ಗೋಕಾಕ:ಅರಣ್ಯ ಇಲಾಖೆಯ ನಿರ್ಲಕ್ಷ್ಯ : ಸೂಮಾರು 30 ಹೆಚ್ಚು ಸಸಿಗಳ ಮಾರಣಹೋಮ
ಅರಣ್ಯ ಇಲಾಖೆಯ ನಿರ್ಲಕ್ಷ್ಯ : ಸೂಮಾರು 30 ಹೆಚ್ಚು ಸಸಿಗಳ ಮಾರಣಹೋಮ
ಗೋಕಾಕ ಸೆ 18: ಅರಣ್ಯ ಇಲಾಖೆಯ ಬೇಜವಾಬ್ದಾರಿಯುತ ದೋರಣೆಯಿಂದ ನಗರದ ಹೊರವಲಯದ ಫಾರನಟ್ಟಿ ಕ್ರಾಸ ಬಳಿಯ ಹೊಲದ ಪಕ್ಕದಲ್ಲಿ ನೆಟ್ಟಿದ ಸುಮಾರು 40 ಕ್ಕೂ ಹೆಚ್ಚು ಸಸಿಗಳನ್ನು ಕಿತ್ತು ಎಸೆದ ಘಟನೆ ನಡೆದಿದೆ
ಗೋಕಾಕ ಅರಣ್ಯ ಇಲಾಖೆಯ ವತಿಯಿಂದ ಕಳೆದ ವಾರದ ಹಿಂದಷ್ಟೇ ನಗರದ ಹೊರವಲಯದ ಫಾರನಟ್ಟಿ ಕ್ರಾಸ್ ಬಳಿಯ ಹೊಲ ಒಂದರ ಪಕ್ಕದಲ್ಲಿ ಸುಮಾರು 80 ಕ್ಕೂ ಹೆಚ್ಚು ಸಸಿಗಳನ್ನು ಹಚ್ಚಲಾಗಿತ್ತು .
ಇಲಾಖೆಯ ನಿಯಮದ ಪ್ರಕಾರ ಸರಕಾರಿ ಜಾಗೆ ಬಿಟ್ಟು ಮಾಲ್ಕಿ ಜಾಗದಲ್ಲಿ ಸಸಿಗಳನ್ನು ಹಚ್ಚಬೇಕಾದರೇ ಸಂಬಂಧ ಪಟ್ಟ ಮಾಲೀಕರಿಂದ ಪರವಾಣಿಗೆ ಪಡೆಯಬೇಕು ಆದರೆ ಅರಣ್ಯ ಇಲಾಖೆ ಅವರು ಹೊಲದ ಮಾಲೀಕರಿಗೆ ಹೇಳದೆ ಸಸಿಗಳನ್ನು ನೆಟ್ಟಿದ್ದಾರೆಂದು ಹೇಳಲಾಗುತ್ತಿದೆ.
ರಾಜ್ಯಾದ್ಯಂತ ಬರದ ಪರಿಸ್ಥಿತಿ ಎದುರಾಗಿದ್ದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಸಸಿಗಳನ್ನು ಉಳಿಸಿ ಬೆಳೆಸ ಬೇಕಾಗಿದ್ದ ಇಲಾಖೆಯವರೇ ಈ ರೀತಿ ಬೇಜವಾಬ್ದಾರಿ ಯಿಂದ ನಡೆದು ಕೋಳುತ್ತಿರುವದು ಖೇದಕರವೆಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ
ಅರಣ್ಯ ರಕ್ಷಕ ಅಪ್ಪಣ್ಣಾ ಸಂಕ್ರೀ , ವನಪಾಲಕ ಶ್ರೀಮತಿ ಜಿ.ಎಸ. ಸನದಿ ಅವರ ಅಜಾಗೃಕತೆ ಯಿಂದ ಸುಮಾರು 35 ಕ್ಕೂ ಹೆಚ್ಚು ಸಸಿಗಳ ಮಾರಣ ಹೋಮ ನಡೆದ್ದದು ಇಲಾಖೆಯ ಉನತ್ತಾಧಿಕಾರಿಗಳಾದ ವಲಯ ಅರಣ್ಯಾಧಿಕಾರಿ ಕೆ ಎನ್ ವಣ್ಣೂರ , ಎ.ಸಿ.ಎಪ್ . ಸಿ ಜಿ ಮಿರ್ಜಿ , ಅವರು ಇವರ ಮೇಲೆ ಹಾಗೂ ಹಾಡು ಹಗಲೆ ಸಸಿಗಳನ್ನು ಕಿತ್ತೆಸೆದ ಹೊಲದ ಮಾಲೀಕರಿಗೆ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ .