ಗೋಕಾಕ:ಪ್ರವಾಹ ಮತ್ತು ಕೊರೋನಾ ತಡೆಗೆ ಪ್ರಥಮ ಆಧ್ಯತೆ ನೀಡಿ : ಅಧಿಕಾರಿಗಳಿಗೆ ಶಾಸಕ ರಮೇಶ ಸೂಚನೆ
ಪ್ರವಾಹ ಮತ್ತು ಕೊರೋನಾ ತಡೆಗೆ ಪ್ರಥಮ ಆಧ್ಯತೆ ನೀಡಿ : ಅಧಿಕಾರಿಗಳಿಗೆ ಶಾಸಕ ರಮೇಶ ಸೂಚನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 19 :
ಪ್ರವಾಹ ಮತ್ತು ಕೊರೋನಾ ತಡೆಗೆ ಪ್ರಥಮ ಆಧ್ಯತೆ ನೀಡಿ ಅಧಿಕಾರಿಗಳು ಕಾರ್ಯ ನಿರ್ವಹಿಸಿಬೇಕೆಂದು ಮಾಜಿ ಸಚಿವ ಶಾಸಕ ರಮೇಶ ಜಾರಕಿಹೊಳಿ ಹೇಳಿದರು
ಸೋಮವಾರದಂದು ನಗರದ ತಮ್ಮ ಕಾರ್ಯಾಲಯದಲ್ಲಿ ನಡೆದ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರವಾಹ ಬಂದು ಮುಳುಗಡೆ ಯಾಗುವ ಜಮೀನುಗಳಿಗೆ ಯಾವುದೇ ತೊಂದರೆ ಆಗದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಿ ಕಾರ್ಯಮಾಡಬೇಕು
ತುರ್ತು ಸಂಧರ್ಭದಗಳಲ್ಲಿ ಪೋಲೀಸ ಇಲಾಖೆ ಹಾಗೂ ಇತರೇ ಇಲಾಖೆಯ ಅಧಿಕಾರಿಗಳು ತಾಲೂಕಾಡಳಿತ ಜೊತೆಗೆ ಕೈ ಜೋಡಿಸಿ ಕಾರ್ಯಮಾಡಿದಾಗ ಮಾತ್ರ ಸಂಭಾವ್ಯ ಪ್ರವಾಹ ಹಾಗೂ ಕೊರೋನಾದಂತಹ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಆ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು .
ತಾಲೂಕಿನಾದ್ಯಂಥ ಮಂಗಾರು ಚುರುಕುಗೊಂಡಿದ್ದು ಬೀಜ ವಿತರಣೆಯಲ್ಲಿ ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಂಡು, ಸೊಸೈಟಿಯಲ್ಲಿ ಬೀಜ ಮಾರಾಟಮಾಡದೆ ಕೃಷಿ ಇಲಾಖೆಯಿಂದ ತೆರೆದಿರುವ ಬೀಜ ವಿತರಣಾ ಕೇಂದ್ರಗಳಿಂದಲೆ ಬೀಜ ಹಾಗೂ ಗೊಬ್ಬರ ವಿತರಣೆಯಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.
ತಾಲೂಕಿನಾದ್ಯಂಥ ನಿರಂತರ ಜ್ಯೋತಿಗಾಗಿ ಸರಕಾರದಿಂದ ಬಿಡುಗಡೆಯಾದ ಅನುದಾನವನ್ನು ಸೂಕ್ತವಾಗಿ ಬಳಸಿಕೊಂಡು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶೀಘ್ರದಲ್ಲೇ ಯೋಜನೆಯನ್ನು ಅನುಷ್ಠಾನಗೊಳಿಸಲು ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೆಇಬಿ ಶುಲ್ಕ ಪಾವತಿಸಲು ಮತ್ತು ದೂರು ದಾಖಲಿಸಲು ಅನುಕೂಲವಂತೆ ನಗರದ ಮಧ್ಯೆ ಬಾಗದಲ್ಲಿ ಹೊಸ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವದ ಎಂದ ಅವರು
ತಾಲೂಕಿನಾದ್ಯಂಥ ಇರುವ 2.14 ಲಕ್ಷ ಜಾನುವಾರುಗಳಿಗೆ ಯಾವುದೇ ತೊಂದರೆಯಾಗದಂತೆ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡು ಜಾನುವಾರುಗಳಿಗೆ ಔಷಧಿ ಹಾಗೂ ಲಸಿಕೆ ನೀಡಬೇಕೆಂದು ಶಾಸಕ ರಮೇಶ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ , ಡಿ.ವಾಯ್.ಎಸ್.ಪಿ ಮನೋಜಕುಮಾರ ನಾಯಿಕ, ಪೌರಾಯುಕ್ತ ಶಿವಾನಂದ ಹಿರೇಮಠ, ತಾಲೂಕಾ ವೈದ್ಯಾಧಿಕಾರಿ ಡಾ.ಮುತ್ತಣ್ಣ ಕೊಪ್ಪದ, ವಲಯ ಅರಣ್ಯ ಅಧಿಕಾರಿ ಕೆ.ಎನ್.ವಣ್ಣೂರ, ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ , ಸಿಪಿಐ ಗೋಪಾಲ ರಾಠೋಡ, ಎಂ.ಎಲ್.ಜನ್ಮಟ್ಟಿ, ಎಂ.ಎಂ ನಧಾಪ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.