ಗೋಕಾಕ:ಇಂದು ರಾತಿ 9 ರಿಂದ ಸೋಮವಾರ ಬೆಳಿಗ್ಗೆ 5 ಘಂಟೆ ವರೆಗೆ ಗೋಕಾಕ ತಾಲೂಕು ಸಂಪೂರ್ಣ ಲಾಕ : ತಹಶೀಲ್ದಾರ ಪ್ರಕಾಶ ಮಾಹಿತಿ
ಇಂದು ರಾತಿ 9 ರಿಂದ ಸೋಮವಾರ ಬೆಳಿಗ್ಗೆ 5 ಘಂಟೆ ವರೆಗೆ ಗೋಕಾಕ ತಾಲೂಕು ಸಂಪೂರ್ಣ ಲಾಕ : ತಹಶೀಲ್ದಾರ ಪ್ರಕಾಶ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ ಅ 6 :
ಗೋಕಾಕ ನಗರ ಹಾಗೂ ತಾಲೂಕಿನಾದ್ಯಂತ ಅನ್ವಯವಾಗುವಂತೆ ಶುಕ್ರವಾರ ರಾತ್ರಿ 9 ಘಂಟೆಯಿಂದ ಸೋಮವಾರ ಬೆಳಗ್ಗೆ 5 ಘಂಟೆಯವರೆಗೆ ರಾಜ್ಯ ಸರಕಾರದ ಆದೇಶದಂತೆ ಸಂಪೂರ್ಣ ಲಾಕಡೌನ ಜಾರಿಯಲ್ಲಿರುತ್ತದೆ ಎಂದು ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು ನಾಳೆ ದಿ: 07 ಹಾಗೂ 08 ಆಗಸ್ಟ್ 2021 ರಂದು ಸರ್ಕಾರದ ನಿರ್ದೇಶನದಂತೆ ಸಂಪೂರ್ಣ ಲಾಕ್ ಡೌನ್ ಜಾರಿಯಾಗಳಲಿದ್ದು , ಪ್ರತಿದಿನ ರಾತ್ರಿ 9 ಘಂಟೆಯಿಂದ ಬೆಳಿಗ್ಗೆ 5 ಘಂಟೆಯವರೆಗೆ ನೈಟ್ ಕರ್ಪ್ಯೂ ಜಾರಿಯಲ್ಲಿರುತ್ತದೆ.
ಲಾಕಡೌನ ಜಾರಿಯಲ್ಲಿರುವುದರಿಂದ ಗೋಕಾಕ ತಾಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆಗಳು, ಹಾಲು ಮಾರಾಟ, ಪೆಟ್ರೋಲ್ ಪಂಪಗಳು, ಸರಕು ಸಾಗಣೆ ವಾಹನಗಳ ಸಂಚಾರ ಮತ್ತು ಅನುಮತಿ ಪಡೆದ ಮದುವೆ ಸಮಾರಂಭಗಳಿಗೆ ಮಾತ್ರ ಅವಕಾಶ ಇರುತ್ತದೆ. ಇವುಗಳನ್ನು ಹೊರತುಪಡಿಸಿ ಯಾವುದೇ ಸೇವೆಗಳಿಗೆ ಅವಕಾಶ ಇರುವುದಿಲ್ಲ. ಸಾರ್ವಜನಿಕರು ಸಹಕರಿಸಲು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಪ್ರಕಟಣೆಯಲ್ಲಿ ಕೋರಿದ್ದಾರೆ.