ಗೋಕಾಕ:ಇತಿಹಾಸ ದಾಖಲೀಕರಣಕ್ಕೆ ಛಾಯಾಚಿತ್ರ ಮಾಧ್ಯಮ ಅತ್ಯಗತ್ಯ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು
ಇತಿಹಾಸ ದಾಖಲೀಕರಣಕ್ಕೆ ಛಾಯಾಚಿತ್ರ ಮಾಧ್ಯಮ ಅತ್ಯಗತ್ಯ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 19 :
ಇತಿಹಾಸ ದಾಖಲೀಕರಣಕ್ಕೆ ಛಾಯಾಚಿತ್ರ ಮಾಧ್ಯಮ ಅತ್ಯಗತ್ಯ ಎಂದು ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಗುರುವಾರದಂದು ಇಲ್ಲಿನ ವೃತ್ತಿ ನಿರತ ಛಾಯಾಗ್ರಹಕರ ಸಂಘ ನಗರದ ಶೂನ್ಯ ಸಂಪಾದನ ಮಠದಲ್ಲಿ ಏರ್ಪಡಿಸಿದ್ದ 182 ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಕೊರೋನಾ ಸಂದರ್ಭದಲ್ಲಿ ಸೋಂಕಿನಿಂದ ಮೃತಪಟ್ಟವರ ಅಂತಿಮ ಸಂಸ್ಕಾರ ಮಾಡಿದ ಬಜರಂಗದಳ ಹಾಗೂ ಪಿಎಫ್ಐ ಕಾರ್ಯಕರ್ತರಿಗೆ ಸತ್ಕರಿಸಿ ಅವರು ಮಾತನಾಡಿದರು.
ತಂತ್ರಜ್ಞಾನದ ಬೆಳವಣಿಗೆಯಿಂದ ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಒಂದೇ ನಿಮಿಷ ದಲ್ಲಿ ಚಿತ್ರ ನಮಗೆ ಲಭಿಸುತ್ತಿವೆ . ಕತ್ತಲು ಮತ್ತು ಬೆಳಕಿನ ಸಂಯೋಜನೆಯ ಮೂಲಕ ಅದ್ಭುತವಾದ ಜಗತ್ತನ್ನು ಛಾಯಾಗ್ರಹಣದ ಮೂಲಕ ಸೃಷ್ಠಿಸಬಹುದಾಗಿದೆ. ಇಂದು ಛಾಯಾಗ್ರಹಣ ಎಂಬುದು ಪತ್ರಿಕೋದ್ಯಮ ಮತ್ತು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಒಂದು ಸುದ್ದಿ ಮತ್ತು ವರದಿಯನ್ನು ತಯಾರಿಸಬೇಕಾದರೆ ಅಲ್ಲಿ ಪೂರಕವಾದ ಛಾಯಾಚಿತ್ರದ ಅವಶ್ಯಕತೆ ಇದೆ. ಡಿಜಿಟಲ್ ಕ್ರಾಂತಿಯಿಂದ ಛಾಯಾಚಿತ್ರದ ಕ್ಷೇತ್ರವು ವಿಸ್ತೃತವಾಗುತ್ತಾ ನಡೆದಿದೆ ಎಂದು ಶ್ರೀ ಮರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಇದೇ ಸಂದರ್ಭದಲ್ಲಿ ಗೋಕಾಕ ತಾಲೂಕಾ ಆಸ್ಪತ್ರೆಯ ತಂಡದವರನ್ನು ಸತ್ಕರಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೆನ್ನವರ , ಸ್ಥಾಯಿ ಸಮಿತಿ ಚೇರಮನ್ ಕೆ.ಎಂ.ಗೋಕಾಕ, ಬಜರಂಗದಳದ ಬೆಳಗಾವಿ ಜಿಲ್ಲಾ ಸಂಚಾಲಕ ಸದಾಶಿವ ಗುದುಗಗೋಳ, ಹಿಂದು ಜಾಗರಣಾ ವೇದಿಕೆಯ ತಾಲೂಕಾಧ್ಯಕ್ಷ ಅಜೀತ ವಾಕೂಡೆ, ಪಾಪುಲರ ಪ್ರಂಟ್ ಆಫ ಇಂಡಿಯಾ ಸಂಸ್ಥೆಯ ಅಧ್ಯಕ್ಷ ನಬಿಸಾಬ ಇಮಾರತವಾಲೆ, ವೃತ್ತಿ ನಿರತ ಛಾಯಾಗ್ರಹಕ ಸಂಘದ ಅಧ್ಯಕ್ಷ ಮದುಸುಧನ ಸೋನಗೋಜಿ, ಕಾರ್ಯದರ್ಶಿ ಆನಂದ ಹಳಕಟ್ಟಿ ,ಮಲ್ಲಿಕಾರ್ಜುನ ಕೆ.ಆರ್, ಶೇಖರ ರಜಪೂತ , ಶಂಕರ ಹಾದಿಮನಿ, ಲಕ್ಷ್ಮಣ ಯಮನಕನಮರಡಿ ಇದ್ದರು.