RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಶಿಕ್ಷಕರ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲು ನಾಂದಿ ಹಾಡಿದ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ

ಗೋಕಾಕ:ಶಿಕ್ಷಕರ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲು ನಾಂದಿ ಹಾಡಿದ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ 

ಶಿಕ್ಷಕರ ದಿನಾಚರಣೆಯನ್ನು  ವಿಭಿನ್ನವಾಗಿ ಆಚರಿಸಲು ನಾಂದಿ ಹಾಡಿದ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 4 :

ಬೋಧನಾ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಗಳಲ್ಲಿ ಒಂದು ಎಂಬುದನ್ನು ಪರಿಗಣಿಸಿರುವ ದೇಶ ನಮ್ಮದು. ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವುದರ ಜತೆಗೆ ಸರಿ ತಪ್ಪುಗಳನ್ನು ತಿದ್ದುವ, ಅವರಲ್ಲಿನ ಆಸಕ್ತಿಗಳನ್ನು ವೃದ್ಧಿಸುವ ಮತ್ತು ಅವರ ಬದುಕಿಗೆ ಗುರಿ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಮೌಲ್ಯಯುತ ಸಮಾಜ ರೂಪಿಸುವ ಶಿಕ್ಷಕರಿಗೆ ತಮ್ಮದೇ ಆದ ದಿನವೊಂದನ್ನು ಸಂಭ್ರಮಿಸುವ ಅವಕಾಶ ಇದು.

ಶಿಕ್ಷಕರ ಮೇಲಿನ ಜವಾಬ್ದಾರಿಗಳು, ಅವರನ್ನು ವಿದ್ಯಾರ್ಥಿಗಳು ಮತ್ತು ಜನರು ನೋಡುವ ಬಗೆ ಹಾಗೂ ಶಿಕ್ಷಕರ ಮನೋಭಾವಗಳು ಕೂಡ ಈ ಕಾಲಘಟ್ಟದಲ್ಲಿ ಬದಲಾಗಿದೆ. ಆದರೆ ಅವರ ಹೊಣೆಗಾರಿಕೆಗಳು ಬದಲಾಗಿಲ್ಲ. ಅವರ ಜವಾಬ್ದಾರಿ ಮತ್ತು ಒತ್ತಡಗಳು ಇನ್ನಷ್ಟು ಹೆಚ್ಚಾಗಿವೆ. ಇಂತಹ ಅನೇಕ ಕಾರಣಗಳಿಂದಾಗಿ ‘ಶಿಕ್ಷಕರ ದಿನಾಚರಣೆ’ ಮಹತ್ವ ಪಡೆದುಕೊಳ್ಳುತ್ತದೆ.
ಸೆ. 5ರಂದು ಶಾಲೆಗಳಲ್ಲಿನ ವಾತಾವರಣ ಒಂದಷ್ಟು ಬದಲಾಗುತ್ತದೆ. ಮಕ್ಕಳೊಂದಿಗೆ ಶಿಕ್ಷಕರೂ ಮಕ್ಕಳಾಗುತ್ತಾರೆ. ಶಿಕ್ಷಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಮಕ್ಕಳೂ ಶಿಕ್ಷಕರಿಗೆ ವಿವಿಧ ರೀತಿಯಲ್ಲಿ ಗೌರವ ಅರ್ಪಿಸುತ್ತಾರೆ. ಆದರೆ ಈ ಬಾರಿಯೂ ಸಹ  ಶಾಲೆಗಳಲ್ಲಿ ಸಂಭ್ರಮದ ಶಿಕ್ಷಕರ ದಿನಾಚರಣೆ ಸಾಧ್ಯವಾಗುತ್ತಿಲ್ಲ. ಕಳೆದ ಒಂದೂವರೆ ವರ್ಷದಿಂದ ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸುತ್ತಿರುವ ಶಿಕ್ಷಕರಿಗೆ ಈಗಷ್ಟೇ ಕೆಲ ತರಗತಿಗಳು ಪ್ರಾರಂಭವಾದ ಖುಷಿ ಒಂದುಕಡೆ ಆದರೆ  ಇನ್ನೊಂದು ಕಡೆ ಕೊರೋನಾ ಸಂಭವನೀಯ ಮೂರನೇ ಅಲೆಯ ಭಯ. ಈ ಕಾರಣಕ್ಕಾಗಿಯೇ ಶಿಕ್ಷಕರು ಈ ಬಾರಿಯು  ತಮ್ಮ ದಿನವನ್ನು ಸಂಭ್ರಮಿಸುವ ಅವಕಾಶವೂ ಸಿಗುತ್ತಿಲ್ಲ.

ಈ ಅವಕಾಶವನ್ನೇ  ಸದುಪಯೋಗ ಪಡೆದುಕೊಂಡಿರುವ  ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಜಿ‌.ಬಿ ಬಳಗಾರ ಅವರು ತಮಗೆ ವಿದ್ಯಾಬುದ್ದಿಯನ್ನು ದಯಪಾಲಿಸಿದ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಲು, ಧನ್ಯವಾದ ಅರ್ಪಿಸಲು ಹೊಸ ಆಲೋಚನೆ ಮಾಡಿದ್ದಾರೆ ಅದುವೇ “ಥ್ಯಾಂಕ್ಸ್ ಗುರೂಜಿ” ಕಾರ್ಯಕ್ರಮ. ಈ ಕಾರ್ಯಕ್ರಮದಡಿ ತಮಗಿಷ್ಟವಾದ , ತಮಗೆ ಅತೀ ಆತ್ಮೀಯ ಶಿಕ್ಷಕರಿಗೆ ನೆನೆಯುವ ಸುದಿನ ಹಾಗಾದರೆ ಆ ದಿನ ನಾವೆನ್ನು ಮಾಡಬೇಕು ಅವರಿಗೊಂದು ಫೋನ್ ಮಾಡಿ ಒಂದು ಥ್ಯಾಂಕ್ಸ್ ಹೇಳಿದರೂ ಸಾಕು.
ಉಡುಗೊರೆಯ ಗೊಡವೆಗೆ ಹೋಗದಿದ್ದರೂ ಚಿಂತೆ ಇಲ್ಲ ಪ್ರೀತಿ ತುಂಬಿದ ಮನಸ್ಸಿನಿಂದ ಒಂದೇ ಒಂದು ದೀರ್ಘದಂಡ ಪ್ರಣಾಮ ಹೇಳೋಣಾ.ಒಂದು ಗುಲಾಬಿ ಹೂ ನನ್ನ ಗುರುವಿನ ಋಣ ತೀರಿಸಲು ಸಹಕಾರಿ ಆದರೂ ಆಗಬಹುದು.ಕೊನೆ ಪಕ್ಷ ಒಂದು ಮೆಸೇಜ್, ಅವರ ನೆನಪು ಮಾಡಿಕೊಂಡರು ಸಾಕು ಈ ದಿನ ತಮ್ಮೆಲ್ಲ ಶಿಕ್ಷಕರಿಗೆ ಬೇಟಿಯಾಗಿ , ಸಾಧ್ಯವಾಗದಿದ್ದರೆ ಪೋನ ಮಾಡಿ ಅದು ಸಾಧ್ಯವಾಗದಿದ್ದರೆ ಕೊನೆಯ ಪಕ್ಷ ಮೇಸೆಜ ಆದರೂ ಮಾಡಿ ಅವರ ಶ್ರಮಕ್ಕೆ ಒಂದಿಷ್ಟು ಗೌರವ ಸಲ್ಲಿಸಿ ಅವರನ್ನು ನೆನೆದು ಅವರ ಋಣ ತಿರಿಸುವ ಒಂದು ಪುಟ್ಟ ಅಭಿಯಾನದಲ್ಲಿ ಭಾಗಿಯಾಗಿ ಪುನಿತರಾಗೋಣಾ ಎನ್ನುತ್ತಾರೆ ಬಿಇಒ ಬಳಗಾರ .

“ಶಿಕ್ಷಕರು” ಎಂಬ ಪದವನ್ನು ಎರಡು ಆಯಾಮಗಳಲ್ಲಿ ನೋಡಬಹುದು. ಹಿಂದಿನ ಕಾಲದ ಶಿಕ್ಷಕರ ಆದರ್ಶ ಮೌಲ್ಯವೇ ಬೇರೆ ಇಂದಿನ ಕಾಲದ ವಾಣಿಜ್ಯ ಮನೋಭಾವದ ಶಿಕ್ಷಕರ ವೃತ್ತಿ ಧರ್ಮವೇ ಬೇರೆ. ಹೀಗಾಗಿ ಸಮನ್ವಯ ಕಷ್ಟವಾದರೂ ಆದರ್ಶ ಮನೋಭಾವದ ಶಿಕ್ಷಕರ ಬಗ್ಗೆ ನಿಜಕ್ಕೂ ಪ್ರೀತಿಯಿಂದ ಅವರನ್ನು ನೆನೆಯಬೇಕು. ಆ ಕಾರಣಕ್ಕಾಗಿ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಅವರು ಪ್ರಾರಂಭಿ‌ಸಿರುವ ಥ್ಯಾಂಕ್ಸ್ ಗುರುಜೀ ವಿನೂತನ ಅಭಿಯಾನದಲ್ಲಿ ಪಾಲ್ಗೊಂಡು ನಮ್ಮ  ನೆಚ್ಚಿನ ಗುರುಗಳನ್ನು ನೆನೆದು ಅವರಿಗೆ ಒಂದಿಷ್ಟು ಅಭಿನಂದನೆ ಸಲ್ಲಿಸೋಣ.

Related posts: