ಗೋಕಾಕ:ಶ್ರೀಗಳ ನಡಿಗೆ ಭಕ್ತರ ಮನೆಗಳ ಕಡೆಗೆ ಕಾರ್ಯಕ್ರಮ ಸಮಾಜದಲ್ಲಿ ಕ್ರಾಂತಿಕಾರಿ ಸಂದೇಶ ನೀಡಿದೆ : ಡಾ.ಸಿ.ಕೆ ನಾವಲಗಿ
ಶ್ರೀಗಳ ನಡಿಗೆ ಭಕ್ತರ ಮನೆಗಳ ಕಡೆಗೆ ಕಾರ್ಯಕ್ರಮ ಸಮಾಜದಲ್ಲಿ ಕ್ರಾಂತಿಕಾರಿ ಸಂದೇಶ ನೀಡಿದೆ : ಡಾ.ಸಿ.ಕೆ ನಾವಲಗಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 7:
ಶೂನ್ಯ ಸಂಪಾದನ ಮಠದ ಶ್ರೀಗಳ ನಡಿಗೆ ಭಕ್ತರ ಮನೆಗಳ ಕಡೆಗೆ ಕಾರ್ಯಕ್ರಮ ಸಮಾಜದಲ್ಲಿ ಕ್ರಾಂತಿಕಾರಿ ಸಂದೇಶ ನೀಡಿದೆ ಎಂದು ಡಾ.ಸಿ.ಕೆ ನಾವಲಗಿ ಹೇಳಿದರು.
ಮಂಗಳವಾರದಂದು ನಗರದ ಶೂನ್ಯ ಸಂಪಾದನ ಮಠದ ಆವರಣದಲ್ಲಿ ನಡೆದ ಶ್ರಾವಣ ಮಾಸದ ಪ್ರಯುಕ್ತ ತಿಂಗಳ ಪರ್ಯಂತ ನಡೆದ ಶ್ರೀಗಳ ನಡಿಗೆ ಭಕ್ತರ ಮನೆಗಳ ಕಡೆಗೆ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಶ್ರಾವಣ ಮಾಸದ ನಿಮಿತ್ತ ಮುಸ್ಲಿಂ ಮತ್ತು ಪರಿಶಿಷ್ಟ ಸಮುದಾಯ ಸೇರಿದಂತೆ ಲಿಂಗಾಯತೇತರ ಭಕ್ತರ ಮನೆಗಳಿಗೆ ತೆರಳಿ ವಚನ ಪ್ರಾರ್ಥನೆ , ವಚನ ಚಿಂತನೆ ಮಾಡಿದ್ದು ಇಡೀ ಮನುಕುಲಕ್ಕೆ ಮಾದರಿಯಾಗಿದ್ದು, ಗೋಕಾಕ ಭಾಗದಲ್ಲಿ ಹೊಸ ಆಯಾಮಕ್ಕೆ ನಾಂದಿ ಹಾಡಿದೆ. ಕಳೆದ ಒಂದು ದಶಕದಿಂದ ಶ್ರೀ ಮಠದ ಪೂಜ್ಯರಿಂದ ಗೋಕಾಕ ತಾಲೂಕಿನಲ್ಲಿ ಕ್ರಾಂತಿಕಾರಿ ಕಾರ್ಯಗಳು ನಡೆಯುತ್ತಿವೆ. ಇವರ ಈ ಹೊಸ ನಡೆಯ ಕುರಿತು ಸಮಾಜದಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಅಂತಹ ಚಿಂತನೆಗಳು ನಡೆಯಬೇಕು ಅಂದಾಗ ಮಾತ್ರ ಸತ್ಯ ಹೊರ ಬರಲು ಸಾಧ್ಯ . ಸಮಾಜ ಯಾವುದು ಸತ್ಯ ಯಾವುದೇ ಸುಳ್ಳು ಎಂಬುದನ್ನು ಅರಿಯಲು , ತಿಳಿಯಲು ಸಹಕಾರಿಯಾಗುತ್ತದೆ. ಕ್ರಾಂತಿಕಾರಿ ವಿಚಾರಗಳ ಕುರಿತು ಪರ ವಿರೋಧ ಚರ್ಚೆ ನಡೆಯಬೇಕು. ಶ್ರೀಗಳ ನಡಿಗೆ ಭಕ್ತರ ಕಡೆಗೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿ ಹೊಸ ಸಂಪ್ರದಾಯಕ್ಕೆ ಮಾರ್ಗಸೂಚಿಯಾಗಿದೆ. ಇದು ಪ್ರತಿವರ್ಷ ನಡೆಯಲಿದೆ ಎಂದು ಆಶಿಸಿದರು.
ಸಾನಿಧ್ಯ ವಹಿಸಿದ್ದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಬಟಕುರ್ಕಿ ಚೌಕಿ ಮಠದ ಬಸವಪ್ರಭು ಮಹಾಸ್ವಾಮಿಗಳು, ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಆರ್.ಎಲ್.ಮಿರ್ಜಿ ನಿರೂಪಿಸಿ, ವಂದಿಸಿದರು.