ಗೋಕಾಕ:ರಾಜ್ಯ ಸರ್ಕಾರದಿಂದ ವೀಕೆಂಡ್ ಕರ್ಫ್ಯೂ ಗೈಡ್‌ಲೈನ್ಸ್ ಪ್ರಕಟ : ತಹಶೀಲ್ದಾರ ಹೊಳೆಪ್ಪಗೋಳ
ರಾಜ್ಯ ಸರ್ಕಾರದಿಂದ ವೀಕೆಂಡ್ ಕರ್ಫ್ಯೂ ಗೈಡ್‌ಲೈನ್ಸ್ ಪ್ರಕಟ : ತಹಶೀಲ್ದಾರ ಹೊಳೆಪ್ಪಗೋಳ
ನಮ್ಮ ಬೆಳಗಾವಿ ಇ – ವಾರ್ತೆ,
ಶುಕ್ರವಾರ ರಾತ್ರಿ 9 ಗಂಟೆಯಿಂದ ವೀಕೆಂಡ್ ಕರ್ಫ್ಯೂ ಆರಂಭ ಆಗಲಿದೆ. ಸೋಮವಾರ ಮುಂಜಾನೆ 5 ಗಂಟೆವರೆಗೆ ವೀಕೆಂಡ್ ಕರ್ಫ್ಯೂ ಇರಲಿದೆ ಎಂದು ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ತಿಳಿಸಿದ್ದಾರೆ.
ಕಿರಾಣಿ, ಅಗತ್ಯವಸ್ತುಗಳ ಖರೀದಿಗೆ,ಬೀದಿಬದಿ ವ್ಯಾಪಾರಿಗಳಿಗೆ ಬೆಳಗ್ಗೆ 5 ರಿಂದ ಮಧ್ಯಾಹ್ನ 2 ರವರೆಗೆ ಅವಕಾಶ ಇರುತ್ತದೆ.
ಬೆಳಗ್ಗೆ 5 ರಿಂದ ಮಧ್ಯಾಹ್ನ 2 ರವರೆಗೆ ಮದ್ಯ ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಲಾಗಿದೆ.
ದಿನದ 24 ಗಂಟೆಯೂ ಹೋಮ್ ಡೆಲಿವರಿಗೆ ಅವಕಾಶ ಇರಲಿದೆ.
ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಲಾಗಿದೆ.
ವೀಕೆಂಡ್‌ನಲ್ಲಿ ಸರ್ಕಾರಿ, ಖಾಸಗಿ ಬಸ್ ಸಂಚಾರ ಇರುತ್ತದೆ. ಟಿಕೆಟ್ ತೋರಿಸಿ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.
ಮದುವೆಯಲ್ಲಿ 100 ಜನರು ಭಾಗಿಯಾಗಲು ಅವಕಾಶ ಹಾಗೂ ಅಂತ್ಯಕ್ರಿಯೆಯಲ್ಲಿ 20 ಜನ ಭಾಗಿಯಾಗಲು ಅವಕಾಶ ಕೊಡಲಾಗಿದೆ.
ದೇಗುಲಗಳಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶವಿಲ್ಲ ಎಂದು ತಿಳಿಸಲಾಗಿದೆ. ದೇಗುಲಗಳಲ್ಲಿ ಕೊವಿಡ್ ನಿಯಮ ಪಾಲಿಸಿ ಪೂಜೆ ಮಾಡಲು ಅವಕಾಶ ನೀಡಲಾಗಿದೆ. ಆದರೆ ದೇಗುಲಗಳಲ್ಲಿ ಜಾತ್ರೆ, ಮೆರವಣಿಗೆಗೆ ಅವಕಾಶವಿಲ್ಲ.
ಅಗತ್ಯವಸ್ತುಗಳ ಕೈಗಾರಿಕೆಗಳನ್ನು ತೆರೆಯುವುದಕ್ಕೆ ಅನುಮತಿ ನೀಡಲಾಗಿದೆ
ಪ್ರವಾಸಿ ಕೇಂದ್ರಗಳಾದ ಗೋಕಾಕ ಫಾಲ್ಸ್, ಗೊಡಚಿನ್ಮಲಕಿ, ದೂಪದಾಳ ಗಳಲ್ಲಿ ಪ್ರವಾಸಿಗರ ಬೇಟಿಗೆ ಸಂಪೂರ್ಣ ನಿರ್ಬಂದವಿರುತ್ತದೆ.