RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ದಿ. 19 ರಂದು ಕಾರ್ಮಿಕ ಅದಾಲತ್ : ಕಾರ್ಮಿಕ ನಿರೀಕ್ಷ ಪಾಂಡುರಂಗ ಮಾವರಕರ ಮಾಹಿತಿ

ಗೋಕಾಕ:ದಿ. 19 ರಂದು ಕಾರ್ಮಿಕ ಅದಾಲತ್ : ಕಾರ್ಮಿಕ ನಿರೀಕ್ಷ ಪಾಂಡುರಂಗ ಮಾವರಕರ ಮಾಹಿತಿ 

ದಿ. 19 ರಂದು ಕಾರ್ಮಿಕ ಅದಾಲತ್ : ಕಾರ್ಮಿಕ ನಿರೀಕ್ಷ ಪಾಂಡುರಂಗ ಮಾವರಕರ ಮಾಹಿತಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 17 :

 
ದಿನಾಂಕ 19 ರಂದು ಮುಂಜಾನೆ 10:30 ಘಂಟೆಗೆ ನಗರದ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಕಾರ್ಮಿಕ ಅದಾಲತ್ ಜರುಗಲಿದೆ ಎಂದು ಕಾರ್ಮಿಕ ನಿರೀಕ್ಷ ಪಾಂಡುರಂಗ ಮಾವರಕರ ತಿಳಿಸಿದ್ದಾರೆ .

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ ನಿರ್ದೇಶನದಂತೆ ಕಾರ್ಮಿಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಈ ಅದಾಲತ್ ನಲ್ಲಿ ಉಪ ಕಾರ್ಮಿಕ ಆಯುಕ್ತರು ಪಾಲ್ಗೋಳ್ಳಲಿದ್ದು, ಕಾರ್ಮಿಕರು, ಕಾರ್ಮಿಕ ಸಂಘದ ಪದಾಧಿಕಾರಿಗಳು ಪಾಲ್ಗೊಂಡು ಇಲಾಖೆಯಿಂದ ಸಿಗುವ ಶೈಕ್ಷಣಿಕ,ಮದುವೆ,ಅಂತಿಮ ಸಂಸ್ಕಾರ, ಪ್ರಮುಖ ವೈದ್ಯಕೀಯ,ಪಿಂಚಣಿ ,ಧನ ಸಹಾಯ ಬಾಕಿ ಅರ್ಜಿಗಳು ಇದ್ದಲ್ಲಿ ಈ ಕಾರ್ಮಿಕ ಅದಾಲತ್ ನಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಳ್ಳಬಹುದು ಎಂದು ಕಾರ್ಮಿಕ ನಿರೀಕ್ಷಕ ಪಾಂಡುರಂಗ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Related posts: