ಬೆಳಗಾವಿ:ಕೋಟ್ಯಂತರ ರೂ ಪಂಗನಾಮ ಹಾಕಿದ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಬಂಧನ
ಕೋಟ್ಯಂತರ ರೂ ಪಂಗನಾಮ ಹಾಕಿದ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಬಂಧನ
ಬೆಳಗಾವಿ ಸೆ 18: ಕೋಟ್ಯಂತರ ರೂ. ಗ್ರಾಹಕರ ಠೇವಣಿ ಹಣವನ್ನು ಪಂಗನಾಮ ಹಾಕಿ, ಮರಳಿ ಕೊಡಲಾಗದೆ ತಲೆಮರೆಸಿಕೊಂಡಿದ್ದ ಶ್ರೀ ಸಂಗೊಳ್ಳಿ ರಾಯಣ್ಣ ಹಾಗೂ ಶ್ರೀ ಭೀಮಾಂಬಿಕಾ ಸೋಸೈಟಿಗಳ ಅಧ್ಯಕ್ಷ, ಚಿತ್ರನಿರ್ಮಾಪಕ ಆನಂದ ಅಪ್ಪುಗೋಳ ಅವರನ್ನು ಇಂದು ಮಧ್ಯಾಹ್ನ ಬೆಳಗಾವಿ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ನೂರಾರು ಗ್ರಾಹಕರು ಸತತ ಒಂದು ತಿಂಗಳು ಪ್ರತಿಭಟನೆ ನಡೆಸಿ ಕೊನೆಗೆ ಇತ್ತೀಚಿಗೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದರು. ನಗರದ 10 ನೇ ಜಿಲ್ಲಾ ಕೋರ್ಟ್ ಕೂಡ ಅಪ್ಪುಗೋಳ ನಿರೀಕ್ಷಣಾ ಜಾಮೀನು ಅರ್ಜಿ ಸಹ ತಿರಸ್ಕರಿಸಿತ್ತು. ನಾಳೆ ಪೊಲೀಸರು ಆರೋಪಿ ಆನಂದ ಅಪ್ಪುಗೋಳನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ