ಗೋಕಾಕ:ಗೋಕಾಕ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಅಮರನಾಥ ರಮೇಶ ಜಾರಕಿಹೊಳಿ ಚಾಲನೆ
ಗೋಕಾಕ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಅಮರನಾಥ ರಮೇಶ ಜಾರಕಿಹೊಳಿ ಚಾಲನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 8 :
ಗೋಕಾಕ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕೆಎಮ್‍ಎಫ್ ನಿರ್ದೇಶಕ ಅಮರನಾಥ ರಮೇಶ ಜಾರಕಿಹೊಳಿ ಅವರು ಬುಧವಾರದಂದು ಗುದ್ದಲಿ ಪೂಜೆ ನೆರವೆರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ 150ಲಕ್ಷ ರೂಗಳ ವೆಚ್ಚದಲ್ಲಿ ಚೌಕಿ ರಸ್ತೆಯಿಂದ ಭಗೀರಥ ವೃತ್ತದ ವರೆಗೆ ರಸ್ತೆ ಡಾಂಬರಿಕರಣ, 25ಲಕ್ಷ ರೂಗಳ ವೆಚ್ಚದಲ್ಲಿ ಪಾಮಲದಿನ್ನಿ-ಬಡಿಗವಾಡ ವರೆಗೆ ರಸ್ತೆ ಡಾಂಬರೀಕರಣ, 50ಲಕ್ಷ ರೂಗಳ ವೆಚ್ಚದಲ್ಲಿ ಬಡಿಗವಾಡ ಕೂಡುವ ರಸ್ತೆಯ ವರೆಗೆ ಸಿಸಿ ರಸ್ತೆ ನಿರ್ಮಾಣ.
ಲೋಕೋಪಯೋಗಿ ಇಲಾಖೆಯಿಂದ 32ಲಕ್ಷ ರೂಗಳ ವೆಚ್ಚದಲ್ಲಿ ನಂದಗಾಂವ ಗ್ರಾಮದ ಸೂತನ ಪಶು ಚಿಕಿತ್ಸಾ ಕಟ್ಟಡ, 350ಲಕ್ಷ ರೂಗಳ ವೆಚ್ಚದಲ್ಲಿ ಸಾವಳಗಿ-ಕೊಣ್ಣೂರ ರಸ್ತೆ ಡಾಂಬರೀಕರಣ ಹಾಗೂ ನಂದಗಾಂವ ಗ್ರಾಮದಲ್ಲಿ 20ಲಕ್ಷ ರೂಗಳ ವೆಚ್ಚದಲ್ಲಿ ಸಮುದಾನ ಭವನ ಕಟ್ಟಡಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಕೌಜಲಗಿ, ಉಪಾಧ್ಯಕ್ಷೆ ಮಾಳವ್ವ ಡಬಾಜ, ತಾಪಂ ಸದಸ್ಯೆ ಸಿದ್ದವ್ವ ಸಂಪಗಾರ, ಗ್ರಾಪಂ ಸದಸ್ಯರಾದ ಲಕ್ಕಪ್ಪ ರಾಜಾಪೂರೆ, ಭೀಮಪ್ಪ ಕುಂಗನೊಳ್ಳಿ, ಸಿದ್ದಪ್ಪ ಬಂಗಿ, ಸಿದ್ರಾಮ ಅರಭಾಂವಿ, ಈಶ್ವರ ದಂಡಿನ, ಭೀಮಶಿ ನಿಲಜಗಿ, ಸುರೇಶ ಭಜಂತ್ರಿ, ಮಾರುತಿ ಭಜಂತ್ರಿ, ಮರಗಪ್ಪ ಗಾಡಿವಡ್ಡರ, ಗಂಜಿ, ವಿಠ್ಠಲ ಹರಿಜನ, ಕೆಂಚಪ್ಪ ರಾಜಾಪೂರೆ, ಕಾಮಪ್ಪ ಸಂಪಗಾರ, ಕೆಂಪಣ್ಣ ಸಂಪಗಾರ, ರಾಜಪ್ಪ ಹುಲಿಕಟ್ಟಿ, ಅಲ್ಲಪ್ಪ ಹುಲಿಕಟ್ಟಿ, ಮಲ್ಲಪ್ಪ ಹುಲಿಕಟ್ಟಿ, ಭೀರಪ್ಪ ಡಬಾಜ, ವಿಠ್ಠಲ ಹನಮನ್ನವರ, ರಾಮಪ್ಪ ಡಬಾಜ, ವಿಠ್ಠಲ ಬಂಗಿ, ಹಿರಿಯರಾದ ಮಲ್ಲಪ್ಪ ಕಮತಿ, ವಿಠ್ಠಲ ಮೆಳವಂಕಿ, ಲಕ್ಷ್ಮಣ ಡಬಾಜ, ಭೀರಪ್ಪ ಸಂಪಗಾರ, ಈರಪ್ಪ ಕಾವಲಿ, ಮಹಾದೇವ ಬನ್ನೂರೆ, ಗ್ರಾಪಂ ಪಿಡಿಓ ಎಸ್ ಎಲ್ ಬಬಲಿ ಸೇರಿದಂತೆ ಗ್ರಾಮಸ್ಥರು, ಯುವಕರು ಇತರರು ಇದ್ದರು.