RNI NO. KARKAN/2006/27779|Thursday, November 21, 2024
You are here: Home » breaking news » ಗೋಕಾಕ:ಶಾಸಕ ರಮೇಶ ಜಾರಕಿಹೊಳಿ ಅವಿರತ ಪ್ರಯತ್ನ : ಗೋಕಾಕ ವಲಯಕ್ಕೆ ಮತ್ತೆ 6 ಇಂಗ್ಲಿಷ್ ಮಾಧ್ಯಮ ಶಾಲೆಗಳು ಮಂಜೂರು.

ಗೋಕಾಕ:ಶಾಸಕ ರಮೇಶ ಜಾರಕಿಹೊಳಿ ಅವಿರತ ಪ್ರಯತ್ನ : ಗೋಕಾಕ ವಲಯಕ್ಕೆ ಮತ್ತೆ 6 ಇಂಗ್ಲಿಷ್ ಮಾಧ್ಯಮ ಶಾಲೆಗಳು ಮಂಜೂರು. 

ಶಾಸಕ ರಮೇಶ ಜಾರಕಿಹೊಳಿ ಅವಿರತ ಪ್ರಯತ್ನ : ಗೋಕಾಕ ವಲಯಕ್ಕೆ ಮತ್ತೆ 6 ಇಂಗ್ಲಿಷ್ ಮಾಧ್ಯಮ ಶಾಲೆಗಳು ಮಂಜೂರು.

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 8 :

 

ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ದುಬಾರಿ ಶುಲ್ಕ, ಡೊನೇಷನ್‌ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಮುಂದಾಗಿದ್ದು, ಶಾಸಕ ರಮೇಶ ಜಾರಕಿಹೊಳಿ ಅವರ ಶೈಕ್ಷಣಿಕ ಕಾಳಜಿಯಿಂದ ಗೋಕಾಕ ಶೈಕ್ಷಣಿಕ ವಲಯಕ್ಕೆ 6 ಸರ್ಕಾರಿ ಕನ್ನಡ ಹಾಗೂ ಉರ್ದು ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮದ 1 ಮತ್ತು 2 ತರಗತಿಗೆ ಇದೇ ಶೈಕ್ಷಣಿಕ ವರ್ಷದಿಂದ ಉಚಿತ ಪ್ರವೇಶ ಆರಂಭವಾಗುತ್ತಿದೆ.
ಕಳೆದ ಮೂರು ವರ್ಷಗಳ ಹಿಂದೆ ಗೋಕಾಕ ಶೈಕ್ಷಣಿಕ ವಲಯಕ್ಕೆ ಶಾಸಕ ರಮೇಶ ಜಾರಕಿಹೊಳಿ ಅವರು ಮೂರು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಮಂಜೂರು ಮಾಡಿಸಿ ಅವುಗಳಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಿ ಆ ಶಾಲೆಗಳ ಬಗ್ಗೆ ವೈಯಕ್ತಿಕ ಕಾಳಜಿ ವಹಿಸಿ ಗುಣಮಟ್ಟದ ಶಿಕ್ಷಣ ನೀಡವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಪ್ರಯತ್ನದ ಫಲವಾಗಿ ಈ ವರ್ಷವು ಸಹ ಗೋಕಾಕ ವಲಯಕ್ಕೆ ಮತ್ತೆ 6 ಇಂಗ್ಲಿಷ್ ಮಾಧ್ಯಮ ಶಾಲೆಗಳು ಮಂಜೂರಾಗಿವೆ.

ಖಾಸಗಿ ಇಂಗ್ಲಿಷ್‌ ಶಾಲೆಗಳ ದುಬಾರಿ ಶುಲ್ಕ ಭರಿಸಲಾಗದೆ ಅನೇಕ ಪೋಷಕರು ಅನಿವಾರ್ಯವಾಗಿ ಕನ್ನಡ ಹಾಗೂ ಉರ್ದು ಮಾಧ್ಯಮಕ್ಕೆ ಸೇರಿಸುವುದು ಸಾಮಾನ್ಯವಾಗಿತ್ತು. ಇನ್ನೂ ಕೆಲ ಬಡವರು ತಮ್ಮ ಮಕ್ಕಳಿಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂಬ ಮಹದಾಸೆ ಹೊಂದಿದ್ದರೂ ಆರ್ಥಿಕ ಸಮಸ್ಯೆಯಿಂದ ತಮ್ಮ ಕನಸು ಕೈ ಬಿಡುವಂತಾಗಿತ್ತು. ಅಂಥವರ ಕನಸು ನನಸಾಗಿಲು ರಾಜ್ಯ ಸರಕಾರವೇ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸುತ್ತಿರುವುದು ಬಡ ಪೋಷಕರಲ್ಲಿ ಹರುಷ ತಂದಿದೆ. ಸರಕಾರದ ನಿರ್ಧಾರದಿಂದಾಗಿ ಪ್ರಸಕ್ತ ಸಾಲಿನಿಂದಲೇ ತಾಲೂಕಿನಲ್ಲಿ 6 ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಬಾಗಿಲು ತೆರೆಯಲಿದ್ದು, ಅದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಅಗತ್ಯ ಸಿದ್ಧತೆ ನಡೆಸಿದ್ದಾರೆ

ಶಾಲೆಗಳ ವಿವರ: ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ಕೊಣ್ಣೂರ , ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ನಂ 1 ಗೋಕಾಕ , ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ಮಮದಾಪೂರ , ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೀರೆನಂದಿ ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳವಿ ,ಸರಕಾರಿ ಹಿರಿಯ ಹೆಣ್ಣು ಮಕ್ಕಳ ಶಾಲೆ ಮಮದಾಪೂರ ಶಾಲೆಗಳಲ್ಲಿ ಈ ವರ್ಷ ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಆರಂಭವಾಗಲಿವೆ.

ಶಿಕ್ಷಕರಿಗೆ ವಿಶೇಷ ತರಬೇತಿ: ಎರಡನೆಯ ಬಾರಿಗೆ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಆಯಾ ಶಾಲೆ ಶಿಕ್ಷಕಕರೊಬ್ಬರಿಗೆ ಈ ಕುರಿತು ವಿಶೇಷ ತರಬೇತಿ ನೀಡಲಾಗುತ್ತಿದೆ. 1ಮತ್ತು 2 ನೇ ತರಗತಿ ಮಕ್ಕಳಿಗೆ ಸೂಕ್ತವಾಗಿ ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧಿಸುವ ಎಲ್ಲಾ ಕೌಶಲ್ಯಗಳನ್ನು ಶಿಕ್ಷಕರಿಗೆ ಅಗತ್ಯ ತರಬೇತಿಯೊಂದಿಗೆ ನೀಡಲಾಗಿದೆ.

ಈಗಾಗಲೇ ಡಯಟ್ ಮೂಲಕ ವಲಯದ 10 ಶಿಕ್ಷಕರಿಗೆ ತರಬೇತಿ ನೀಡಿದ್ದು, ಜು 10 ರಿಂದ ಎಲ್ಲಾ ಕಡೆಗಳಲ್ಲಿ ಶಾಲಾ ಪ್ರಾರಂಭೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಸದ್ಯ ಒಂದು ಮತ್ತು ಎರಡನೇ ತರಗತಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ತರಬೇತಿ ಹೊಂದಿದ ಶಿಕ್ಷಕರು ಮಾತ್ರ ಆಯಾ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಮಾಹಿತಿ ನೀಡಿದ್ದಾರೆ.
ಶಾಲೆ ಆಯ್ಕೆಗೆ ಮಾನದಂಡವೇನು?: ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳು ಎಂದರೆ ವಿವಿಧ ಕಾರಣಗಳಿಂದಾಗಿ ದೂರ ಹೋಗುವವರೆ ಹೆಚ್ಚು. ಆದರೂ, ಕಳೆದ ಎರಡ್ಮೂರು ವರ್ಷಗಳಿಂದ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಗಣನೀಯವಾಗಿ ಹೆಚ್ಚಿದೆ. 1ನೇ ತರಗತಿಗೆ ಕನಿಷ್ಠ 30 ಮಕ್ಕಳ ದಾಖಲಾತಿ ಇರಬೇಕು. ಶಾಲೆ ಸುಸಜ್ಜಿತ ಕಟ್ಟಡ, ಮೂಲ ಸೌಕರ್ಯ ಹೊಂದಿರಬೇಕು. ಅಂತಹ ಶಾಲೆಗಳಲ್ಲಿ ಏಕಕಾಲಕ್ಕೆ ಒಂದು ಮತ್ತು ಎರಡನೇ ತರಗತಿಯಿಂದ ಇಂಗ್ಲಿಷ್‌ ಶಾಲೆಗಳು ಆರಂಭಿಸಲಾಗುತ್ತಿದೆ. ಅದರೊಂದಿಗೆ ಇಂಗ್ಲಿಷ್‌ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಈಗಾಗಲೇ ಕಲಿಕಾ ವಾತಾವರಣ ಒದಗಿವದರ ಜೊತೆಗೆ ಸುಣ್ಣ- ಬಣ್ಣದೊಂದಿಗೆ ಶಾಲೆಯನ್ನು ಸಿದ್ಧಗೊಳಿಸುವಂತೆ ಆಯಾ ಶಾಲೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ಶಿಕ್ಷಣಾಧಿಕಾರಿಗೆ ಜಿ.ಬಿ.ಬಳಗಾರ ಪತ್ರಿಕೆಗೆ ತಿಳಿಸಿದ್ದಾರೆ.

” ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೂ ಸಹ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ ಸರಕಾರದಿಂದಲೇ ಸರಕಾರಿ ಶಾಲೆಗಳಲ್ಲಿ ಇಂಗ್ಲೀಷ್ ವಿಭಾಗ ಪ್ರಾರಂಭಿಸಲಾಗಿದ್ದು, ತರಬೇತಿ ಪಡೆದ ನೂರಿತ ಶಿಕ್ಷಕರನ್ನು ಈ ಶಾಲೆಗಳಲ್ಲಿ ನೇಮಿಸಿ ಗುಣಮಟ್ಟದ ಶಿಕ್ಷಣ ನೀಡುಲಾಗುವದಲ್ಲದೆ ವೈಯಕ್ತಿಕ ಕಾಳಜಿ ವಹಿಸಿ ಈ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಲಾಗುವದು”.
– ರಮೇಶ ಜಾರಕಿಹೊಳಿ. ಶಾಸಕರು ಗೋಕಾಕ.

” ಶಾಸಕ ರಮೇಶ ಜಾರಕಿಹೊಳಿ ಅವರ ಪ್ರಯತ್ನದಿಂಧ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಗೋಕಾಕ ವಲಯಕ್ಕೆ 6 ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ವಿಭಾಗಗಳು ಪ್ರಾರಂಭವಾಗುತ್ತಿರುವದು ಸಂತೋಷದ ವಿಷಯ. ಇದರಿಂದ ಬಡ ಮಕ್ಕಳು ಸಹ ಇಂಗ್ಲಿಷ್ ವ್ಯಾಸಂಗ ಮಾಡಿ ತಮ್ಮ ಕನಸ್ಸನ್ನು ನನಸು ಮಾಡಿಕೊಳ್ಳಲು ಅನುವುವಾಗುತ್ತದೆ. ಮಕ್ಕಳಿಗೆ ಸರಕಾರದಿಂದ ಇಂಗ್ಲಿಷ್ ಶಿಕ್ಷಣ ಸಿಗುವ ಹಾಗೆ ಮಾಡಿದ ಶಾಸಕ ರಮೇಶ ಜಾರಕಿಹೊಳಿ ಅವರು ಅಭಿನಂದಾರ್ಹರು.

– ಜಿ.ಬಿ.ಬಳಗಾರ ಶಿಕ್ಷಣಾಧಿಕಾರಿಗಳು ಗೋಕಾಕ.

Related posts: