ಗೋಕಾಕ:ನಗರದ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ : ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ರಮೇಶ ಅಭಿಮತ
ನಗರದ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ : ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ರಮೇಶ ಅಭಿಮತ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 20 :
ನಗರದ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ ಆಗಿದ್ದು,ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಹಲವಾರು ಯೋಜನೆಗಳನ್ನು ಅನುಷ್ಠಾನ ಗೋಳಿಸಲಾಗುತ್ತಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಸೋಮವಾರದಂದು ನಗರದ ವಾಲ್ಮೀಕಿ ವೃತ್ತದಲ್ಲಿ ನಗರಸಭೆಯ ನಗರೋತ್ಥಾನ ಯೋಜನೆಯಡಿ 16.85 ಕೋಟಿ ರೂಗಳ ಅನುದಾನದಲ್ಲಿ ನಾಕಾ ನಂ 1 ರಿಂದ ಮಾರ್ಕಂಡೇಯ ನದಿಯ ವರೆಗೆ ಎರೆಡು ಬದಿ ಚರಂಡಿ ಮತ್ತು ಪಾದಚಾರಿ ರಸ್ತೆ ಹಾಗೂ ಲೋಕೋಪಯೋಗಿ ಇಲಾಖೆಯಿಂದ 2.50 ಕೋಟಿ ರೂಗಳ ಅನುದಾನದಲ್ಲಿ ವಾಲ್ಮೀಕಿ ವೃತ್ತದಲ್ಲಿ ಶಿವಾಜಿ ವೃತ್ತದವರೆಗೆ ಎರೆಡು ಬದಿ ಚರಂಡಿ ನಿರ್ಮಾಣದ ಕಾಮಗಾರಿಗಳಿಗೆ ಭೂಮಿ ಪೂಜೆ ನೇರವೆರಿಸಿ ಅವರು ಮಾತನಾಡಿದರು.
ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರಕ್ಕೆ ಆಧುನಿಕತೆಯೊಂದಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿ ಮಾದರಿ ನಗರವನ್ನಾಗಿ ಮಾಡಲಾಗುತ್ತಿದೆ. ಶೌಚಾಲಯ, ರಸ್ತೆಗಳು, ಗಟಾರ, ವಿದ್ಯುತ್ ದ್ವೀಪ ಶುದ್ಧ ಕುಡಿಯುವ ನೀರು ಸ್ವಚ್ಛತೆಯೊಂದಿಗೆ ನಗರದ ಸೌಂದರ್ಯಕರಣಕ್ಕೂ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಜನತೆ ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ನಗರದ ಅಭಿವೃದ್ಧಿಗೆ ಸಹಕರಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೆನ್ನವರ, ಸ್ಥಾಯಿ ಸಮೀತಿ ಚೇರಮನ್ ಕೆ.ಎಂ.ಗೋಕಾಕ , ಭೀಮಗೌಡ ಪೋಲೀಸಗೌಡರ, ಸುರೇಶ ಸನದಿ, ಪೌರಾಯುಕ್ತ ಶಿವಾನಂದ ಹಿರೇಮಠ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತ ವ್ಹಿ.ಎಂ ಸಾಲಿಮಠ, ಪರಿಸರ ಅಭಿಯಂತ ಗಜಾಕೋಶ, ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.