RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಜನರ ಆರೋಗ್ಯ ರಕ್ಷಣೆಗೆ ಶಾಸಕರಾದ ರಮೇಶ ಜಾರಕಿಹೊಳಿ ಅವರು ಶ್ರಮಿಸುತ್ತಿದ್ದಾರೆ : ಕಾರ್ಮಿಕ ಮುಖಂಡ ಅಂಬಿರಾವ

ಗೋಕಾಕ:ಜನರ ಆರೋಗ್ಯ ರಕ್ಷಣೆಗೆ ಶಾಸಕರಾದ ರಮೇಶ ಜಾರಕಿಹೊಳಿ ಅವರು ಶ್ರಮಿಸುತ್ತಿದ್ದಾರೆ : ಕಾರ್ಮಿಕ ಮುಖಂಡ ಅಂಬಿರಾವ 

ಜನರ ಆರೋಗ್ಯ ರಕ್ಷಣೆಗೆ ಶಾಸಕರಾದ ರಮೇಶ ಜಾರಕಿಹೊಳಿ ಅವರು ಶ್ರಮಿಸುತ್ತಿದ್ದಾರೆ : ಕಾರ್ಮಿಕ ಮುಖಂಡ ಅಂಬಿರಾವ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 22 :

 

ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯವ ನೀರನ್ನು ಒದಗಿಸುವ ಮೂಲಕ ಜನರ ಆರೋಗ್ಯ ರಕ್ಷಣೆಗೆ ಶಾಸಕರಾದ ರಮೇಶ ಜಾರಕಿಹೊಳಿ ಅವರು ಶ್ರಮಿಸುತ್ತಿದ್ದಾರೆ ಎಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹೇಳಿದರು.
ಶನವಿವಾರದಂದು ತಾಲೂಕಿನ ಮಮದಾರಪೂರ ಗ್ರಾಮದದಲ್ಲಿ ಜೆ.ಜೆ.ಎಂ ಯೋಜನೆಯಡಿ 2 ಕೋಟಿ## ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮಸ್ಥರು ಮತ್ತು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಸರಕಾರದ ವತಿಯಿಂದ 2 ಕೋಟಿ ರೂ ವೆಚ್ಚದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದ್ದು, ಗ್ರಾಮದ ಜನರು ಸದುಉಪಯೋಗ ಪಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರುಗಳಾದ ಟಿ.ಆರ್.ಕಾಗಲ, ಮಡೆಪ್ಪ ತೋಳಿನವರ, ತಾಪಂ ಸದಸ್ಯ ಸಿದ್ದಪ್ಪ ಕಮತ, ಗ್ರಾಪಂ ಅಧ್ಯಕ್ಷ ಶಿವನಗೌಡ ಕಮತ, ಮುಖಂಡರಾದ ಶಂಕರಗೌಡಾ ಪಾಟೀಲ, ಸಿದ್ರಾಮ ಲಂಗೋಟಿ , ಶೌಕತಅಲಿ ಹಿಡಕಲ್, ವಿರಭದ್ರ ಮೈಲನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: