ಗೋಕಾಕ : ಲೋಳಸೂರ ಸೇತುವೆ ಆದಷ್ಟು ಬೇಗ ಸಂಚಾರಕ್ಕೆ ಮುಕ್ತ : ಸಂಸದೆ ಮಂಗಳಾ ಅಂಗಡಿ
ಲೋಳಸೂರ ಸೇತುವೆ ಆದಷ್ಟು ಬೇಗ ಸಂಚಾರಕ್ಕೆ ಮುಕ್ತ : ಸಂಸದೆ ಮಂಗಳಾ ಅಂಗಡಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 31 :
ಪ್ರವಾಹದಿಂದ ಹಾನಿಗೊಳಗಾದ ಲೋಳಸೂರ ಸೇತುವೆಯನ್ನು ಆದಷ್ಟು ಬೇಗ ಸಂಚಾರಕ್ಕೆ ಮುಕ್ತ ಗೋಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದೆ ಮಂಗಳಾ ಅಂಗಡಿ ಹೇಳಿದರು
ಶನಿವಾರದಂದು ಪ್ರವಾಹದಿಂದ ಹಾನಿಗೊಳಗಾದ ನಗರದ ಲೋಳಸೂರ ಸೇತುವೆಯನ್ನು ವಿಕ್ಷೀಸಿ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು .
ಲೋಳಸೂರ ಸೇತುವೆ ತುಂಬಾ ಹಳೆಯದಾಗಿದ್ದು, ಇದನ್ನು ಎತ್ತರಮಾಡಿ ಮರು ನಿರ್ಮಿಸಲು ಈಗಾಗಲೇ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರಕಾರಕ್ಕೆ ರೂ 30 ಕೋಟಿಯ ಪ್ರಸ್ಥಾವನೆ ಸಲ್ಲಿಸಿದ್ದು , ನೂತನ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿಯಾಗಿ ಸೇತುವೆಯನ್ನು ಶೀಘ್ರದಲ್ಲೇ ಮರು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವದು ಎಂದ ಅವರು ಪ್ರವಾಹದಿಂದ ಆದ ಬೆಳೆಹಾನಿಗೆ ಕೇಂದ್ರ ಸರಕಾರದಿಂದ ಅನುದಾನ ಬಿಡುಗಡೆ ಗೋಳಿಸಲು ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಗರದ ಶೂನ್ಯ ಸಂಪಾದನ ಮಠಕ್ಕೆ ಭೇಟಿ ನೀಡಿದ ಸಂಸದೆ ಮಂಗಳಾ ಅಂಗಡಿ ಅವರು ಶ್ರೀ ಮುರುಘಾಜೇಂದ್ರ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದರು.
ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನಾಗಾಭರಣ ಕೆ.ಪಿ , ಸಹಾಯಕ ಅಭಿಯಂತರ ಶೇಖಸಲಾವುದ್ದೀನ, ಪೌರಾಯುಕ್ತ ಶಿವಾನಂದ ಹಿರೇಮಠ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ, ವಿವಿಧ ಇಲಾಖೆಯ ಅಧಿಕಾರಿಗಳಾದ ಎಂ.ಎಲ್.ಜನ್ಮಟ್ಟಿ, ಎಂ.ಎಂ ನಧಾಪ, ಸೇರಿದಂತೆ ಇತರರು ಉಪಸ್ಥಿತರಿದ್ದರು