ಗೋಕಾಕ:ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ
ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 10 :
ಇಲ್ಲಿಯ ಗೋಕಾಕ ಶಿಕ್ಷಣ ಸಂಸ್ಥೆಯ ಜಿಇಎಸ್ ಪ್ರೌಢ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಾದ ಕುಮಾರಿ ಪ್ರೀತಿ ಪತ್ತಾರ, ಸುಮಂಗಲಾ ಮನ್ನಿಕೇರಿ ಅವರು ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ತೆರ್ಗಡೆ ಹೊಂದಿ ವಿದ್ಯಾರ್ಥಿ ವೇತನಕ್ಕೆ ಭಾಜನರಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ಚೇರಮನ್ ವಿಶ್ವನಾಥ ಕಡಕೋಳ, ಕಾರ್ಯದರ್ಶಿ ಆರ್.ಎಮ್.ವಾಲಿ, ಗಣಿತ ಶಿಕ್ಷಕರಾದ ಎಸ್.ಕೆ.ಇಂಗಳೆ, ಆಡಳಿತ ಮಂಡಳಿಯ ಸದಸ್ಯರು, ಮುಖ್ಯೋಪಾಧ್ಯಯರು, ಶಿಕ್ಷಕರು ಸಿಬ್ಬಂದಿಯರು ಅಭಿನಂದಿಸಿದ್ದಾರೆ.