RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ನೂತನ ಸಿಎಂ ಬೊಮ್ಮಾಯಿ ಸಮತೋಲನ ಆಡಳಿತ ನೀಡುತ್ತಾರೆ ಎಂಬ ವಿಶ್ವಾಸ ವಿದೆ : ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು

ಗೋಕಾಕ:ನೂತನ ಸಿಎಂ ಬೊಮ್ಮಾಯಿ ಸಮತೋಲನ ಆಡಳಿತ ನೀಡುತ್ತಾರೆ ಎಂಬ ವಿಶ್ವಾಸ ವಿದೆ : ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು 

ನೂತನ ಸಿಎಂ ಬೊಮ್ಮಾಯಿ ಸಮತೋಲನ ಆಡಳಿತ ನೀಡುತ್ತಾರೆ ಎಂಬ ವಿಶ್ವಾಸ ವಿದೆ : ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 29 :


ಮಾಜಿ ಸಿಎಂ ಯಡಿಯೂರಪ್ಪ ನವರ ಸರಕಾರ ನೀಡಿದ ಹೊಸ ಹೊಸ ಯೋಜನೆಗಳನ್ನು ಮತ್ತು ಜನಹಿತ ಕಾರ್ಯಗಳನ್ನು ಅನುಷ್ಠಾನ ಗೋಳಿಸುವ ಮೂಲಕ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಅವರ ಮಾರ್ಗದರ್ಶನದಲ್ಲಿ ಸಮತೋಲನ ಆಡಳಿತ ರಾಜ್ಯಕ್ಕೆ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ಚಿತ್ರದುರ್ಗ ಮುರಘಾ ಮಠದ ಪರಮ ಪೂಜ್ಯ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಗುರುವಾರದಂದು ಪ್ರವಾಹದಿಂದ ಸಂಪೂರ್ಣ ಮುಳುಗಡೆಯಾದ ತಾಲೂಕಿನ ಅಡಿಬಟ್ಟಿ ಗ್ರಾಮದ ಜನರಿಗೆ ಶ್ರೀ ಮಠದಿಂದ ಆಹಾರ ಕಿಟಗಳನ್ನು ವಿತರಿಸಲು ಬಂದ ಸಂಧರ್ಭದಲ್ಲಿ ನಗರ ಶೂನ್ಯ ಸಂಪಾದನ ಮಠಕ್ಕೆ ಭೇಟಿ ನೀಡಿ ಶ್ರೀ ಮುರುಘಾಜೇಂದ್ರ ಮಹಾಸ್ವಾಮಿಗಳಿಂದ ಪಾದಪೂಜೆ ಸ್ವೀಕರಿಸಿ ತಮ್ಮನ್ನು ಭೇಟಿಯಾದ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ರಾಜ್ಯ ಗೃಹ ಮಂತ್ರಿಯಾಗುವ ಜೊತೆಗೆ ಹಲವು ಮಹತ್ವದ ಇಲಾಖೆಗಳನ್ನು ನಿರ್ವಹಿಸಿದ ಅನುಭವ ವಿದೆ. ಕೊರೋನಾ ದಂತಹ ಸಮಯದಲ್ಲಿ ರಾಜ್ಯದ ಜನತೆಯ ಹಿತ ಕಾಪಡಲು ಕಠಿಣ ಕ್ರಮಗಳನ್ನು ತಗೆದುಕೊಂಡು ಜವಾಬ್ದಾರಿಯುತ್ತ ಕಾರ್ಯನಿರ್ವಹಿಸಿ ಒಳ್ಳೆಯ ಕಾರ್ಯಮಾಡಿದ್ದಾರೆ ಅವರಿಂದ ರಾಜ್ಯದ ಜನತೆ ಉತ್ತಮ ಆಡಳಿತ ನಿರೀಕ್ಷೆ ಮಾಡಿದೆ. ಮತ್ತು ಸಿಎಂ ಬೊಮ್ಮಾಯಿ ಜನರ ನಿರೀಕ್ಷೆ ತಕ್ಕಂತೆ ಕಾರ್ಯ ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪ ನವರನ್ನು ಬದಲಾವಣೆ ಮಾಡುವ ಸಂದರ್ಭದಲ್ಲಿ ರಾಜ್ಯದ ಮಠಾಧೀಶರು ಬಹಿರಂಗವಾಗಿ ಸಭೆಗಳನ್ನು ನಡೆಸಿ ಆವರು ಬೆಂಬಲಿಸಿದ್ದ ಕ್ರಮ ಎಷ್ಟು ಸೂಕ್ತ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸಂತರು, ಸ್ವಾಮಿಗಳು , ಶರಣರು ನೋವಿನಲ್ಲಿರುವ ಜನರಿಗೆ ಸಂತ್ವಾನ ಹೇಳುವುದು ಸಹಜ ಹಾಗಾಗಿ ಯಡಿಯೂರಪ್ಪ ನವರ ಸಂಕಷ್ಟ ಅನುಭವಿಸುವ ಸಂಧರ್ಭದಲ್ಲಿ ಸ್ವಾಮಿಗಳು ಅವರಿಗೆ ಧೈರ್ಯ ತುಂಬಿದ್ದಾರೆ. ಅದೇ ರೀತಿ ರಾಜ್ಯಾದ್ಯಂತ ಅಹಿಂದ ಚಳುವಳಿಯನ್ನು ಆರಂಬಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ನವರಿಗೂ ಸಹ ನಾವು ಬೆಂಬಲ ವ್ಯಕ್ತಪಡಿಸಿದ್ದೇವೆ ಈ ರೀತಿಯಾದಂತಹ ಸಮಯದಲ್ಲಿ ನಮ್ಮ ಜಾತ್ಯಾತೀತ , ಪಕ್ಷಾತೀತವಾಗಿ ನಿಲುವನ್ನು ಕಾಪಾಡಿಕೊಂಡು ಮಾರ್ಗದರ್ಶನ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಸ್ವಾಮಿಜಿಗಳ ನಿಲುವನ್ನು ಸರ್ಮಥಿಸಿಕೊಂಡರು .

ಈ ಸಂದರ್ಭದಲ್ಲಿ ಶೂನ್ಯ ಸಂಪಾದನ ಮಠದ ಶ್ರೀ ಮುರುಘಾಜೇಂದ್ರ ಮಹಾಸ್ವಾಮಿಗಳು ಅಥಣಿಯ ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು , ಘಟಪ್ರಭಾದ ಗುಬ್ಬಲಗುಡ್ಡ ಶ್ರೀ ಕೆಂಪಯ್ಯಸ್ವಾಮಿ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಜಿ, ರಾಮದುರ್ಗ ಬಟಕುರ್ಕಿಯ ಬಸವಪ್ರಭು ಸ್ವಾಮಿಗಳು , ಕಪರಟ್ಟಿ ಕಳ್ಳಿಗುದ್ದಿಯ ಶ್ರೀ ಬಸವರಾಜ ಸ್ವಾಮಿಗಳು ಉಪಸ್ಥಿತರಿದ್ದರು.

Related posts: