ಗೋಕಾಕ:ಕನ್ನಡ ಭಾಷೆ ಹಾಗೂ ಸಂಸ್ಕಂತಿಯನ್ನು ಬೆಳೆಸಲು ಮುಂದಾಗಿ :ಎಂ ಎಸ್ ವೆಂಕಟರಾಮಯ್
ಕನ್ನಡ ಭಾಷೆ ಹಾಗೂ ಸಂಸ್ಕಂತಿಯನ್ನು ಬೆಳೆಸಲು ಮುಂದಾಗಿ :ಎಂ ಎಸ್ ವೆಂಕಟರಾಮಯ್
ಗೋಕಾಕ ಸೆ 17: ಸಾಹಿತ್ಯದ ಅಭಿರುಚಿಯನ್ನು ಜನತೆಗೆ ತಲುಪಿಸುವದರೊಂದಿಗೆ ಕನ್ನಡ ಭಾಷೆ ಹಾಗೂ ಸಂಸ್ಕಂತಿಯನ್ನು ಬೆಳೆಸುವಂತ ಕಾರ್ಯವನ್ನು ಸಿರಿಗನ್ನಡ ವೇದಿಕೆ ರಾಜ್ಯಾಧ್ಯಂತ ಮಾಡುತ್ತಿದೆ ಎಂದು ರಾಜ್ಯಾಧ್ಯಕ್ಷ ಎಂ ಎಸ್ ವೆಂಕಟರಾಮಯ್ಯ ಹೇಳಿದರು.
ಅವರು, ರವಿವಾರದಂದು ಇಲ್ಲಿಯ ವಿವೇಕಾನಂದ ನಗರದಲ್ಲಿ ಸಿರಿಗನ್ನಡ ಮಹಿಳಾ ವೇದಿಕೆ ತಾಲೂಕ ಘಟಕದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿರಿಗನ್ನಡ ಮಹಿಳಾ ವೇದಿಕೆ ರಾಜ್ಯ ಉಪಾಧ್ಯಕ್ಷೆ ರಜನಿ ಜೀರಗ್ಯಾಳ ಅವರುಕನ್ನಡ ನಮ್ಮೆಲ್ಲರ ಆಸ್ತಿಯಾಗಿದ್ದು ಅದನ್ನು ಉಳಿಸಿ ಬೆಳೆಸುವಂತ ಕಾರ್ಯ ಮಾಡಲು ಕರೆ ನೀಡಿದರು.
ವೇದಿಕೆಯ ಮೇಲೆ 12ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರಾದ ಶ್ರೀಮತಿ ಮೀನಾಕ್ಷಿ ಬಾನಿ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧಿಶರಾದ ಶ್ರೀಮತಿ ವಿಮಲ ಆರ್ ನಂದಗಾಂವ, ಮಾಜಿ ಸಿರಿಗನ್ನಡ ವೇದಿಕೆ ತಾಲೂಕ ಅಧ್ಯಕ್ಷೆ ಜಯಶ್ರೀ ಮಳಗಿ, ನೂತನ ಅಧ್ಯಕ್ಷೆ ಸಂಗೀತಾ ಬನ್ನೂರ, ಜಿಲ್ಲಾಧ್ಯಕ್ಷ ಸುರೇಶ ದೇಸಾಯಿ, ತಾಲೂಕಾಧ್ಯಕ್ಷ ಈಶ್ವರ ಮಮದಾಪೂರ ಇದ್ದರು.
ವೈಶಾಲಿ ಭರಭರಿ ನಿರೂಪಿಸಿದರು. ಸರಸ್ವತಿ ರೇವನಕರ ವಂದಿಸಿದರು.