RNI NO. KARKAN/2006/27779|Friday, December 13, 2024
You are here: Home » breaking news » ಬೆಳಗಾವಿ:ಕರ್ತವ್ಯ ನಿರತ ವೈದ್ಯಾಧಿಕಾರಿ ಮೇಲೆ ಪಿಎಸ್ಐ ಧರ್ಪ : ಕಾನೂನು ಕ್ರಮಕ್ಕೆ ಆಗ್ರಹಿಸಿ ವೈದ್ಯರ ಮನವಿ

ಬೆಳಗಾವಿ:ಕರ್ತವ್ಯ ನಿರತ ವೈದ್ಯಾಧಿಕಾರಿ ಮೇಲೆ ಪಿಎಸ್ಐ ಧರ್ಪ : ಕಾನೂನು ಕ್ರಮಕ್ಕೆ ಆಗ್ರಹಿಸಿ ವೈದ್ಯರ ಮನವಿ 

ಕರ್ತವ್ಯ ನಿರತ ವೈದ್ಯಾಧಿಕಾರಿ ಮೇಲೆ ಪಿಎಸ್ಐ ಧರ್ಪ : ಕಾನೂನು ಕ್ರಮಕ್ಕೆ ಆಗ್ರಹಿಸಿ ವೈದ್ಯರ ಮನವಿ

 
ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಸೆ 9

 
ಗೋಕಾಕ ನಗರದ ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರು ಹಾಗೂ ಸಿಬ್ಬಂದಿಯವರ ಮೇಲೆ ಅಸಭ್ಯ ವರ್ತನೆ ಹಾಗೂ ಹಲ್ಲೆ ಮಾಡಲು ಯತ್ನಿಸಿದ್ದ ಗೋಕಾಕ ಶಹರ ಪೊಲೀಸ ಠಾಣೆಯ ಪಿ.ಎಸ್.ಐ ಅಮ್ಮಿನಬಾವಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ ಅಧೀಕ್ಷಕರಿಗೆ ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ ಬೆಳಗಾವಿ ಜಿಲ್ಲಾ ಘಟಕದಿಂದ ಗುರುವಾರದಂದು ಮನವಿ ಸಲ್ಲಿಸಲಾಯಿತು.

ಗೋಕಾಕ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರತರಾದ ಡಾ.ವಿಶ್ವನಾಥ ಬೋವಿ ಹಾಗೂ ಸಿಬ್ಬಂದಿ ವರ್ಗದವರ ಮೇಲೆ ಪಿಎಸ್ಐ ಅಮ್ಮಿನಬಾವಿ ಅವರು ದಿನಾಂಕ ಸೆ 7 ರಂದು ರಾತ್ರಿ 11:45 ರ ಸಮಯದಲ್ಲಿ ಪಾನಮತ್ತರಾಗಿ ಬಂದು ಅವಾಚ್ಯ ಶಬ್ದಗಳನ್ನು ಬಳಸಿ , ಬೈದು , ಅಸಭ್ಯವಾಗಿ ವರ್ತಿಸಿ ಹಲ್ಲೆ ಪ್ರಯತ್ನ ಮಾಡಿರುತ್ತಾರೆ.ಇದರಿಂದ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರ ಮಾನಸಿಕ ಸ್ಥೈರ್ಯ ಕುಂದಿದ್ದು, ರಾತ್ರಿ ಸಮಯದಲ್ಲಿ ಕರ್ತವ್ಯ ನಿರ್ವಹಿಸಲು ಭಯಭೀತರಾಗಿರುತ್ತಾರೆ. ನಮ್ಮನ್ನು ಕಾಪಾಡುವವರೆ ಈ ರೀತಿ ವರ್ತನೆ ಮಾಡಿದರೆ ನಾವು ಯಾರಮುಂದೆ ಅಹವಾಲುಗಳನ್ನು ಹೇಳಿ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಯದ ಸಂಕಷ್ಟದಲ್ಲಿದ್ದಾರೆ. ಮೇಲೆ ಕಾಣಿಸಿದ ವ್ಯಕ್ತಿಯ ವಿರುದ್ಧ ಕಾನೂನು ರೀತಿ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಗೂ ಡಿಎಚ್ಓ ಡಾ.ಮುನ್ಯಾಳ, ಡಾ.ಡುಮ್ಮಗೋಳ, ಡಾ. ಗಡಾದ, ಡಾ.ಕಿಡವಸಣ್ಣನವರ, ಡಾ.ರವೀಂದ್ರ ಅಂಟಿನ, ಡಾ. ಕೋಣಿ, ಡಾ.ಬಾಗಲಕೋಟ, ಡಾ.ಶಾಂತಾ ಇದ್ದರು.

Related posts: