ಗೋಕಾಕ:ಅತಿ ಶೀಘ್ರದಲ್ಲೇ ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೆ : ಶಾಸಕ ರಮೇಶ ಜಾರಕಿಹೊಳಿ
ಅತಿ ಶೀಘ್ರದಲ್ಲೇ ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೆ : ಶಾಸಕ ರಮೇಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 28 :
ಇಲ್ಲಿನ ಸರಕಾರಿ ಆಸ್ಪತ್ರೆಯನ್ನು 100 ರಿಂದ 250 ಬೆಡ್‌ಗೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು 100 ರಿಂದ 150 ಬೆಡ್ ಗೆ ಪರಿವರ್ತಿಸಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಮಾಜಿ ಸಚಿವ , ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಶನಿವಾರದಂದು ನಗರದ ಶಾಸಕರ ಕಛೇರಿಯಲ್ಲಿ ನಡೆದ ವೈದ್ಯರ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಉತ್ತಮವಾಗಿದೆ. ಆಸ್ಪತ್ರೆಗಳು, ವೈದ್ಯಕೀಯ ಸೌಲಭ್ಯಗಳು, ಉತ್ತಮ ಪ್ರಮಾಣದಲ್ಲಿವೆ. ವೈದ್ಯರ ಸಂಖ್ಯೆಯೂ ಇದೆ. ಪ್ರಸ್ತುತ ಬೇಕಾಗಿರುವುದು ಆವಶ್ಯಕತೆ ಆಧಾರಿತ ಹೆಚ್ಚಿನ ಆರೋಗ್ಯ ಸೇವೆಗೆ ಒತ್ತು ನೀಡಲಾಗುವುದು. ಆರೋಗ್ಯ ಕೇಂದ್ರಕ್ಕೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸುವ ಮೂಲಕ ಗ್ರಾಮೀಣ ಜನರಿಗೆ ಸೇವೆ ನೀಡಲು ಸಜ್ಜುಗೊಳಿಸಲಾಗುವುದು ಎಂದರು.
ಇದೇ ಸಂಧರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕ ಡಾ. ಎ.ಎಂ ನರಟ್ಟಿ ಅವರಿಗೆ ಶಾಸಕ ರಮೇಶ ಜಾರಕಿಹೊಳಿ ಅವರು ಸತ್ಕರಿಸಿ , ಗೌರವಿಸಿದರು .
ನಂತರ ನಿರ್ದೇಶಕ ಎ.ಎಂ ನರಟ್ಟಿ ಅವರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮೇಲ್ದರ್ಜೆಗೆ ಏರಿಸಿ ನೂತನವಾಗಿ ನಿರ್ಮಿಸಲಾಗುವ ಸರಕಾರಿ ಆಸ್ಪತ್ರೆಯ ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಗಳ ಆಪರ ನಿರ್ದೇಶಕ ಡಾ. ಬಿರಾದಾರ ಪಾಟೀಲ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ವ್ಹಿ. ಮುನ್ಯಾಳ , ಡಾ.ಶರಣಯ್ಯ ಗಡೇದ , ಡಾ.ಎಂ.ಎಸ್.ಕೊಪ್ಪದ, ಡಾ.ರವೀಂದ್ರ ಅಂಟಿನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ ಜತ್ತ , ಅರುಣ ಕುಮಾರ ಸೇರಿದಂತೆ ಎಲ್ಲ ತಜ್ಞ ವೈದ್ಯರು ಉಪಸ್ಥಿತರಿದ್ದರು.