RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಬಿಜೆಪಿಯನ್ನು ವಿಶ್ವದ ಅತಿದೊಡ್ಡ ಪಕ್ಷವನ್ನಾಗಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ : ಸಂಸದ ಈರಣ್ಣಾ ಕಡಾಡಿ

ಗೋಕಾಕ:ಬಿಜೆಪಿಯನ್ನು ವಿಶ್ವದ ಅತಿದೊಡ್ಡ ಪಕ್ಷವನ್ನಾಗಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ : ಸಂಸದ ಈರಣ್ಣಾ ಕಡಾಡಿ 

ಬಿಜೆಪಿಯನ್ನು ವಿಶ್ವದ ಅತಿದೊಡ್ಡ ಪಕ್ಷವನ್ನಾಗಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ : ಸಂಸದ ಈರಣ್ಣಾ ಕಡಾಡಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 3 :

 

ಬಿಜೆಪಿ ಎಂದಿಗೂ ಗೆಲ್ಲದ ರಾಜ್ಯಗಳಲ್ಲಿ ಪಕ್ಷವನ್ನು ಗೆಲ್ಲಿಸಿದ, ಬಿಜೆಪಿಯನ್ನು ವಿಶ್ವದ ಅತಿದೊಡ್ಡ ಪಕ್ಷವನ್ನಾಗಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ ಎಂದು ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.

ರವಿವಾರದಂದು ಪ್ರಧಾನಿ ಮೋದಿ ಅವರ ಜನ್ಮದಿನ ಅಂಗವಾಗಿ ನಡೆಯುತ್ತಿರುವ ಸೇವಾ ಸರ್ಮಪಣಾ ಕಾರ್ಯಕ್ರಮದಲ್ಲಿ ನಗರದ ಸರಕಾರಿ ಆಸ್ಪತ್ರೆಯಲ್ಲಿ ರೈತ ಮೋರ್ಚಾ ವತಿಯಿಂದ ಹಮ್ಮಿಕೊಂಡ ರೋಗಿಗಳಿಗೆ ಹಣ್ಣು – ಹಂಪಲ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರದಾನಿ ಹುದ್ಧೆ ಅಲಂಕರಿಸಿದಾಗಿನಿಂದ ಹಲವು ಯೋಜನೆಗಳು ಹಮ್ಮಿಕೊಂಡು ದೇಶವನ್ನು ಸುಧಾರಣೆ ಮಾಡಿ ತಮ್ಮ ದಿಟ್ಟನಿರ್ಧಾರಗಳ ಮೂಲಕ ಜನಸಾಮಾನ್ಯರ ಮನ ಗೆದ್ದಿದ್ದಾರೆ. 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾದ ಮೋದಿ ಅವರು 2021ರವರೆಗೂ ಅವರು ಸತತ 20 ವರ್ಷಗಳ ಕಾಲ ಅಧಿಕಾರದಲ್ಲಿದ್ದಾರೆ ಈ 20 ವರ್ಷದ ಅಧಿಕಾರವದಿಯಲ್ಲಿ ಇಡೀ ಜಗತ್ತು ಭಾರತವನ್ನು ಗೌರವಿಸುವ ಮಟ್ಟಕ್ಕೆ ತಲುಪಿಸಿದ್ದಾರೆ. ಇಂತಹ ಮಹಾನ ನಾಯಕನ ಜನ್ಮ ದಿನಾಚರಣೆ ಅಂಗವಾಗಿ ಸೇವಾ ಸರ್ಮಪಣಾ ಅಭಿಯಾನದಡಿ ಇಡೀ ದೇಶದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಜನ ಸೇವೆ ಮಾಡುತ್ತಿರುವದು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಬಡವರ, ಶೋಷಿತರ ಪರ ನಿಂತು ಕಾರ್ಯಮಾಡುವ ಪಕ್ಷ ಬಿಜೆಪಿಯಾಗಿದೆ ಈ ಪಕ್ಷದಲ್ಲಿ ಕೆಲಸ ಮಾಡುವುದೇ ಒಂದು ಸುಧೈವ ಎಂದು ಸಂಸದ ಕಡಾಡಿ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮನ್ನವರ , ಗ್ರಾಮೀಣ ಘಟಕದ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ರೈತ ಮೋರ್ಚಾ ಅಧ್ಯಕ್ಷ ಸುರೇಶ ಪತ್ತಾರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಶಾಸಕರ ಆಪ್ತ ಸಹಾಯಕ ಸುರೇಶ ಸನದಿ, ಶಾಮಾನಂದ ಪೂಜೇರಿ, ಶಶಿಧರ ದೇಮಶೆಟ್ಟಿ, ಶಕೀಲ ಧಾರವಾಡಕರ , ಹನುಮಂತ ದುರ್ಗಣ್ಣವರ ಸೇರಿದಂತೆ ನಗರಸಭೆ ಸದಸ್ಯರು ಹಾಗೂ ಬಿಜೆಪಿ ವಿವಿಧ ಮೋರ್ಚಾಗಳ ಅಧ್ಯಕ್ಷರುಗಳು , ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts: