ಗೋಕಾಕ:ದೇವರ ಅನುಗ್ರಹದೊಂದಿಗೆ ಮಾನಸಿಕ ನೆಮ್ಮದಿ ದೊರೆಯುತ್ತದೆ : ಸರ್ವೋತ್ತಮ ಜಾರಕಿಹೊಳಿ
ದೇವರ ಅನುಗ್ರಹದೊಂದಿಗೆ ಮಾನಸಿಕ ನೆಮ್ಮದಿ ದೊರೆಯುತ್ತದೆ : ಸರ್ವೋತ್ತಮ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 14 :
ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೋಳುವದರಿಂದ ದೇವರ ಅನುಗ್ರಹದೊಂದಿಗೆ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ಲಕ್ಷ್ಮೀ ಎಜುಕೇಶನ್ ಟ್ರಸ್ಟಿನ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಮಂಗಳವಾರದಂದು ಇಲ್ಲಿನ ಬಸವ ನಗರದ ವಿರಭದ್ದೇಶ್ವರ ದೇವಸ್ಥಾನದ ಆವರಣದಲ್ಲಿ ವೀರಶೈವ ಲಿಂಗಾಯತ ವೇದಿಕೆಯವರು ಹಮ್ಮಿಕೊಂಡ ವಿರಭದ್ದೇಶ್ವರ ಜಯಂತೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇವರು ಹಾಗೂ ಮಹಾತ್ಮರು ಸರ್ವಧರ್ಮಿಯರಾಗಿದ್ದು, ಎಲ್ಲರು ಅವರನ್ನು ಪೂಜಿಸುವದರೊಂದಿಗೆ ಅವರ ಅನುಗ್ರಹಕ್ಕೆ ಪಾತ್ರರಾಗೋಣ. ಧಾರ್ಮಿಕ ಆಚರಣೆಗೆ ನಮ್ಮ ದೇಶದಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ನಾವೆಲ್ಲರೂ ಹೆಚ್ಚು ಹೆಚ್ಚು ಧಾರ್ಮಿಕ ಆಚರಣೆಗಳನ್ನು ಮಾಡುವದರೊಂದಿಗೆ ನಮ್ಮ ಸಂಸ್ಕಾರವನ್ನು ಮುಂದುವರೆಸೋಣ ಎಂದರು.
ಈ ಸಂದರ್ಭದಲ್ಲಿ ಕಪರಟ್ಟಿ ಕಳ್ಳಿಗುದ್ಧದಿಯ ಶ್ರೀ ಬಸವರಾಜ ಸ್ವಾಮಿಗಳು, ವೇದಿಕೆಯ ಶ್ರೀಕಾಂತ ಪರುಶೇಟ್ಟಿ , ಬಸವರಾಜ ಹಿರೇಮಠ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಸದಸ್ಯರಾದ ಅಭಿಷೇಕ ದಳವಾಯಿ, ಪ್ರಕಾಶ ಮುರಾರಿ ಮುಖಂಡರಾದ ಬಸವರಾಜ ದೇಶನೂರ, ವಿಜಯ ಜತ್ತಿ, ಬಸವರಾಜ ಘೀವಾರಿ, ಮಲ್ಲಿಕಾರ್ಜುನ ಹೊಸಪೇಠ, ಬಸನಗೌಡ ಪಾಟೀಲ ಸೇರಿದಂತೆ ಅನೇಕರು ಇದ್ದರು.