ಗೋಕಾಕ:ವ್ಯಸನಮುಕ್ತ ಸಮಾಜ ನಿರ್ಮಾಣದಿಂದ ಆರೋಗ್ಯವಂತ ಬದುಕು ಸಾಧ್ಯ : ಡಿವೈಎಸ್‍ಪಿ ಡಿ ಎಚ್ ಮುಲ್ಲಾ
ವ್ಯಸನಮುಕ್ತ ಸಮಾಜ ನಿರ್ಮಾಣದಿಂದ ಆರೋಗ್ಯವಂತ ಬದುಕು ಸಾಧ್ಯ : ಡಿವೈಎಸ್‍ಪಿ ಡಿ ಎಚ್ ಮುಲ್ಲಾ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 3 :
ವ್ಯಸನಮುಕ್ತ ಸಮಾಜ ನಿರ್ಮಾಣದಿಂದ ನೆಮ್ಮದಿಯೊಂದಿಗೆ ಆರೋಗ್ಯವಂತ ಬದುಕು ಸಾಧ್ಯವೆಂದು ಪ್ರೊಬೆಷನರಿ ಡಿವೈಎಸ್‍ಪಿ ಡಿ ಎಚ್ ಮುಲ್ಲಾ ಹೇಳಿದರು.
ಅವರು, ಶನಿವಾರದಂದು ನಗರದ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಗೋಕಾಕ ಇವರ ಸಂಯುಕ್ತ ಆಶ್ರಯದಲ್ಲಿ ಗಾಂಧಿಜಿ ಜಯಂತಿ ನಿಮಿತ್ಯ ಹಮ್ಮಿಕೊಂಡ ಗಾಂಧಿಸ್ಮøತಿ ಮತ್ತು ವ್ಯಸನಮುಕ್ತ ಸಾಧಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತ, ಎಲ್ಲರು ದುಷ್ಚಟಗಳಿಂದ ದೂರವಿದ್ದು, ಸಮಾಜಮುಖಿ ಜೀವನ ಸಾಗಿಸುವಂತೆ ಹೇಳಿದರು.
ಗಾಂಧೀಜಿಯವರ ಗ್ರಾಮಸ್ವರಾಜ್ಯ ಕನಸನ್ನು ನನಸಾಗಿಸಲು ಶ್ರಮಿಸುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಮಾದರಿಯಾಗಿದೆ. ದುಷ್ಚಟಗಳಿಂದ ದೂರವಿದ್ದು ಇತರರನ್ನು ಪ್ರೇರೆಪಿಸಿ. ಆತ್ಮ ವಿಶ್ವಾಸದಿಂದ ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಂಡು ಒಳ್ಳೆಯ ನಾಗರಿಕರಾಗಿ ವ್ಯಸನಮುಕ್ತ ಹಾಗೂ ಅಪರಾಧ ಮುಕ್ತ ಸಮಾಜ ನಿರ್ಮಿಸುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರನ್ನು ಸತ್ಕರಿಸಲಾಯಿತು.
ವೇದಿಕೆಯ ಮೇಲೆ ಪೌರಾಯುಕ್ತ ಎಸ್ ಎಮ್ ಹಿರೇಮಠ, ಬಿಇಓ ಜಿ ಬಿ ಬಳಗಾರ, ಜನಜಾಗೃತ ವೇದಿಕೆಯ ಸೋಮಶೇಖರ ಮಗದುಮ, ನಾಗಲಿಂಗ ಪೊತೆದಾರ, ಚಿನ್ಮಯ ಹಿರೇಮಠ, ಗ್ರಾಮಾಭಿವೃದ್ಧಿ ಯೋಜನಾ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಇದ್ದರು.
ಸುರೇಶ ಹಾಲವರ ಸ್ವಾಗತಿಸಿದರು. ಸತೀಶ ನಿರೂಪಿಸಿ, ವಂದಿಸಿದರು.