ಗೋಕಾಕ :ನಗರೋತ್ಥಾನ ಅನುದಾನದಡಿ ನಿರ್ಮಿಸಿದ ವಾಣಿಜ್ಯ ಸಂಕೀರ್ಣ ಉದ್ಘಾಟಿಸಿದ ಶಾಸಕ ರಮೇಶ ಜಾರಕಿಹೊಳಿ
ನಗರೋತ್ಥಾನ ಅನುದಾನದಡಿ ನಿರ್ಮಿಸಿದ ವಾಣಿಜ್ಯ ಸಂಕೀರ್ಣ ಉದ್ಘಾಟಿಸಿದ ಶಾಸಕ ರಮೇಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ ಗೋಕಾಕ ಅ 21 :
ನಗರಸಭೆಯ ನಗರೋತ್ಥಾನ ಯೋಜನೆಯಲ್ಲಿ 2.85 ಕೋಟಿ ಅನುದಾನದಡಿ ನಿರ್ಮಿಸಿದ ವಾಣಿಜ್ಯ ಸಂಕೀರ್ಣ ಉದ್ಘಾಟನೆ ಹಾಗೂ ಎಸ್.ಎಫ್.ಸಿ ವಿಶೇಷ ಅನುದಾನ , 14ನೇ ಹಣಕಾಸು ಮತ್ತು ಐ.ಡಿ.ಎಸ್.ಎಂ ಟಿ ರಿಜನರೇಟರ ನಿಧಿಯಲ್ಲಿ 3.14 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ವಾಣಿಜ್ಯ ಸಂರ್ಕೀಣದ ಶಂಕು ಸ್ಥಾಪನೆಯನ್ನು ಶನಿವಾರದಂದು ಶಾಸಕ ರಮೇಶ ಜಾರಕಿಹೊಳಿ ಅವರು ನೆರೆವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಡಾ. ಐ.ಎ ಉಳ್ಳಾಗಡ್ಡಿ ಮಾತನಾಡಿ ನಗರಸಭೆಯಿಂದ ಜನರಿಗೆ ಸೌಲಭ್ಯಗಳನ್ನು ಕಲ್ಪಿಸಲು ಅನುಷ್ಠಾನಗೋಳಿಸುತ್ತಿರುವ ಯೋಜನೆಗಳನ್ನು ಜನರು ಸದುಪಯೋಗ ಪಡಿಸಿಕೊಂಡು ನಗರಸಭೆಗೆ ಸಹಕಾರ ನೀಡಬೇಕು. ನಗರಸಭೆ ಕರಗಳನ್ನು ಸಕಾಲದಲ್ಲಿ ತುಂಬಿ ಅಭಿವೃದ್ಧಿ ಕಾರ್ಯ ಮಾಡಲು ಸಹಕರಿಸಿ.ಪ್ಲಾಸ್ಟಿಕ ಬಳಕೆಯನ್ನು ನಿಷೇಧಿಸಿ, ನಗರಸಭೆಯಿಂದ ತ್ಯಾಜ್ಯಗಳ ವಿಲೇವಾರಿ ವ್ಯವಸ್ಥೆಯ ಉಪಯೋಗ ಪಡೆದುಕೊಂಡು ನಗರದ ಸೌಂದರ್ಯಕರಣಕ್ಕೆ ಮಹತ್ವ ನೀಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೆನ್ನವರ , ಸ್ಥಾಯಿ ಸಮಿತಿ ಚೆರಮನ್ ಕೆ.ಎಂ.ಗೋಕಾಕ, ಜಿಲ್ಲಾ ನಗರಾಭಿವೃದ್ಧಿ ಕೋಶ ಕಾರ್ಯಪಾಲಕ ಅಭಿಯಂತ ಎಂ.ಎಲ್.ಗಣಿ, ಪೌರಾಯುಕ್ತ ಶಿವಾನಂದ ಹಿರೇಮಠ, ಸಹಾಯಕ ಕಾರ್ಯಪಾಲಕ ಅಭಿಯಂತ ವ್ಹಿ.ಎಂ.ಸಾಲಿಮಠ, ಎಂ.ಎಂ.ಸಾಗರೆಕರ , ಎ.ಬಿ.ರಜಪೂತ, ವ್ಹಿ.ವಾಯ್.ಪಾಟೀಲ್, ಗುತ್ತಿಗೆದಾರರಾದ ಬಿ.ಕೆ ಗಂಗರಡ್ಡಿ , ಬಸವಂತ ದಾಸನವರ ಹಾಗೂ ನಗರಸಭೆ ಸದಸ್ಯರು ಸೇರಿದಂತೆ ಅನೇಕರು ಇದ್ದರು.