RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸಿ : ಸಂಸದ ಈರಣ್ಣಾ ಕಡಾಡಿ

ಗೋಕಾಕ:ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸಿ : ಸಂಸದ ಈರಣ್ಣಾ ಕಡಾಡಿ 

ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸಿ : ಸಂಸದ ಈರಣ್ಣಾ ಕಡಾಡಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 13 :

 

ಎಲ್ಲರು ತಮ್ಮ ಬದುಕಿನೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸುವಂತೆ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು

ಸೋಮವಾರದಂದು ನಗರದ ರೋಟರಿ ರಕ್ತ ಭಂಡಾರ ಸಭಾಂಗಣದಲ್ಲಿ ಇಲ್ಲಿನ ರೋಟರಿ ಸಂಸ್ಥೆಯವರು ಸಂಸ್ಥೆಯ ವಿದ್ಯಾಸೇತು ಯೋಜನೆಯಡಿಯಡಿಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಮಾಜ ನಮಗೆ ಎಲ್ಲವನ್ನೂ ನೀಡಿದ್ದು ಅದರ ಋಣ ತಿರಿಸುವ ಕಾರ್ಯವಾಗಬೇಕು.ಪ್ರತಿಯೊಬ್ಬರಿಗೂ ಆಹಾರ , ಆರೋಗ್ಯ ವಸತಿಯಷ್ಟೆ ಶಿಕ್ಷಣದ ಅವಶ್ಯಕತೆ ಇದ್ದು, ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡಿ ಬಹು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಸಂಘ, ಸಂಸ್ಥೆಗಳು ಜನರಿಗೆ ಸಹಾಯ ಮಾಡಲು ಮುಂದೆ ಬರಬೇಕು. ಇಂತಹ ಕಾರ್ಯಮಾಡುತ್ತಿರುವ ರೋಟರಿ ಸಂಸ್ಥೆಯವರ ಕಾರ್ಯ ಮಾದರಿಯಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ರೋಟರಿ ಜಿಲ್ಲಾ ಪ್ರಾಂತಪಾಲ ಗೌರೀಶ ಧೊಂಡಾ ಮಾತನಾಡಿ ವಿದ್ಯಾರ್ಥಿಗಳ ಜ್ಞಾನಮಟ್ಟವನ್ನು ಹೆಚ್ಚಿಸುವಲ್ಲಿ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತವೆ.ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ರೋಟರಿ ಸಂಸ್ಥೆ ರಾಜ್ಯಾದ್ಯಂತ ಪುಸ್ತಕಗಳನ್ನು ಉಚಿತವಾಗಿ ನೀಡುತ್ತಿದೆ. ಗೋಕಾಕ ತಾಲೂಕಿನಲ್ಲಿಯೂ ಸ್ಥಳೀಯ ದಾನಿಗಳ ಸಹಾಯದಿಂದ 3,500 ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗದಿಂದ ಪ್ರತಿಭಾವಂತರಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಹೇಳಿದರು.
ಇದೇ ಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಶಿಕ್ಷಕರನ್ನು ಹಾಗೂ ದಾನಿಗಳನ್ನು ಸತ್ಕರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ರೋಟರಿ ಸಂಸ್ಥೆ ಅಧ್ಯಕ್ಷ ಗಣೇಶ ವರದಾಯಿ ವಹಿಸಿದ್ದರು. ವೇದಿಕೆ ಮೇಲೆ ಡಿಡಿಪಿಐ ಗಜಾನನ ಮನ್ನಿಕೇರಿ, ಸಹಾಯಕ ಜಿಲ್ಲಾ ಪ್ರಾಂತಪಾಲ ದಿನೇಶ್ ಕಾಳೆ, ಪ್ರತಿಮಾ ಧೊಂಡಾ ,ದಿಲೀಪ್ ಮೆಳವಂಕಿ, ಸೋಮಶೇಖರ್ ಮಗದುಮ್ಮ ಇದ್ದರು.
ಕಾರ್ಯಕ್ರಮವನ್ನು ಸತೀಶ ನಾಡಗೌಡ ನಿರೂಪಿಸಿದರು.ಮಲ್ಲಿಕಾರ್ಜುನ ಈಟಿ ಸ್ವಾಗತಿಸಿದರು. ಕೆಂಚಪ್ಪ ಭರಮನ್ನವರ ವಂದಿಸಿದರು.

Related posts: