ಮೂಡಲಗಿ:ಶಾಲೆ ಪ್ರಾರಂಭ : ಬಿಇಒ ಅಜೀತ ಮನ್ನಿಕೇರಿ ಹರ್ಷ
ಶಾಲೆ ಪ್ರಾರಂಭ : ಬಿಇಒ ಅಜೀತ ಮನ್ನಿಕೇರಿ ಹರ್ಷ
ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಅ 23 :
ಕೋರೋನಾ ಮಹಾಮಾರಿಯಿಂದ ಕಳೆದ ಹಲವು ತಿಂಗಳುಗಳಿಂದ ಶಾಲೆಗಳ ಬಾಗಿಲು ವಿದ್ಯಾರ್ಥಿಗಳಿಗೆ ಸಂಪೂರ್ಣ ಬಂದಾಗಿದ್ದು, ಸರಕಾರದ ಹೊಸ ಮಾರ್ಗಸೂಚಿಯಿಂದ ಸೋಮವಾರದಿಂದ ಪ್ರಾರಂಭವಾಗಿದ್ದು ಶಿಕ್ಷಕರಲ್ಲಿ ಖುಷಿ ನೀಡಿದೆ ಎಂದು ಬಿಇಒ ಅಜಿತ ಮನ್ನಿಕೇರಿ ತಿಳಿಸಿದ್ದಾರೆ.
ಸೋಮವಾರ ಪಟ್ಟಣದ 9 ನೇ ಮತ್ತು 10 ನೇ ತರಗತಿಗಳ ಪ್ರಾರಂಭೋತ್ಸವದಲ್ಲಿ ಸ್ಥಳೀಯ ಕೆ.ಎಚ್.ಎಸ್ ಸರಕಾರಿ ಪ್ರೌಢ ಶಾಲೆಗೆ ಭೇಟಿ ಸ್ವತಾ ತಾವೇ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ತಪಾಸಣೆ ಮಾಡುವ ಮೂಲಕ ಅವರು ಮತನಾಡಿದರು.
ವಿಶ್ವದಾದ್ಯಂತ ಅಪ್ಪಳಿಸಿರುವ ಕೊರೋನಾ ಮಹಾಮಾರಿಯಿಂದ ಸಾರ್ವಜನಿಕ ಜೀವನ ನಲುಗಿ ಹೋಗಿದ್ದು, ಸದ್ಯ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವದರಿಂದ ಸರಕಾರ ಮತ್ತು ಇಲಾಖೆಯು ನುರಿತ ತಜ್ಞರ ಅಭಿಪ್ರಾಯದ ಮೇರಿಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಶಾಲೆಗಳನ್ನು ಪ್ರಾರಂಭಿಸುತ್ತಿದ್ದಾರೆ. ವಲಯ ವ್ಯಾಪ್ತಿಯಲ್ಲಿ 80 ಪ್ರೌಢ ಶಾಲೆಗಳ ಮುಖ್ಯೋಪಾಧ್ಯಯರ ಸಭೆಯನ್ನು ವಡೇರಹಟ್ಟಿಯಲ್ಲಿ ಜರುಗಿಸಿ ಪ್ರಾರಂಭಕ್ಕೂ ಮುನ್ನ ಹಾಗೂ ನಂತರ ಕೈಗೋಳ್ಳ ಬೇಕಾದ ಕ್ರಮಗಳ ಕುರಿತು ಚರ್ಚಿಸಿ ಆಯಾ ಶಾಲಾ ವ್ಯಾಪ್ತಿಯ ಆರೋಗ್ಯ ಇಲಾಖೆ, ಪಂಚಾಯತಿ, ಅಂಗನವಾಡಿ, ಆಶಾಕಾರ್ಯಕರ್ತೆಯರು ಕ್ರಮ ಕೈಗೋಳ್ಳಲು ಸೂಚಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮೂಡಲಗಿ ನಗರದ ಕೆ.ಎಸ್.ಎಸ್ ಸರಕಾರಿ ಪ್ರೌಢ ಶಾಲೆ ಹಾಗೂ ನಾಗನೂರಿನ ಮೇಘಾ ಪ್ರೌಢ ಶಾಲೆಗಳಿಗೆ ಭೇಟಿ ನೀಡಿದ ಬಿಇಒ ಎ.ಸಿ ಮನ್ನಿಕೇರಿ ಪ್ರಾರಂಬಿಕ ದಿನದ ಪ್ರಾಯೋಗಿಕ ಪಾಠವನ್ನು ಮಾಡಿ, ಮಕ್ಕಳಲ್ಲಿರುವ ಸಂಶಯಗಳು, ಕಲಿಕೆಯ ಬಗ್ಗೆ, ಕ್ಲೀಷ್ಠಾಂಶಗಳ ಕುರಿತು ಅಭಿಪ್ರಾಯಗಳನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಎ.ಎ ಜುನೇದಿ ಪಟೇಲ್, ಶಿಕ್ಷಣ ಸಂಯೋಜಕ ಸತೀಶ ಬಿ.ಎಸ್, ಮುಖ್ಯೋಪಾಧ್ಯಾಯ ಎಸ್.ಬಿ ನ್ಯಾಮಗೌಡರ, ಮೇಘಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲ್ಲಪ್ಪ ಗಾಣಿಗೇರ ಹಾಗೂ ಶಿಕ್ಷಕ ಸಿಬ್ಬಂದಿ ವರ್ಗ ಹಾಜರಿದ್ದರು.