RNI NO. KARKAN/2006/27779|Wednesday, December 25, 2024
You are here: Home » breaking news » ಗೋಕಾಕ:ಕರೋನಾ ಹಾಗೂ ಪ್ರವಾಹದಂತಹ ಸಂಕಷ್ಟದ ಸಮಯವನ್ನು ಧೈರ್ಯದಿಂದ ಎದುರಿಸಿ : ಡಾ‌. ಶ್ರೀ ಶಿವಮೂರ್ತಿ ಮುರುಘಾ ಶರಣರ ಅಭಯ

ಗೋಕಾಕ:ಕರೋನಾ ಹಾಗೂ ಪ್ರವಾಹದಂತಹ ಸಂಕಷ್ಟದ ಸಮಯವನ್ನು ಧೈರ್ಯದಿಂದ ಎದುರಿಸಿ : ಡಾ‌. ಶ್ರೀ ಶಿವಮೂರ್ತಿ ಮುರುಘಾ ಶರಣರ ಅಭಯ 

ಕರೋನಾ ಹಾಗೂ ಪ್ರವಾಹದಂತಹ ಸಂಕಷ್ಟದ ಸಮಯವನ್ನು ಧೈರ್ಯದಿಂದ ಎದುರಿಸಿ : ಡಾ‌. ಶ್ರೀ ಶಿವಮೂರ್ತಿ ಮುರುಘಾ ಶರಣರ ಅಭಯ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 29 :

 
ಕರೋನಾ ಹಾಗೂ ಪ್ರವಾಹದಂತಹ ಸಂಕಷ್ಟದ ಸಮಯವನ್ನು ಜನರು ಧೈರ್ಯದಿಂದ ಎದುರಿಸಿ ನಿಮ್ಮೋಂದಿಗೆ ನಾವಿದ್ದೇವೆ ಎಂದು ಚಿತ್ರದುರ್ಗದ ಬಸವಕೇಂದ್ರ ಶ್ರೀಮುರುಘಾಮಠದ ಪರಮ ಪೂಜ್ಯ ಡಾ‌. ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು

ಗುರುವಾರದಂದು ಪ್ರವಾಹ ಪೀಡಿತ ತಾಲೂಕಿನ ಆಡಿಬಟ್ಟಿ ಗ್ರಾಮದ 425 ಸಂತ್ರಸ್ತರಿಗೆ ಚಿತ್ರದುರ್ಗ ಶ್ರೀಮಠದ ವತಿಯಿಂದ ಆಹಾರ ಕಿಟಗಳನ್ನು ವಿತರಿಸಿ ಅವರು ಮಾತನಾಡಿದರು

12 ನೇ ಶತಮಾನದಲ್ಲಿ ಬಸವಣ್ಣನವರ ಕಲ್ಯಾಣಕ್ಕೆ ಕರೆ ನೀಡಿದರು ಆದರೆ ಪ್ರಸ್ತುತ ಸಂಧರ್ಭದಲ್ಲಿ ಪ್ರಕೃತಿ ನಮಗೆ ನಮ್ಮ ಕರ್ತವ್ಯದ ಕಡೆ ಕರೆ ನೀಡುತ್ತಿದೆ. ಆ ದಿಸೆಯಲ್ಲಿ ರಾಜಕಾರಣಿಗಳು, ಸಮಾಜ ಸೇವಕರು, ಸಂತರು, ಶರಣರು , ಮಠಾಧೀಶರು ನಾಡಿನಲ್ಲಿ ಸಂಕಷ್ಟವನ್ನು ಎದುರಿಸುತ್ತಿರುವವರ ಸಹಾಯಕ್ಕೆ ದಾವಿಸಬೇಕೆಂದು ಕರೆ ನೀಡಿದ ಶ್ರೀಗಳು ದೇವರ ಪೂಜೆಗಿಂತ ಹೆಚ್ಚಿನ ಸಂತೋಷ ಸಮಾಜ ಸೇವೆ ಮಾಡಿದಾಗ ಆಗುತ್ತದೆ . ಮಾನವನ ಜೀವನ ಇಂದು ತತ್ತರಿಸಿ ಹೋಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ಕರ್ತವ್ಯ ಏನೆಂದು ಅರಿತು ಸಮಾಜ ಕಟ್ಟುವ ಕಾರ್ಯ ಸರ್ಮಥವಾಗಿ ನಡೆಯಬೇಕಾಗಿದೆ. ಕೊರೋನಾ ಸಂಧರ್ಭದಲ್ಲಿಯೂ ಸಹ ಚಿತ್ರದುರ್ಗದ ಮಠಕ್ಕೆ ಸಂಕಷ್ಟಕ್ಕೆ ಸಿಲುಕಿದವರನ್ನು ಕರೆಯಿಸಿ ಎಲ್ಲಾ ಸಮುದಾಯದ ಜನಾಂಗಕ್ಕೆ ಸಹಾಯ ಮಾಡಲಾಗಿದೆ.ರಾಜಕೀಯ ಕ್ಷೇತ್ರ ಇರಬಹುದು ಧಾರ್ಮಿಕ ಕ್ಷೇತ್ರ ಇರಬಹುದು ಮತ್ತು ಬೇರೆ ಬೇರೆ ಸಂಘ ಸಂಸ್ಥೆಗಳ ಕೆಲಸ ಇಂತಹ ಸಂದರ್ಭದಲ್ಲಿ ಒಂದೇ ಯಾಗಿದೆ. ಆ ನಿಟ್ಟಿನಲ್ಲಿ ಶ್ರೀ ಮಠದಿಂದ ಕೈಲಾದಷು ಸಹಾಯ ಮಾಡಲಾಗುತ್ತಿದೆ ಎಂದು ಡಾ.ಮುರುಘಾ ಶರಣರು ಹೇಳಿದರು.

ಈ ಸಂದರ್ಭದಲ್ಲಿ ಶೂನ್ಯ ಸಂಪಾದನ ಮಠದ ಶ್ರೀ ಮುರುಘಾಜೇಂದ್ರ ಮಹಾಸ್ವಾಮಿಗಳು ಅಥಣಿಯ ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು , ಘಟಪ್ರಭಾದ ಗುಬ್ಬಲಗುಡ್ಡ ಶ್ರೀ ಕೆಂಪಯ್ಯಸ್ವಾಮಿ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಜಿ, ರಾಮದುರ್ಗ ಬಟಕುರ್ಕಿಯ ಬಸವಪ್ರಭು ಸ್ವಾಮಿಗಳು , ಕಪರಟ್ಟಿ ಕಳ್ಳಿಗುದ್ದಿಯ ಶ್ರೀ ಬಸವರಾಜ ಸ್ವಾಮಿಗಳು, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಿಂಗಪ್ಪ ಕುರಬೇಟ, ಬಸವರಾಜ ಕಡಾಡಿ, ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಯಲವ್ವ ಶಿಂತ್ರೆ, ಮುಖಂಡರಾದ ಆನಂದ ಮೂಡಲಗಿ, ಅಡಿವೆಪ್ಪ ಕಂಕ್ರಾಳಿ, ನಿಂಗಪ್ಪ ಶಿಂತ್ರೆ, ಸದಾಶಿವ ಮೂಡಲಗಿ, ಬಾಳಪ್ಪ ಮೆಳವಂಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: