RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಪುಸ್ತಕಗಳು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸುತ್ತವೆ : ಮುರುಘರಾಜೇಂದ್ರ ಶ್ರೀ

ಗೋಕಾಕ:ಪುಸ್ತಕಗಳು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸುತ್ತವೆ : ಮುರುಘರಾಜೇಂದ್ರ ಶ್ರೀ 

ಪುಸ್ತಕಗಳು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸುತ್ತವೆ : ಮುರುಘರಾಜೇಂದ್ರ ಶ್ರೀ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 6 :

 
ಪುಸ್ತಕಗಳು ಜ್ಞಾನ ವಿಸ್ತಾರಕ್ಕೆ ಪೂರಕವಾಗಿದ್ದು, ವಿಚಾರವಂತಿಕೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಸೋಮವಾರದಂದು ಇಲ್ಲಿನ ಶೂನ್ಯ ಸಂಪಾದನ ಮಠದಲ್ಲಿ ನಗರದ ಉಪ ಕಾರಾಗೃಹದಲ್ಲಿ ಸ್ಥಾಪಿಸಲಾಗಿರುವ ಗ್ರಂಥಾಲಯಕ್ಕೆ ಬೇಕಾಗುವ ಪುಸ್ತಕ ಮತ್ತು ಇತರ ಸಾಮಾಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.

ಜ್ಞಾನವಿಸ್ತಾರಕ್ಕೆ ಪೂರಕವಾಗಿರುವ ಪುಸ್ತಕಗಳನ್ನು ಅಧ್ಯಯನ ಮಾಡಲು ಉಪ ಕಾರಾಗೃಹದಲ್ಲಿ ಇರುವ ವಿಚಾರಣಾಧೀನ ಖೈದಿಗಳು ಮುಂದಾಗಬೇಕು. ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿಯೂ ಪುಸ್ತಕಗಳು ಮಹತ್ತರ ಪಾತ್ರ ವಹಿಸುತ್ತಿದ್ದು, ಸಮಾಜ ಪರಿವರ್ತನೆ ಮತ್ತು ದೇಶದ ಅಭಿವೃದ್ಧಿಯಲ್ಲಿ ಪರಿಣಾಮಕಾರಿ ಸಾಧನಗಳಾಗಿವೆ. ದೇಶ ನಿರ್ಮಾಣಕ್ಕೆ ಶ್ರಮಿಸಿರುವ ಗಾಂಧೀಜಿ, ಅಂಬೇಡ್ಕರ್‌ ಸೇರಿದಂತೆ ಹಲವು ನಾಯಕರು ಪುಸ್ತಕ ಪ್ರೇಮಿಗಳಾಗಿದ್ದರು.
ಆ ದಿಸೆಯಲ್ಲಿ ನಾವೆಲ್ಲರೂ ಪುಸ್ತಕ ಓದುವಂತರಾಗಬೇಕು. ನಗರದ ಉಪ ಕಾರಾಗೃಹದಲ್ಲಿ ಖೈದಿಗಳ ಮನ ಪರಿವರ್ತನೆಗಾಗಿ ಸ್ಥಾಪಿಸಿರುವ ಗ್ರಂಥಾಲಯ ಸಮಾಜಕ್ಕೆ ಮಾದರಿಯಾಗಿದೆ. ಇದರ ಸದುಪಯೋಗದಿಂದ ಖೈದಿಗಳು ಜ್ಞಾನ ಸಂಪಾದನೆ ಮಾಡಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಬೇಕೆಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉಪ ಕಾರಾಗೃಹದ ಅಧೀಕ್ಷಕ ಅಂಬರೀಶ್ ಪೂಜಾರಿ, ಸಿಬ್ಬಂದಿಗಳಾದ ಡಿ.ಎಂ .ಬಿ.ಪಾಟೀಲ, ಸಾಬಪ್ಪ ಮುಶೆಪ್ಪಗೋಳ , ಚನ್ನಬಸವೇಶ್ವರ ವಿದ್ಯಾಪೀಠದ ಆಡಳಿತಾಧಿಕಾರಿ ಅಡಿವೇಶ ಗಮಿಮಠ, ರಾಜೇಶ್ವರಿ ಬೆಟ್ಟದಗೌಡರ, ಶಕುಂತಲಾ ಕಟ್ಟಿ, ವೀಣಾ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts: