RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:‘ಸಮಾಜ ಸೇವೆ ಮೂಲಕ ಮನಸ್ಸಿಗೆ ದೊರೆಯುವ ನೆಮ್ಮದಿ ವಿಭಿನ್ನ’: ಎಂಜೆಎಫ್ ಸುಗಲಾ ಯಲಮಳ್ಳಿ

ಗೋಕಾಕ:‘ಸಮಾಜ ಸೇವೆ ಮೂಲಕ ಮನಸ್ಸಿಗೆ ದೊರೆಯುವ ನೆಮ್ಮದಿ ವಿಭಿನ್ನ’: ಎಂಜೆಎಫ್ ಸುಗಲಾ ಯಲಮಳ್ಳಿ 

‘ಸಮಾಜ ಸೇವೆ ಮೂಲಕ ಮನಸ್ಸಿಗೆ ದೊರೆಯುವ ನೆಮ್ಮದಿ ವಿಭಿನ್ನ’: ಎಂಜೆಎಫ್ ಸುಗಲಾ ಯಲಮಳ್ಳಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 11 :

 

‘ಸಮಾಜ ಸೇವೆ ಗೈಯುವ ಮೂಲಕ ಮನಸ್ಸಿಗೆ ದೊರೆಯುವ ನೆಮ್ಮದಿ ಇತರೆಲ್ಲ ನೆಮ್ಮದಿಗಳಿಗಿಂತ ವಿಭಿನ್ನ’ ಎಂದು ಗದಗ ಜಿಲ್ಲಾ ಲಯನ್ಸ್ ಕ್ಲಬ್’ನ ಲಯನ್ ಸುಗಲಾ ಯಲಮಳ್ಳಿ ಅರ್ಥೈಸಿದರು.
ಭಾನುವಾರ ಇಲ್ಲಿನ ಯೋಗಿಕೊಳ್ಳ ರಸ್ತೆಯ ಸ್ಪೈಸ್ ಗಾರ್ಡನ್‍ದಲ್ಲಿ ನಡೆದ ಲಯನ್ಸ್ ಕ್ಲಬ್ ಗೋಕಾಕ ಇದರ 43ನೇ ವಾರ್ಷಿಕ ಪದಾಧಿಕಾರಿಗಳ ಅಧಿಕಾರ ಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಹಸ್ತಾಂತರ ಅಧಿಕಾರಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಈ ಸಂಸ್ಥೆ ಕಳೆದ 43 ವರ್ಷಗಳಲ್ಲಿ ಗೈದ ಜನಸೇವೆಗಳನ್ನು ಪಟ್ಟಿಮಾಡಿ ಸಾಧನೆಯನ್ನು ಪ್ರಶಂಸಿಶಿದರು.
ಮಹಿಳೆ ಎಲ್ಲ ರಂಗಗಳಲ್ಲಿ ಪುರಷರ ಸರಿಸಮನಾಗಿ ಕಾರ್ಯ ನಿರ್ವಹಿಸುವ ಮೂಲಕ ಲಯನ್ಸ್ ಕ್ಲಬ್’ನ ಅಂತರಾಷ್ಟ್ರೀಯ ಮಟ್ಟದ ಹುದ್ದೆಗಳನ್ನು ಅಲಂಕರಿಸಿದ ನಿದರ್ಶನಗಳನ್ನು ವಿವರಿಸಿ ತಾವೂ ಅಂತಹ ಸಾಧನೆಯತ್ತ ಹೆಜ್ಜೆ ಹಾಕುತ್ತಿರುವ ಮನದ ಇಚ್ಛೆಯನ್ನು ಸಭಿಕರ ಎದುರು ತೆರೆದಿಟ್ಟರು.
ಕ್ಲಬ್’ನ ನೂತನ ಅಧ್ಯಕ್ಷರಾಗಿ ಜಿಲ್ಲಾ ನಿವೃತ್ತ ಸರ್ಜನ್ ಡಾ. ಅಶೋಕ ಮುರಗೋಡ, ಕಾರ್ಯದರ್ಶಿಯಾಗಿ ಮಹೇಂದ್ರ ಪೋರ್ವಾಲ್ ಮತ್ತು ಖಜಾಂಚಿಯಾಗಿ ಚಾರ್ಟರ್ಡ ಅಕೌಂಟಂಟ್ ಪುರುಷೋತ್ತಮ ಬಾಫನಾ ಮತ್ತು ತಂಡ ಅಧಿಕಾರ ಗ್ರಹಣ ಮಾಡಿತು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವೈದ್ಯ ಡಾ. ಅಶೋಕ ಮುರಗೋಡ ಅವರು ಮಾರ್ಮಿಕವಾಗಿ ಮಾತನಾಡಿ, ಕ್ಲಬ್ ಇದುವರೆಗೆ ಆರೋಗ್ಯ ಮತ್ತು ನೇತೃ ತಪಾಸಣೆ ಹಾಗೂ ನೇತೃದಾನ, ದೇಹದಾನ ಮಾಡುವಂತೆ ಸಾರ್ವಜನಿಕರನ್ನು ಪ್ರೇರೇಪಿಸುತ್ತಾ ಬಂದಿದ್ದು ಈ ಮೊದಲು ಗುರುದೇವ ಸಿದ್ಧಾಪೂರಮಠ ಅವರು ಆರಂಭಿಸಿದ್ದ ಅನ್ನದಾನ ದಾಸೋಹ ಕಾರಣಾಂತರಗಳಿಂದ ನಿಂತುಹೋಗಿದ್ದು ಅದನ್ನು ಮತ್ತೇ ಮುಂದುವರೆಸಲು ನಾನು ಉತ್ಸುಕನಾಗಿದ್ದೇನೆ. ಅದರೊಂದಿಗೆ ಲಯನ್ಸ್ ನೇತೃ ಆಸ್ಪತ್ರೆ ಆರಂಭಿಸಬೇಕೆಂಬ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ನಮ್ಮ ತಂಡದ ಕಾರ್ಯಾವಧಿಯಲ್ಲಿ ಯತ್ನಿಸುವುದಾಗಿ ಪ್ರಕಟಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರವೀಂದ್ರ ಅಂಟಿನ ಹಾಗೂ.
ವೇದಿಕೆಯಲ್ಲಿ ತಾಲ್ಲೂಕು ಆರೋಗ್ಯಾಧಿüಕಾರಿ ಡಾ. ಮುತ್ತಣ್ಣ ಕೊಪ್ಪದ ಮತ್ತಿತರರು ಇದ್ದರು.
ಕಾರ್ಯದರ್ಶಿ ಶ್ರೀಶೈಲ ಹಂಜಿ ವರದಿ ವಾಚನ ಮಂಡಿಸಿದರು. ದೀಪಾ ಬೆಲ್ಲದ ಅತಿಥಿ ಪರಿಚಯಿಸಿದರೆ, ‘ಅನ್ನದಾಸೋಹ’ ರೂವಾರಿ ಎಂಜೆಎಫ್ ಲಯನ್ ವಕೀಲ ಗುರುದೇವ ಸಿದ್ಧಾಪೂರಠ ನೂತನ ಅಧ್ಯಕ್ಷರ ಕಿರು ಪರಿಚಯ ನೀಡಿದರು.
ಡಾ. ಅಶೋಕ ಪಾಟೀಲ ಸ್ವಾಗತಿಸಿದರು. ಶೈಲಜಾ ಕೊಕರಿ ನಿರೂಪಿಸಿದರು. ಡಾ. ರಮೇಶ ಪಟಗುಂದಿ ವಂದಿಸಿದರು.

Related posts: