ಚಿಕ್ಕೋಡಿ :ರೈತರು ತಮ್ಮ ಜಮೀನಿನಲ್ಲಿ ಗಿಡಮರಗಳನ್ನು ನೆಟ್ಟು ಪೋಷಿಸಬೇಕು: ಮಹಾಂತೇಶ ಕವಟಗಿಮಠ
ರೈತರು ತಮ್ಮ ಜಮೀನಿನಲ್ಲಿ ಗಿಡಮರಗಳನ್ನು ನೆಟ್ಟು ಪೋಷಿಸಬೇಕು: ಮಹಾಂತೇಶ ಕವಟಗಿಮಠ
ನಮ್ಮ ಬೆಳಗಾವಿ ಇ – ವಾರ್ತೆ, ಚಿಕ್ಕೋಡಿ 05 :
ಇಂದು ನೆಟ್ಟಿರುವ ಸಸಿಗಳು ಮುಂದಿನ ಮಕ್ಕಳು ಮೊಮ್ಮಕ್ಕಳಿಗೆ ವರದಾನವಾಗುತ್ತದೆ. ಈ ದಿಸೆಯಿಂದ ಪ್ರತಿಯೊಬ್ಬ ರೈತರು ತಮ್ಮ ಜಮೀನಿನ ಬದುವಿನಲ್ಲಿ ಗಿಡಮರಗಳನ್ನು ನೆಟ್ಟು ಪೋಷಿಸಬೇಕೆಂದು ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ತಾಲೂಕಿನ ಹಂಚನಾಳ ಕೆಕೆ ಗ್ರಾಮದ ಅಮೋಘ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗ ಓಬಿಸಿ ಮೋರ್ಚಾ ರಾಯಬಾಗ ಮಂಡಲದ ವತಿಯಿಂದ ಡಾ, ಶಾಮಪ್ರಸಾದ ಮುಖರ್ಜಿ ಅವರ ಪುಣ್ಯಸ್ಮರಣೆ ಅಂಗವಾಗಿ ಬೃಹತ್ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗಿಡ ನೆಡುವುದರ ಜೊತೆಗೆ ಸಸಿ ಉಳಿಸುವುದು ಸಮಾಜದ ಜವಾಬ್ದಾರಿ. ಪರಿಸರ ರಕ್ಷಣೆ ಆಗಬೇಕು. ಇದರಿಂದ ಉತ್ತಮ ಮಳೆ ಆಗುತ್ತದೆ ಮತ್ತು ಅರಣ್ಯ ಉಳಿಯುತ್ತದೆ ಎಂದರು.
ಎರಡನೆ ಅಲೆ ಕೋವಿಡ್ ಮಹಾಮಾರಿಯಲ್ಲಿ ಬೆಳಗಾವಿ ಜಿಲ್ಲೆ ಸಾಕಷ್ಟು ನೋವು ಅನುಭವಿಸಿದೆ. ಅನೇಕ ಮಹಾನಾಯಕರು, ಸಂಬಂಧಿಕರು ನಮ್ಮನ್ನು ಅಗಲಿದ್ದಾರೆ. ಈ ತಪ್ಪು ಮರುಕಳಿಸದಂತೆ ಗ್ರಾಮೀಣ ಪ್ರದೇಶದಲ್ಲಿ ಜನರು ಜಾಗೃತಿ ವಹಿಸಬೇಕು. ಇನ್ನೋಂದು ಎರಡು ಅಥವಾ ಮೂರು ತಿಂಗಳು ಜಾತ್ರೆ, ಮದುವೆ ಸಮಾರಂಭದಿಂದ ದೂರ ಇರಬೇಕು ಎಂದರು.
ಗ್ರಾಮೀಣ ಪ್ರದೇಶದಲ್ಲಿ ಮಾಸ್ಕ್ ಸೋಕಿಗಾಗಿ ಹಾಕೋಬಾರದು, ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಲು ಮಾಸ್ಕ ಹಾಕಿಕೊಳ್ಳಬೇಕು, ಚೆನ್ನಾಗಿ ಕೈತೊಳೆದುಕೊಂಡು ಉತ್ತಮ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಲು ಪಣ ತೊಡಬೇಕು ಎಂದ ಅವರು, ಡಾ, ಶಾಮಪ್ರಸಾದ ಮುಖರ್ಜಿ ಪುಣ್ಯತಿಥಿ ನಿಮಿತ್ಯವಾಗಿ ಬಿಜೆಪಿ ರಾಯಬಾಗ ಮಂಡಲ ಅತೀ ಹೆಚ್ಚು ಸಸಿ ನೆಡುವ ಕಾರ್ಯಕ್ರಮ ಮಾಡಿದೆ. ಹಸಿರು ಉಳಿಸಿ ನಾಡು ಉಳಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ಮಹೇಶ ಭಾತೆ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ ಮಾತನಾಡಿದರು.
ಬಿಜೆಪಿ ಮುಖಂಡ ಸುರೇಶ ಬೆಲ್ಲದ, ರಾಯಬಾಗ ಮಂಡಲ ಅಧ್ಯಕ್ಷ ಬಸವರಾಜ ಡೋಣವಾಡೆ. ಓಬಿಸಿ ಮೋರ್ಚಾ ಅಧ್ಯಕ್ಷ ಬಸು ಮಾಳಗೆ. ವಿಜಯ ಕೋಠಿವಾಲೆ. ನ್ಯಾಯವಾದಿ ರವಿ ಹಿರೇಕೊಡಿ. ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಮೇಶ ಕಾಳನ್ನವರ.ಎಸ್‌ಸಿ ಯುವ ಮೋರ್ಚಾ ಸದಾಶಿವ ಹುಂಜ್ಯಾಗೋಳ, ಸಂತೋಷ ಪಾಟೀಲ. ಸಿದ್ದು ಖಿಂಡಿ. ಪವಾಡಿ ಸನದಿ. ಪಿಎಂಸಿ ಉಪಾಧ್ಯಕ್ಷ ರಾಯಗೌಡ ಕೆಳಗಿನಮನಿ. ಕಲ್ಲಪ್ಪ ಹುಲಕುಂದ ಮುಂತಾದವರು ಇದ್ದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜು ಹರಗನ್ನವರ ಸ್ವಾಗತಿಸಿದರು.