ಗೋಕಾಕ:ಸಮಾಜದಲ್ಲಿ ಗೌರವಿತವಾಗಿ ಬಾಳಬೆಕೆಂಬುವುದೆ ಸಹೋದರಿಯರ ಕೋರಿಕೆಯಾಗಿದೆ : ರಜನಿ ಜಿರಗ್ಯಾಳ
ಸಮಾಜದಲ್ಲಿ ಗೌರವಿತವಾಗಿ ಬಾಳಬೆಕೆಂಬುವುದೆ ಸಹೋದರಿಯರ ಕೋರಿಕೆಯಾಗಿದೆ : ರಜನಿ ಜಿರಗ್ಯಾಳ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 22 :
ಎಲ್ಲರೂ ಸಹೋದರತ್ವದಿಂದ ಸಮಾಜದಲ್ಲಿ ಗೌರವಿತವಾಗಿ ಬಾಳಬೆಕೆಂಬುವುದೆ ಸಹೋದರಿಯರ ಕೋರಿಕೆಯಾಗಿದೆ ಎಂದು ಸಿರಿಗನ್ನಡ ವೇದಿಕೆಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಜನಿ ಜಿರಗ್ಯಾಳ ಹೇಳಿದರು.
ರವಿವಾರದಂದು ನಗರದ ಉಪ ಕಾರಾಗೃಹದಲ್ಲಿ ಸಿರಿಗನ್ನಡ ಮಹಿಳಾ ವೇದಿಕೆಯಿಂದ ರಕ್ಷಾ ಬಂಧನದ ನಿಮಿತ್ಯ ಜೈಲಿನ ಸಿಬ್ಬಂದಿ ಹಾಗೂ ವಿಚಾರಣಾಧೀನ ಖೈದಿಗಳಿಗೆ ರಾಖಿ ಕಟ್ಟುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಂಬಂಧಗಳನ್ನು ಬೆಸೆಯುವುದೆ ರಕ್ಷಾ ಬಂಧನದ ಸಂದೇಶವಾಗಿದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅನಾಧಿಕಾಲದಿಂದಲೂ ಆಚರಣೆ ಮಾಡಲಾಗಿತ್ತಿದೆ. ಇದು ಸಹೋದರ ಸಹೋದರಿಯರ ಹಬ್ಬವಾಗಿದ್ದು, ಇದನ್ನು ನಾವೆಲ್ಲಾ ಸಂಭ್ರಮದಿಂದ ಆಚರಿಸೋಣ ಮುಂದಿನ ದಿನಗಳಲ್ಲಿ ಉತ್ತಮ ನಾಗರಿಕರಾಗಿ ದೇಶಕ್ಕೆ ಒಳ್ಳೆಯ ಕೊಡುಗೆ ನೀಡುವಂತೆ ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಉಪಕಾರಾಗೃಹದ ಅಧೀಕ್ಷ ಅಂಬರೀಶ್ ಪೂಜಾರಿ ,ಸಹಾಯಕ ಜೈಲರ ಎಂ.ಕೆ ನೆಲಧರಿ , ವೇದಿಕೆಯ ರಾಜ್ಯ ಖಂಚಾಚಿ ವೈಶಾಲಿ ಭರಭರಿ, ಜಿಲ್ಲಾಧ್ಯಕ್ಷೆ ಜಯಾ ಚುನಮರಿ, ತಾಲೂಕಾಧ್ಯಕ್ಷೆ ಸಂಗೀತಾ ಬನ್ನೂರ , ಪದಾಧಿಕಾರಿಗಳಾದ ಸುಗಂಧಾ ಡಂಬಳ, ರಾಜೇಶ್ವರಿ ಹಿರೇಮಠ, ಛಾಯಾ ಸಿದ್ರಾಯಿ, ಸುಶೀಲಾ ಹಿತ್ತಲಮನಿ, ಸುಷ್ಮೀತಾ ಭಟ್ಟ, ಸುಧಾ ಮಠಪತಿ, ವಿಜಯಲಕ್ಷ್ಮಿ ಮಾಲದಿನ್ನಿ ಹಾಗೂ ಚೇತನ ಜೋಗನ್ನವರ ಉಪಸ್ಥಿತರಿದ್ದರು