RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ನಾವು ಬದುಕಿ ಮತ್ತೊಬ್ಬರನ್ನು ಸ್ವಾತಂತ್ರ್ಯವಾಗಿ ಬದುಕಿಸುವುದೆ ಸ್ವಾತಂತ್ರ್ಯ : ತಹಶೀಲ್ದಾರ ಪ್ರಕಾಶ ಅಭಿಮತ

ಗೋಕಾಕ:ನಾವು ಬದುಕಿ ಮತ್ತೊಬ್ಬರನ್ನು ಸ್ವಾತಂತ್ರ್ಯವಾಗಿ ಬದುಕಿಸುವುದೆ ಸ್ವಾತಂತ್ರ್ಯ : ತಹಶೀಲ್ದಾರ ಪ್ರಕಾಶ ಅಭಿಮತ 

ನಾವು ಬದುಕಿ ಮತ್ತೊಬ್ಬರನ್ನು ಸ್ವಾತಂತ್ರ್ಯವಾಗಿ ಬದುಕಿಸುವುದೆ ಸ್ವಾತಂತ್ರ್ಯ : ತಹಶೀಲ್ದಾರ ಪ್ರಕಾಶ ಅಭಿಮತ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 15 :

 

ಸ್ವಾತಂತ್ರವೆಂದರೆ ಶ್ವೇಚ್ಛಾಚಾರವಲ್ಲ, ನಾವು ಬದುಕಿ ಮತ್ತೊಬ್ಬರನ್ನು ಸ್ವಾತಂತ್ರ್ಯವಾಗಿ ಬದುಕಿಸುವುದು ಎಂದು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಹೇಳಿದರು.

ರವಿವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಾಡಳಿತ, ನಗರಸಭೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರದಲ್ಲಿ ನಡೆದ 75ನೇ ಸ್ವಾತಂತ್ರ್ಯೋತ್ಸವದ ಆಜಾದಿ ಕಾ ಅಮೃತಮಹೋತ್ಸವ ಕಾರ್ಯಕ್ರದಲ್ಲಿ ಧ್ವಜಾರೋಹಣ ನೇರವೇರಿಸಿ, ಪೊಲೀಸ ,ಎನ್.ಸಿ‌.ಸಿ ಹಾಗೂ ಸ್ಕೌಟ್ ಗೈಡ್ಸ ಅವರಿಂದ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ನಮ್ಮ ದೇಶದ ಸ್ವಾತಂತ್ರ್ಯ ಪಡೆಯಲು ತ್ಯಾಗ ಬಲಿದಾನ ಮಾಡಿದ ಮಹನೀಯರ ಸ್ಮರಣೆಗಾಗಿ ಪ್ರತಿ ವರ್ಷದ ಅಗಸ್ಟ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ.1857 ರಿಂದ 1947 ರವರೆಗೆ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಮಹನೀಯರು ತಮ್ಮ ಪ್ರಾಣವನ್ನು ಸ್ವಾತಂತ್ರ್ಯಕ್ಕಾಗಿ ಮುಡುಪಾಗಿಟ್ಟರೆ ಅನೇಕರು ಇಡೀ ಜೀವಿತ ಅವಧಿಯನ್ನು ಸ್ವಾತಂತ್ರ್ಯ ಪಡೆಯಲು ಹೋರಾಟ ನಡೆಸಿದ್ದಾರೆ.
1928,1932,1936 ರಲ್ಲಿ ಧ್ಯಾನಚಂದ ಇದ್ದ ಭಾರತ ತಂಡ ಒಲಂಪಿಕ್ಸನಲ್ಲಿ ಚಿನ್ನ ಗೆದ್ದಿತ್ತು. ಇಂದು ಟೋಕಿಯೋ ಒಲಂಪಿಕ್ಸ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ 87.58 ಮೀಟರ್ ಉದ್ದ ಜಾವಲನ್ ಎಸೆದು ಚಿನ್ನ ಗೆದ್ದಿದ್ದಾರೆ. ಹಾಗೆ ವೇಟ್ ಲಿಪ್ಟಿಂಗನಲ್ಲಿ ಬೆಳ್ಳಿ,ರೆಸ್ಲಿಂಗನಲ್ಲಿ ಬೆಳ್ಳಿ, ಬಾಕ್ಸಿಂಗನಲ್ಲಿ ಕಂಚು ಬ್ಯಾಟಮಿಂಟನ್ ನಲ್ಲಿ ಕಂಚು ಮತ್ತು ಹಾಕಿಯಲ್ಲಿ ಕಂಚಿನ ಪದಕಗಳನ್ನು ಗೆದ್ದು ದೇಶದ ಗೌರವವನ್ನು ಕ್ರೀಡಾಪಟುಗಳು ಹೆಚ್ಚಿಸಿದ್ದಾರೆ.
ಇಂದು ದೇಶ ಶಿಕ್ಷಣ , ವಿಜ್ಞಾನ ,ತಂತ್ರಜ್ಞಾನ,ಐಟಿಬಿಟಿ ಖಗೋಳ ಮುಂತಾದ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡುತ್ತಿದೆ ಮತ್ತು ಪರಮಾಣು ಶಕ್ತಿಯನ್ನು ಹೊಂದಿರುವ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಭಾರತವೂ ಒಂದು. ಇಂದು ಜಗತ್ತು ಮತ್ತು ಭಾರತ ಕೋವಿಡ್ ವೈರಸನಿಂದ ತತ್ತರಿಸುತ್ತಿದೆ. ಆದರೆ ಭಾರತ ಕೋವ್ಯಾಕ್ಸಿನ್,ಕೋವಿಶೀಲ್ಡ, ಜಾನ್ಸನ್ ಮುಂತಾದ ಲಸಿಕೆಗಳನ್ನು ಸಂಶೋಧಿಸಿ ಕರೋನಾ ತಡೆಗಟ್ಟಲು ಯಶಸ್ವಿನ ಅಂಚಿನಲ್ಲಿದೆ. ಜಗತ್ತಿನ ಹತ್ತಕ್ಕೂ ಹೆಚ್ಚು ರಾಷ್ಟ್ರಗಳು ಭಾರತದ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ ಮುಂತಾದ ಲಸಿಕೆಗಳನ್ನು ಪಡೆಯುತ್ತಿವೆ ಎಂದು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಹೇಳಿದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಮತ್ತು ಕೋರೋನಾ ವಾರಿಯರ್ಸ್ ಗಳಿಗೆ ಮತ್ತು ಮುಖ್ಯಮಂತ್ರಿ ಪದಕ ಪಡೆದ ಗೃಹ ರಕ್ಷಕ ದಳದ ಮಾಯಪ್ಪ ಸನದಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪೌರಾಯುಕ್ತ ಶಿವಾನಂದ ಹಿರೇಮಠ, ನಗರಸಭೆ ಉಪಾಧ್ಯಕ್ಷ ಬಸವರಾಜ ಆರೆನ್ನವರ, ಅಶೋಕ ಪೂಜಾರಿ, ಹಿರಿಯ ವಕೀಲ ಬಿ.ಆರ್.ಕೋಪ್ಪ , ಬಿ.ಇ.ಓ ಜಿ.ಬಿ.ಬಳಗಾರ, ಸಿಪಿಐಗಳಾದ ಗೋಪಾಲ ರಾಠೋಡ, ಶ್ರೀಶೈಲ ಬ್ಯಾಕೂಡ, ಎಂ.ಎಂ .ನಧಾಪ , ಎಸ್.ವ್ಹಿ ಕಲಪ್ಪನ್ವವರ , ಎಂ.ಎಚ್.ಗಜಾಕೋಶ, ಬಸವರಾಜ ಖಾನಪ್ಪನ್ನವರ, ಕಿರಣ ಢಮಾಮಗರ, ಸೋಮಶೇಖರ್ ಮಗದುಮ್ಮ, ನಗರಸಭಾ ಸದಸ್ಯರಾದ ಪ್ರಕಾಶ ಮುರಾರಿ, ಬಾಬು ಮುಳಗುಂದ ಸೇರಿದಂತೆ ಅನೇಕರು ಇದ್ದರು.

Related posts: