ಗೋಕಾಕ:ಯುವಕರು ಒಗ್ಗಟಾಗಿ ಕಾರ್ಯ ನಿರ್ವಹಿಸಬೇಕು : ಡಾ. ಎಸ್ ಬಾಲಾಜಿ
ಯುವಕರು ಒಗ್ಗಟಾಗಿ ಕಾರ್ಯ ನಿರ್ವಹಿಸಬೇಕು : ಡಾ. ಎಸ್ ಬಾಲಾಜಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 1 :
ಯುವ ಸಂಘಟನೆಯ ಕಾರ್ಯಕ್ರಮಗಳು ಹಾಗೂ ಯುವ ಚಟುವಟಿಕೆಗಳನ್ನು ಚುರುಕುಗೋಳಿಸಲು ಯುವಕರು ಒಗ್ಗಟಾಗಿ ಕಾರ್ಯ ನಿರ್ವಹಿಸಬೇಕೆಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜಾಧ್ಯಕ್ಷ ಡಾ. ಎಸ್ ಬಾಲಾಜಿ ಹೇಳಿದರು. ಅವರು ಗುರುವಾರ ದಂದು ನಗರದ ಅಮ್ಮಾಜಿ ಭರತನಾಟ್ಯ ತರಬೇತಿ ಕಾರ್ಯಾಲಯದಲ್ಲಿ ಗೋಕಾಕ ತಾಲೂಕ ಒಕ್ಕೂಟದ ಪ್ರಥಮ ಸಭೆ ಉದ್ಘಾಟಿಸಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಾ ಸರ್ಕಾರ ಯುವಕರಿಗೆ ಇರುವಂತ ನಮ್ಮೂರ ಶಾಲೆ ನಮ್ಮೂರ ಯುವಜನರು ಯೋಜನೆಯ ಹಾಗೂ ವಿವಿಧ ಯೋಜನೆಗಳನ್ನು ಪುನ ಪ್ರಾರಂಭಿಸಲು ಇಲಾಖೆಗಳಿಗೆ ತಿಳಿಸಲಾಗಿದೆ ಸ್ವಾಮಿ ವಿವೇಕಾನಂದರ ತತ್ವ ಸಿದ್ದಾಂತಗಳನ್ನು ಯುವಕರು ರೂಡಿಸಿಕೊಳ್ಳಬೇಕು ಎಂದರು. ಮುಖ್ಯ ಅಥಿತಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷರಾದ ಸಿದ್ದಣ್ಣ ದುರದುಂಡಿ ಮಾತನಾಡಿ ಅರಬಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಯುವ ಜನರ ಸಂಘಟನೆಯನ್ನು ಉತ್ತಮವಾಗಿ ಮಾಡುತ್ತಿದ್ದೆವೆ. ಬೆಳಗಾವಿ ಜಿಲ್ಲೆಯಲ್ಲಿ ಎಲ್ಲಾ ತಾಲೂಕಗಳಲ್ಲಿ ಯುವ ಸಂಘಗಳನ್ನು ಮಾಡಿ ಯುವ ಸಮಾವೇಶವನ್ನು ಮಾಡಲಾಗುವದು. ಗ್ರಾಮಿಣ ಕ್ರೀಡೆಗಳು ಜಾನಪದ ಕಲೆ ಯುವಜನ ಮೇಳ ಹಲವಾರು ಯೋಜನೆಗಳನ್ನು ಸರ್ಕಾರ ರೂಪಿಸಬೇಕು ಎಂದು ಹೇಳಿದರು. ಕನ್ನಡ ಸಾಹಿತ್ಯ ಬಳಗದ ಅಧ್ಯಕ್ಷ ಮಹಾಂತೇಶ ತಾಂವಸಿ ಮಾತನಾಡಿ ಯವ ಜನರು ಒಂದಾಗಿ ಕಾರ್ಯಕ್ರಮಳನ್ನು ಮಾಡಬೇಕು ಎಂದು ಹೇಳಿದರು. ಗೋಕಾಕ ತಾಲೂಕ ಘಟಕದ ಅಧ್ಯಕ್ಷ ವಿಠ್ಠಲ ಕರೋಶಿ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಜಯಾ ಚುನಮರಿ, ಸಂಗೀತಾ ಬನ್ನುರ, ಬಾಲಚಂದ್ರ ಬನವಿ,ಅನೀಲ ತುರಾಯಿದಾರ,ಯಲ್ಲೇಶಕುಮಾರ ಮೇಳವಂಕಿ, ಪೂಜಾ ಕಾಂಬಳೆ, ಲಕ್ಷ್ಮೀಬಾಯಿ ಮಾದರ, ಸೋಮನಾಥ ಹೊಸಟ್ಟಿ,ವಿಠ್ಠಲ ಬಾಪುಕುರಿ ಎಲ್ಲಾ ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು. ಅಕ್ಕಮಹಾದೇವಿ ಮಾದರ ಸ್ವಾಗತಿಸಿದರು. ಶೈಲಾ ಕೋಕ್ಕರೆ ನಿರೂಪಿಸಿ,ವಂದಿಸಿದರು.