗೆ ಕಾಲೇಜಿಗೆ ಬಂದು ಲಸಿ ಪಡೆದುಕೋಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರುಗಳಾದ ಪಿ.ಎ ಲಕ್ಷೇಟ್ಟಿ ಡಾ. ಸುನಂದಾ ಮಾದರ, ವ್ಹಿ.ಐ ತಿಳಗಂಜಿ, ವಿಜಯ ಹುಣಚ್ಯಾಳಿ, ಚಿದಾನಂದ ಶಿಂಗೆ, ಸಿಬ್ಬಂದಿಗಳಾದ ಶರೀಫ ಮಾವುತ, ಬಸವರಾಜ ಸಾಸೈಯಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts: