RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮುಗಿದು ಹೋದ ಅಧ್ಯಾಯ : ಶಾಸಕ ರಮೇಶ

ಗೋಕಾಕ:ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮುಗಿದು ಹೋದ ಅಧ್ಯಾಯ : ಶಾಸಕ ರಮೇಶ 

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮುಗಿದು ಹೋದ ಅಧ್ಯಾಯ : ಶಾಸಕ ರಮೇಶ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 10 :
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮುಗಿದು ಹೋದ ಅಧ್ಯಾಯ ಎಂದು ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಶನಿವಾರದಂದು ತಾಲೂಕಿನ ಅಂಕಲಗಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಈ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರ ಮಾಡಿದ್ದು ನಿಜ. ಆದರೆ ನನ್ನ ಹಿತೈಷಿಗಳು, ಸ್ವಾಮೀಜಿಗಳು ರಾಜೀನಾಮೆ ನೀಡದಂತೆ ಸಲಹೆ ನೀಡಿದ ಹಿನ್ನೆಲೆ ರಾಜೀನಾಮೆ ವಿಚಾರ ಕೈಬಿಟ್ಟಿದ್ದೇನೆ ಎಂದರು.
ಕೆ.ಆರ್.ಎಸ್ ಡ್ಯಾಮ್ ಬಿರುಕಿನ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ ಸಂಸದೆ ಸಮಲತಾ ಅಂಬರೀಶ್ ನಡುವೆ ನಡೆದ ವಾಕ್ಸಮರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಾರು ಏನ್ ಮಾತನಾಡಿದ್ದಾರೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಎಮ್.ಡಿ ಅವರು ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಎಮ್.ಡಿ ಹೇಳುವುದು ಫೈನಲ್. ಸುಮಲತಾ ಅವರು ಯಾಕೆ ಹೀಗೆ ಹೇಳಿದರು ಅಂತ ನನಗೆ ಗೊತ್ತಿಲ್ಲ ಎಂದರು.
ಬಾಲಚಂದ್ರ ಜಾರಕಿಹೊಳಿ, ರಮೇಶ ಜಾರಕಿಹೊಳಿ ಜಂಟಿ ಸುದ್ದಿಗೋಷ್ಠಿ ವಿಚಾರಕ್ಕೆ ಉತ್ತರಿಸಿದ ಅವರು, ಬಾಲಚಂದ್ರ ಜಾರಕಿಹೊಳಿ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಉರಲ್ಲಿ ಇರಲಿಲ್ಲ. ಸುದ್ದಿಗೋಷ್ಠಿ ಮಾಡುವ ಸಂದರ್ಭ ಬಂದಿಲ್ಲ. ಬಾಲಚಂದ್ರ ಜಾರಕಿಹೊಳಿ ಜತೆಗೆ ಈ ಬಗ್ಗೆ ಮಾತನಾಡುತ್ತೇನೆ. ನಾನು ಒಂಟಿ ಆಗುವ ಪ್ರಶ್ನೆಯೇ ಇಲ್ಲ. ನಾನೇ ಮಿತ್ರ ಮಂಡಳಿ ಸದಸ್ಯರನ್ನು ಭೇಟಿಯಾಗಿಲ್ಲ ಎಂದು ಉತ್ತರಿಸಿದರು.

Related posts:

ವಿಶ್ವಶಾಂತಿಗಾಗಿ ಕೈಗೊಂಡ ರಮಜಾನ ತಿಂಗಳ ಉಪವಾಸಕ್ಕೆ ಇಂದು ವಿದಾಯ : ನಾಡಿನಾದ್ಯಂತ ಮುಸ್ಲಿಂ ಭಾಂಧವರಿಂದ ಇಂದು ಈದ್-ಉಲ್-…

ಮೂಡಲಗಿ:ಹಳ್ಳದ ನೀರಿನ ರಬಸಕ್ಕೆ ಸಿಲುಕಿದ ವಿದ್ಯಾರ್ಥಿಗಳನ್ನು ರಕ್ಷಿಸಿರುವ ಮಕ್ಕಳ ದೈರ್ಯ ಮೆಚ್ಚುವಂತಹದ್ದು : ಎ.ಸಿ ಗಂಗ…

ಗೋಕಾಕ:ಮಂಗಳವಾರ ರಾತ್ರಿ 8 ಘಂಟೆಯಿಂದ 8 ದಿನಗಳಕಾಲ ಗೋಕಾಕ ಮತ್ತು ಮೂಡಲಗಿ ತಾಲೂಕ ಸಂಪೂರ್ಣ ಲಾಕಡೌನ : ಸಚಿವ ರಮೇಶ ಜಾರಕಿ…