ಗೋಕಾಕ: ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಕ್ರೀಡೆಗಳಲ್ಲಿ ಪಾಲ್ಗೋಳಬೇಕು : ಸರ್ವೋತ್ತಮ ಜಾರಕಿಹೊಳಿ
ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಕ್ರೀಡೆಗಳಲ್ಲಿ ಪಾಲ್ಗೋಳಬೇಕು : ಸರ್ವೋತ್ತಮ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 13 :
ಸೋಲು ಗೆಲುವಿಗೆ ಮಹತ್ವ ನೀಡದೆ ಕ್ರೀಡಾ ಮನೋಭಾವದಿಂದ ಕ್ರೀಡೆಗಳಲ್ಲಿ ಪಾಲ್ಗೋಳುವಂತೆ ಲಕ್ಷ್ಮೀ ಎಜುಕೇಶನ್ ಟ್ರಸ್ಟಿನ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ರವಿವಾರದಂದು ಸಾಯಂಕಾಲ ನಗರದ ಎಲ್ಇಟಿ ಶಿಕ್ಷಣ ಸಂಸ್ಥೆಯಲ್ಲಿ ಇಲ್ಲಿನ ಲಕ್ಷ್ಮೀ ಎಜುಕೇಶನ್ ಟ್ರಸ್ಟ್, ಗೋಕಾಕ ತಾಲೂಕಾ ಪ್ರೇಸ್ ಅಸೋಸಿಯೇಷನ್, ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಇವುಗಳ ಸಂಯುಕ್ತಾಶಯದಲ್ಲಿ ಹಮ್ಮಿಕೊಂಡ ತಾಲೂಕಾ ಮಟ್ಟದ ಚೇಸ್ ಪಂದ್ಯಾವಳಿಯಲ್ಲಿ ವಿಜೇತರಾದ ಸ್ವರ್ಧಾಳುಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಕ್ರೀಡೆಗಳಲ್ಲಿ ಪಾಲ್ಗೊಳುವದರಿಂದ ಸದೃಢರಾಗಿ ಸಾಧಕರಾಗಬಹುದು ಕ್ರೀಡಾ ಕ್ಷೇತ್ರದಲ್ಲೂ ಸಾಕಷ್ಟು ಉದ್ಯೋಗಾವಕಾಶಗಳಿವೆ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆಗೂ ಹೆಚ್ಚಿನ ಮಹತ್ವ ನೀಡಿ ಸಾಧಕರಾಗಿ ದೇಶಕ್ಕೆ ಕೀರ್ತಿ ತನ್ನಿರೆಂದು ಹಾರೈಸಿದರು.
ಶಕೀಲ ಜಕಾತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಶಿಕ್ಷಕ ರಾಮಚಂದ್ರ ಕಾಕಡೆ ನಿರೂಪಿಸಿ, ವಂದಿಸಿದರು.
ವೇದಿಕೆಯಲ್ಲಿ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ , ಮಹಾಂತೇಶ ತಾವಂಶಿ, ಮಹಾವೀರ ಖಾರೆಪಠಾಣ, ಪ್ರತಕರ್ತರಾದ ಸಾದಿಕ ಹಲ್ಯಾಳ ,ಬಸವರಾಜ ದೇಶನೂರ , ಮಲ್ಲಪ್ಪ ದಾಸಪ್ಪಗೋಳ, ಕರವೇಯ ಸಂತೋಷ ಖಂಡ್ರಿ , ಬಸವರಾಜ ಬ್ಯಾಡರಟ್ಟಿ, ಇಮ್ರಾನ್ ಜಕಾತಿ ಇದ್ದರು.