ಗೋಕಾಕ:ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹದ ಅವಶ್ಯಕತೆ ಇದೆ : ಡಿಡಿಪಿಐ ಗಜಾನನ
ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹದ ಅವಶ್ಯಕತೆ ಇದೆ : ಡಿಡಿಪಿಐ ಗಜಾನನ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 3 :
ಇಂದಿನ ಸ್ವರ್ದಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹದ ಅವಶ್ಯಕತೆ ಇದೆ ಎಂದು ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ಹೇಳಿದರು.
ರವಿವಾರದಂದು ನಗರದಲ್ಲಿ ಜೆಸಿಐ ಸಂಸ್ಥೆ ಹಾಗೂ ಸ್ಪೇಸ್ ಗಾರ್ಡನ್ ಇವುಗಳ ಸಂಯುಕ್ತಾಶಯದಲ್ಲಿ ಮೂಡಲಗಿ ಮತ್ತು ಗೋಕಾಕ ತಾಲೂಕಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 1 ಸಾವಿರ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಜೆ.ಸಿ.ಐ ಗೋಕಾಕ ಪ್ರತಿಭಾ ಪುರಸ್ಕಾರ -2021 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಕರು, ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳು ಅವರಿಗೆ ಸಹಕಾರ ನೀಡಿದರೆ ಅವರು ಸಾಧಕರಾಗುತ್ತಾರೆ. ಕರೋನಾ ಸಂಘರ್ಷದ ನಡುವೆ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆ ಮಾಡುತ್ತಿರುವದು ಹೆಚ್ಚಿನ ವಿಷಯವಾಗಿದೆ. ಸಮಾಜ ಸೇವೆಯೊಂದಿಗೆ ಯುವ ಪೀಳಿಗೆಯಲ್ಲಿ ಕೌಶ್ಯಲಗಳನ್ನು ಬೆಳೆಸಿ ಅವರನ್ನು ಪ್ರೋತ್ಸಾಹಿಸಿ ಪ್ರತಿಭಾವಂತರಾಗಿ ಮಾಡುತ್ತಿರುವ ಜೆ.ಸಿ.ಐ ಸಂಸ್ಥೆಯ ಕಾರ್ಯ ಮಾದರಿಯಾಗಿದೆ.
ಗುಣಾತ್ಮಕ ಶಿಕ್ಷಣದಿಂದ ಸದೃಢ ಭಾರತ ನಿರ್ಮಾಣ ಸಾಧ್ಯ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅವಕಾಶಗಳ ಸದುಪಯೋಗ ಪಡಿಸಿಕೊಂಡು ಶಿಕ್ಷಣದೊಂದಿಗೆ ಸಂಸ್ಕಾರವಂತರಾಗಿರಿ ಶ್ರೇಷ್ಠ ನಾಗರಿಕರಾಗಿ ಹೊರಹೊಮ್ಮಬೇಕು.
ವಿದ್ಯಾರ್ಥಿಗಳು ಕರೋನಾ ನಿಯಂತ್ರಣ ನಿರ್ದೇಶನಗಳನ್ನು ಪಾಲಿಸಿ, ಪೌಷ್ಟಿಕ ಆಹಾರದೊಂದಿಗೆ ಆರೋಗ್ಯ ಕಾಪಾಡಿಕೊಳ್ಳಿ ಒಳ್ಳೆಯ ಆರೋಗ್ಯದಿಂದ ಸಾಧನೆ ಸಾಧ್ಯ . ಈ ಬಾರಿ ಉತ್ತಮ ಫಲಿತಾಂಶ ಬಂದಿದ್ದು ಸಂತಸ ತಂದಿದೆ. ವಿದ್ಯಾರ್ಥಿಗಳು ಮುಂದೆಯೂ ಇದೇ ರೀತಿ ಸಾಧನೆ ಮಾಡುತ್ತಾ ತಮ್ಮ ಭವಿಷ್ಯ ಉಜ್ವಲಗೋಳಿಸಿ ಕೊಳ್ಳಬೇಕೆಂದು ಹಾರೈಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಬಾಗೋಜಿಕೊಪ್ಪನ ಶ್ರೀ ಡಾ.ಶಿವಲಿಂಗ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ.ಸಿ ರಜನಿಕಾಂತ್ ಮಾಳೋದೆ ವಹಿಸಿದ್ದರು.
ವೇದಿಕೆಯಲ್ಲಿ ಬಿಇಒಗಳಾದ ಜಿ.ಬಿ.ಬಳಗಾರ , ಅಜೀತ ಮನ್ನಿಕೇರಿ, ಪೌರಾಯುಕ್ತ ಶಿವಾನಂದ ಹಿರೇಮಠ, ವಿಠಲ ತಡಸಲೂರ, ಶ್ರೀಮತಿ ಭಾಗಿರಥಿ ನಂದಗಾಂವಿ , ಶ್ರೀಮತಿ ಧರಣಿದೇವಿ, ಶ್ರೀಮತಿ ಸುಶ್ಮಿತಾ ಕಿಶೋರಭಟ್ಟ ಜೆ.ಸಿ. ವಿಷ್ಣು ಲಾತೂರ , ಜೆ.ಸಿ. ಶೇಖರ ಉಳ್ಳೇಗಡ್ಡಿ, ಸುವೀರ ತುಪ್ಪದ , ಅಮಿತ್ ಜಾಧವ ಸೇರಿದಂತೆ ಇತರರು ಉಪಸ್ಥಿತರಿದ್ದರು.