RNI NO. KARKAN/2006/27779|Thursday, March 13, 2025
You are here: Home » breaking news » ಗೋಕಾಕ:ಪರಿಸರ ರಕ್ಷಣೆಯ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಿ : ವಲಯ ಅರಣ್ಯ ಅಧಿಕಾರಿ ಕೆ.ಎನ್.ವಣ್ಣೂರ

ಗೋಕಾಕ:ಪರಿಸರ ರಕ್ಷಣೆಯ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಿ : ವಲಯ ಅರಣ್ಯ ಅಧಿಕಾರಿ ಕೆ.ಎನ್.ವಣ್ಣೂರ 

ಪರಿಸರ ರಕ್ಷಣೆಯ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಿ : ವಲಯ ಅರಣ್ಯ ಅಧಿಕಾರಿ ಕೆ.ಎನ್.ವಣ್ಣೂರ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 29 :

 

ಮಾನವರ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುವ ಪರಿಸರ ರಕ್ಷಣೆಯ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳುವಂತೆ ವಲಯ ಅರಣ್ಯ ಅಧಿಕಾರಿ ಕೆ.ಎನ್.ವಣ್ಣೂರ ಹೇಳಿದರು .
ಗುರುವಾರದಂದು ನಗರದಲ್ಲಿ ಜೆಸಿಐ ಸಂಸ್ಥೆಯವರು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದರು.

ಇಂದಿನ ಆಧುನಿಕ ಜೀವನ ಶೈಲಿಯಿಂದ ಪರಿಸರದ ಮೇಲೆ ಹಾನಿ ಯಾಗುತ್ತಿದ್ದು, ಇದರಿಂದ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ. ಅರಣ್ಯವನ್ನು ಉಳಿಸಿ ಬೆಳೆಸುವದೆ ಇದಕ್ಕೆ ಪರಿಹಾರವಾಗಿದೆ. ಸಂಘ ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸಿ ಅರಣ್ಯ ಬೆಳೆಸಲು ಇಲಾಖೆಯೊಂದಿಗೆ ಕೈ ಜೋಡಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪಕಾರಾಗೃಹ ಅಧೀಕ್ಷಕ ಅಬಂರಿಷ ಪೂಜೇರಿ , ಸಹಾಯಕ ಕಾರ್ಯನಿರ್ವಾಹಕ ಆಭಿಯಂತರ ಐ.ಎಂ ದಫೇದಾರ, ಉಪ ವಲಯ ಅರಣ್ಯ ಅಧಿಕಾರಿ ಹನುಮಂತ ಇಂಗಳಗಿ, ಜೆಸಿಐ ಅಧ್ಯಕ್ಷ ಚಂದ್ರಶೇಖರ್ ಕಡೆವಾಡಿ, ಕಾರ್ಯದರ್ಶಿ ಶೇಖರ ಉಳ್ಳೇಗಡ್ಡಿ, ಪೂರ್ವಾಧ್ಯಕ್ಷ ರಜನಿಕಾಂತ್ ಮಾಳೋದೆ, ಪದಾಧಿಕಾರಿಗಳಾದ ರಾಚ್ಚಪ್ಪ ಅಮ್ಮಣಗಿ, ಸಂತೋಷ ಹವಾಲದಾರ, ಮೀನಾಕ್ಷಿ ಸವದಿ, ಕವಿತಾ ತುಪ್ಪದ , ಡಾ.ಪ್ರಮೋದ ಎತ್ತಿನಮನಿ, ಡಾ.ರಮಾಕಾಂತ ಕೋಸಂದಲ, ಪ್ರಕಾಶ ವರ್ಜಿ, ಭಗಿರಥಿ ನಂದಗಾವಿ, ಶಕೀಲ ಜಕಾತಿ ಸೇರಿದಂತೆ ಅನೇಕರು ಇದ್ದರು.

Related posts: