RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಕಲೆಯಿಂದ ಮಕ್ಕಳ ಮನಸು ವಿಕಾಸಹೊಂದುತ್ತದೆ : ಜಯಾನಂದ ಮಾದರ

ಗೋಕಾಕ:ಕಲೆಯಿಂದ ಮಕ್ಕಳ ಮನಸು ವಿಕಾಸಹೊಂದುತ್ತದೆ : ಜಯಾನಂದ ಮಾದರ 

ಕಲೆಯಿಂದ ಮಕ್ಕಳ ಮನಸು ವಿಕಾಸಹೊಂದುತ್ತದೆ : ಜಯಾನಂದ ಮಾದರ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 18 :-

 

ಸಂಗೀತ,ನೃತ್ಯ, ಚಿತ್ರ, ಕಾವ್ಯ ಕಲೆಗಳಿಂದ ಮಕ್ಕಳ ಮನಸ್ಸು ವಿಕಾಸ ಹೊಂದುತ್ತದೆ. ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ಸದಸ್ಯ ಹಾಗೂ ಗೋಕಾಕ ಸಿದ್ಧಾರ್ಥ ಲಲಿತಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಜಯಾನಂದ ಮಾದರ ಹೇಳಿದರು.
ಅವರು ಸಮಿಪದ ಪ್ರಭಾನಗರ ಶಿಂಗಳಾಪುರದಲ್ಲಿ ಶ್ರೀ ಗಣೇಶ ಚತುರ್ಥಿ ನಿಮಿತ್ಯ ಪ್ರಿಯದರ್ಶಿನಿ ಶ್ರೀ ಗಜಾನನ ಯುವಕ ಮಂಡಳ ಹಾಗೂ ಗೆಳೆಯರ ಬಳಗ ಹಮ್ಮಿಕೊಂಡ. ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಸಾಧಕರ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ಥಳೀಯ ಯೋಗ ಮಂಟಪದ ಮಕ್ಕಳಿಂದ ಯೋಗ ಸಂಗೀತ ನೃತ್ಯ ಕಾರ್ಯಕ್ರಮ ಹಾಗೂ ಚಲನಚಿತ್ರ ಮಧುರ ಸಂಗೀತ ಗಾಯನ ಸ್ಪರ್ಧೆ ಜರುಗಿತು.ಇದೇ ಸಂದರ್ಭದಲ್ಲಿ ಸಾಧಕರ ಸನ್ಮಾನದಲ್ಲಿ ಜಯಾನಂದ ಮಾದರ ಆನಂದ ಸೋರಗಾವಿ. ಹಾಲಸಿದ್ದ ಹೆಗಡೆ ಶೋಭಾ ಹತಪಾಕಿ ವಿಠಲ ಸೂರ್ಯವಂಶಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಚಲನಚಿತ್ರ ಮಧುರ ಸಂಗೀತ ಗಾಯನ ಸ್ಪರ್ಧೆಯ ಬೆಳಗಾವಿಯ ಸ್ವಾತಿ ಸುತಾರ ಪ್ರಥಮ ಗೋಕಾಕದ ರಾಘವೇಂದ್ರ ಖಾನಪ್ಪನವರ ದ್ವಿತೀಯ ಬಾಗಲಕೋಟದ ಅಂಜಲಿ ಸಿ.ಕೆ. ಅವರಿಗೆ ತೃತೀಯ ಬಹುಮಾನ ಪಡೆದರು. ಗ್ರಾಮದ ಹಿರಿಯರಾದ. ಸಂಭಾಜಿ ಈರಪ್ಪಗೋಳ. ಗೋಪಾಲ ಜಾಧವ ಮಾಲೇಜಿ ಸೂರ್ಯವಂಶಿ ಖಾನಪ್ಪ ಚಳ್ಳಾಯಿ. ಸುರೇಶ ಹಿರೇಹೊಳಿ ಅಪ್ಪಣ್ಣಾ ಮಾಳಂಗಿ ವಿಠಲ ಕುರಣಿ ಭೀಮಾಪ್ಪಾ ಗೋಟ್ಯಾಗೋಳ ಲಕ್ಷ್ಮಣ ಗುಡದಾರ ಉಪಸ್ತಿತರಿದ್ದರು. ಮಲ್ಲಿಕಾರ್ಜುನ ಇಳಿಗೇರ ನಿರೂಪಿಸಿ ವಂದಿಸಿದು.

Related posts: