RNI NO. KARKAN/2006/27779|Tuesday, November 26, 2024
You are here: Home » breaking news » ಕೌಜಲಗಿ:ಕರ್ತವ್ಯದಲ್ಲಿ ಲೋಪ ಎಸಗುತ್ತಿರುವ ಕೌಜಲಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ರವಿ ನಾಡಗೌಡರ

ಕೌಜಲಗಿ:ಕರ್ತವ್ಯದಲ್ಲಿ ಲೋಪ ಎಸಗುತ್ತಿರುವ ಕೌಜಲಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ರವಿ ನಾಡಗೌಡರ 

ಕರ್ತವ್ಯದಲ್ಲಿ ಲೋಪ ಎಸಗುತ್ತಿರುವ ಕೌಜಲಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ರವಿ ನಾಡಗೌಡರ

 
ಕೌಜಲಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರದಂದು ಲಸಿಕೆ ಪಡೆಯಲು ಪರದಾಡುತ್ತಿರುವ ಜನತೆ

 

ನಮ್ಮ ಬೆಳಗಾವಿ ಇ – ವಾರ್ತೆ, ಕೌಜಲಗಿ ಜು 16 :

ಕೌಜಲಗಿ ಗ್ರಾಮ ಪಂಚಾಯತ್ ಒತ್ತಾಯದ ಮೇರೆಗೆ ಗೋಕಾಕ್ ತಾಲೂಕ ಆರೋಗ್ಯ ವೈದ್ಯಾಧಿಕಾರಿಗಳು 1 ವಾರದ ಹಿಂದೆ ಕೌಜಲಗಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗಲೆಂದು ಎರಡುನೂರು ವ್ಯಾಕ್ಸಿನ್ ಲಸಿಕೆಗಳನ್ನು ಕಳುಹಿಸಿಕೊಟ್ಟಿದ್ದರು ಆದರೆ ಕೌಜಲಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ರವಿ ನಾಡಗೌಡರ ಲಸಿಕೆಗಳನ್ನು ಸ್ವೀಕರಿಸದೆ ಆರೋಗ್ಯ ಅಧಿಕಾರಿಗಳಿಗೆ ಮರಳಿ ಕಳುಹಿಸಿದ್ದಾರೆ ಎಂದು ಕೌಜಲಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ ಆರೋಪಿಸಿದ್ದಾರೆ.
ಕೋವಿಡ್ ಮೂರನೆಯ ಅಲೆಯ ಬರುವಿಕೆಯ ಹಿನ್ನೆಲೆಯಲ್ಲಿ ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕೆಂದು ಪ್ರತಿಯೊಬ್ಬರೂ ಕಾಳಜಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿತ್ಯವೂ ಬಂದು ಹೋಗುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮತ್ತೆ ಗೋಕಾಕ್ ತಾಲೂಕ ಆರೋಗ್ಯ ಅಧಿಕಾರಿಗಳಿಗೆ ಭೇಟಿಯಾಗಿ ಲಸಿಕೆಗಳನ್ನು ಶುಕ್ರವಾರದಂದು ತರಿಸಲಾಗಿದೆ. ಲಸಿಕೆಗಳನ್ನಾದರೂ ಸರಿಯಾದ ರೀತಿಯಲ್ಲಿ ಜನತೆಗೆ ಮುಟ್ಟಿಸುವಲ್ಲಿ ವೈದ್ಯಾಧಿಕಾರಿ ವಿಫಲನಾಗಿದ್ದಾನೆ. ಮುಂಜಾನೆಯಿಂದ ಸಾಯಂಕಾಲದವರೆಗೂ ಜನ ಉಪವಾಸದಿಂದ ಲಸಿಕೆಗಾಗಿ ಕಾಯುತ್ತಿದ್ದರೂ ವೈದ್ಯಾಧಿಕಾರಿ ತನ್ನ ಕೊಠಡಿಯನ್ನು ಬಿಟ್ಟು ಒಂದು ಕ್ಷಣವೂ ಹೊರಗೆ ಬಂದು ರೋಗಿಗಳನ್ನು ಪರೀಕ್ಷಿಸುವುದಾಗಲಿ, ಅವರ ಆರೋಗ್ಯವನ್ನು ವಿಚಾರಿಸುವುದಾಗಲಿ, ಲಸಿಕೆಗಳು ಸರಿಯಾದ ರೀತಿಯಲ್ಲಿ ವಿತರಣೆಯಾಗುತ್ತಿದೆಯೇ ಎಂದು ಯೋಚನೆ ಮಾಡದೆ ಸುಮ್ಮನೆ ಕುಳಿತಿರುವುದು ವೈದ್ಯಾಧಿಕಾರಿಗಳ ಕರ್ತವ್ಯ ಲೋಪವಾಗಿದೆ ಎಂದು ಹೇಳಿದರು. ಜನತೆಗೆ ಆರೋಗ್ಯವನ್ನು ನೀಡಿ ದೇವರ ಸಮಾನವಾಗಿ ಕಾಣಬೇಕಾಗಿದ್ದ ವೈದ್ಯರು ಯಮನಾಗಿ ಕಾಣುತ್ತಿದ್ದಾರೆ. ಇಂಥವರು ನಮ್ಮ ಊರಿನಲ್ಲಿರುವುದು ಸೂಕ್ತವಲ್ಲ. ಇಂಥವರನ್ನು ವರ್ಗಾಯಿಸಬೇಕೆಂದು ಪಟ್ಟಣದ ಸಮಸ್ತ ಜನತೆ ಸ್ಥಳೀಯ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರಲ್ಲಿ ಒತ್ತಾಯಿಸಿದ್ದಾರೆ. ಶುಕ್ರವಾರದಂದು ಲಸಿಕೆಗಾಗಿ ಕಿಕ್ಕಿರಿದು ನಿಂತಿದ್ದ ಜನರಗೆ ವೈದ್ಯಾಧಿಕಾರಿ ಸರಿಯಾಗಿ ಸ್ಪಂದಿಸದೇ ಇರುವುದರಿಂದ ಆಯುಷ್ ವೈದ್ಯರಾದ ಡಾ. ಪ್ರಶಾಂತ ಸಣ್ಣಕ್ಕಿ ಹಾಗೂ ಆಸ್ಪತ್ರೆಯ ಶುಶ್ರುಕಿಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದ ಲಸಿಕೆಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರ ಪುತ್ರ ವೆಂಕಟೇಶ ದಳವಾಯಿ, ಗ್ರಾ.ಪಂ. ಸದಸ್ಯ ಶಿವಾನಂದ ಭಜಂತ್ರಿ, ಬಸವರಾಜ ಲೋಕಣ್ಣವರ, ಮಂಜುನಾಥ ಭೋವಿ ಮುಂತಾದವರಿದ್ದರು.

Related posts: